ಯಾದಗಿರಿ:ಗುರುಮಿಟಕಲ್ ಪಟ್ಟಣದ ಲಕ್ಷ್ಮೀ ನಗರ,ಗಂಗಾನಗರ,ಗಡ್ಡಿ ಮಹಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ಶ್ರೀ ಶಶಿಧರ್ ಕೋಸುಂಬೆ ಅವರು ಭೇಟಿ ನೀಡಿ,ಸ್ವಚ್ಛತೆ,ಮೊಟ್ಟೆ ವಿವಿರ,ಆಹಾರ ಕುರಿತು ಪರಿಶೀಲಿಸಿದರು.
ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಚರಂಡಿ, ಮುಳ್ಳು ಜಾಲಿ ಕಂಟಿ ಇದ್ದು,ಮಕ್ಕಳ ಸುರಕ್ಷತೆಗೆ ಸ್ವಚ್ಛವಿಡಲು ತಿಳಿಸಿದ ಅವರು,ಅಂಗನವಾಡಿಗಳಲ್ಲಿ ಪೆನ್ಸಿಲ್ ನಿಂದ ದಾಖಲಾತಿಗಳು ಬರೆಯುತ್ತಿರುವುದು,ದಾಖಲಾತಿಗಳು ಮನೆಯಲ್ಲಿ ಇಡುವುದು ಸೂಕ್ತ ಕ್ರಮವಲ್ಲ ಎಂದರು.
ಅಂಗನವಾಡಿಗಳಿಗೆ 40-50 ಗ್ರಾಂ ತೂಕದ ಮೊಟ್ಟೆ ವಿತರಣೆ ಮಾಡಬೇಕು,ಆದರೆ ಇಲ್ಲಿಯ ಮೊಟ್ಟೆಗಳು 25-30 ಗ್ರಾಂ ಇವೆ ಜೊತೆಗೆ ಕಳೆದ ತಿಂಗಳು ಮೊಟ್ಟೆಗಳ ಉಳಿತಾಯ ತೋರಿಸಿದ್ದು,ಮುಂದಿನ ತಿಂಗಳು ನಮೂದಿಸಿಲ್ಲ,ಕಳೆದ 50 ದಿನಗಳ ಆಹಾರ ಸರಬರಾಜು ಆಗಿರುವ ಧಾನ್ಯಗಳ ಸ್ಟಾಕ್ ರೇಜಿಸ್ಟರ್ ನಲ್ಲಿ ಏರುಪೇರು ಕಂಡುಬಂದ ಹಿನ್ನಲೆ ಸ್ಥಳದಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗುವಂತೆ ಅವರು ಸೂಚಿಸಿದರು.
ನಗರದ ಕ್ರೀಡಾಂಗಣದ ಕ್ರೀಡಾ ವಸತಿ ನಿಲಯ, ಯಾದಗಿರಿ ತಾಲ್ಲೂಕಿನ ಅರಕೇರಾದ ಕಸ್ತೂರ ಬಾ ವಸತಿ ಶಾಲೆ,ಗಂಜನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ,ಗುರುಮಿಟಕಲ್ ಸಮುದಾಯ ಆರೋಗ್ಯ ಕೇಂದ್ರ,ಗುರುಮಿಟಕಲ್ ತಾಲ್ಲೂಕಿನ ಬಾಲಚೇಡ್ ಎಪಿಜೆ ಅಬ್ದುಲ್ ಕಲಾಂ ಮಾದರಿ ವಸತಿ ಶಾಲೆ,ಅಲ್ಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವರದಿ:ಶಿವರಾಜ ಸಾಹುಕಾರ ವಡಗೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.