ಡಿಸೆಂಬರ್ 1ರ ವಿಶ್ವ ಏಡ್ಸ್ ವಿಮೋಚನಾ ದಿನ
“ಏಡ್ಸ್ ಎಂಬ ಮಾರಿ “
ಕಾಮದಾಹದ ಕ್ಷಣ ಸೋಲುವುದು ಮನ,
ತಿಳಿಯದೆ ಒಳಗಿನ ಊರಣ,
ದುಡುಕಿನಿಂದಾಗುವುದು ಇಬ್ಬರ ಮಿಲನ, ತುತ್ತಾದಿತು ರೋಗಕ್ಕೆ ನಿಮ್ಮ ಪ್ರಾಣ,
ಖರ್ಚಾದರೂ ಆಗಲಿ ಹಣ,ಆದರೂ ನೀನಾಗುವುದಿಲ್ಲ ರೋಗದಿಂದ ಗುಣ,
ನಿನ್ನನ್ನು ಮೆಟ್ಟಿಲು ಹೇಸಿಗೆ ಪಡುವರೋ ಜಾಣ,
ನೀ ನಂಬಿದ ನಿನ್ನ ಜನ
ಚಿಕ್ಕ ವಯಸ್ಸಿನಲ್ಲಿ ನೀನಾಗುವೆ ಸ್ಮಶಾನಕ್ಕೆ ಹೆಣ, ಹೆಚ್.ಐ.ವಿ. ಎಂಬ ನಾಯಿ ಕಚ್ಯಾವು ಎಚ್ಚರ,
ಕ್ಷಣ ಕಾಲ ಮೈ ಮರೆತು ಹುಚ್ಚನಾದಿಯೋ ನೀ ಎಚ್ಚರ,
ಮುಚ್ಚು ಮರಿ ಬೇಡ ಸಂಪರ್ಕಿಸು ನೀ ವೈದ್ಯರ, ಏಡ್ಸ್ ರೋಗದಿಂದ ನೀನಾಗು ಬಹುದೂರ, ತುಚ್ಚವಾಗಿ ಕಾಣದಿರು ನನ್ನ ಮಾತ ಜೀವನದಲ್ಲಿ ಇರಲಿ ಎಚ್ಚರ,
ದೇಹವನ್ನು ಸೇರಿದರೆ ಏಡ್ಸ್ ಎಂಬ ಮಾರಿ, ಹೋದಿತುನಿನ್ನ ಮರ್ಯಾದೆ ಗಾಳಿಗೆ ತೂರಿ,
ಗಟ್ಟಿ ಹಿಡಿ ನಿನ್ನ ಮನಸು ಹೋಗುವುದು ಜಾರಿ, ಹಿಡಿತ ತಪ್ಪುವ ಕ್ಷಣ ಇಷ್ಟದೇವರ ಕರಿ,
ಬೇಡು ಅವನಲ್ಲಿ ಪ್ರತಿ ಕ್ಷಣವೂ ಪರಿ ಪರಿ ಅಮೂಲ್ಯವಾದ ಈ ಮಾನವ ಜನ್ಮ,
ಇದ ಕಳೆದುಕೊಳ್ಳ ಬೇಡಲೋ ತಮ್ಮ,
ಎಂತಹ ಕಷ್ಟದಲ್ಲಿ ಭೂಮಿಗೆ ಕರೆ ತಂದರು ಅಪ್ಪ-ಅಮ್ಮ,ಯೌವ್ವನದಲ್ಲಿ ಸಹಜವಾದದು ಕಾಮ, ಅದ ಉಡುಗರೆಯಾಗಿ ಕೊಟ್ಟನು ಬ್ರಹ್ಮ, ದುರುಪಯೋಗ ಮಾಡಿಕೊಳ್ಳಬೇಡಲೋ ತಮ್ಮ, ದೇಹದ ಮೇಲೆ ಬಂದಿತು ಏಡ್ಸ್ ಎಂಬ ಗುಮ್ಮ. ಚಪಾಲದಿಂದಯಿತು ಬದುಕು ವಿಫಲ,ಮೋಹಕ್ಕೆ ಸಿಲುಕಿ ಸೇರುವೇ ನೀ ಪಾತಾಳ,
ಕಾಮದ ಕಣ್ಣಿಗೆ ಕಾಣುವುದು ದೇಹದ ಬಣ್ಣ ಪಳ ಪಳ,
ಏಡ್ಸ್ ಬಂದ ಮೇಲೆ ಮರಗುತ್ತಾ ಅಳುವೇ ನೀ ಗಳ ಗಳ
ನೀ ಸತ್ತ ಮೇಲೆ ನಿನ್ನದು ಎಂಬುವುದೇನಿದೆ? ಎಲ್ಲವೂ ಜಳಾ ಜಳ,
ರೋಗದ ಭಾದೆಗೆ ಪ್ರತಿ ನಿತ್ಯವೂ ಜೀವನ ಜಿಗುಪ್ಸೆಯಿಂದ ತಳಮಳ,
ಇದ್ದವರ ಒಡಲಿಗೆ ಕಿಚ್ಚನಚ್ಚಿ ಮರೆಯಾಗಿ ಹೋಗದಿರು ಮರುಳ
ರಚನೆ:ಶ್ರೀ ರಂಗಪ್ರಿಯಾ ರವೀಂದ್ರ.ಸಾ:ಹಳ್ಳೂರ. ತಾ:ರಟ್ಟೀಹಳ್ಳಿ.ಜಿ:ಹಾವೇರಿ.ಮೋ:9686336636