ಹೊಸತನದ ಹೊಸ ಜೋಡಿ
ಮದುವೆ ದಿಬ್ಬಣ ಹೇರಿ
ಕುಳಿತಿರುವವರು ಇಲ್ಲಿ
ಹಾರೈಸುತ್ತಿರುವೆವು ನಾವು ಅಲ್ಲಿ
ತಂದೆ ತಾಯಿಗೆ ನಮಿಸಿ
ಸಹೋದ್ಯೋಗಿ ಸಂಬಂಧಿಗಳ ಕರೆಸಿ
ಒಳ್ಳೆ ಊಟ ಹಾಕಿಸಿ
ಎತ್ತಿದ್ದರೂ ನಮಗೆ ಆರತಿ
ಬಂದವರು ತಂದಿಹರು ಉಡುಗೊರೆಗಳನ್ನು ಇಲ್ಲಿ
ಅವರವರೇ ನೋಡುತ್ತಿವರು
ಹೊಸ ಸಂಬಂಧಗಳನ್ನು ಅಲ್ಲಿ
ತಾಂಬೂಲ ಕೈಯಾಗ ಹಿಡಿದು
ಹೋಗುವಾಗ ಹೇಳುವರು
ನೂರು ವರ್ಷ ಸುಖವಾಗಿ
ಬಾಳಿ ಎಂದು ನಮ್ಮನ್ನು ಅರಸಿ.
-ಚಂದ್ರಶೇಖರಚಾರಿ ಎಂ
ಶಿಕ್ಷಕರು,ವಿಶ್ವಮಾನವ ಪ್ರೌಢಶಾಲೆ ಸೀಬಾರ ಗುತ್ತಿ ನಾಡು ಚಿತ್ರದುರ್ಗ