ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಕೇಂದ್ರ ಉದ್ಘಾಟನೆ
ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಸುತ್ತ ಮುತ್ತಾ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು ಹಳೆ ಮಾರ್ಟಳ್ಳಿ ಭಾಗದಲ್ಲಿ ಸ್ವಯಂ ಉದ್ಯೋಗ ಕೇಂದ್ರವನ್ನು ಜನ ಧ್ವನಿ ವೆಂಕಟೇಶ್ ಹಾಗೂ ಭಾರತೀಯ ಜನತಾ ಪಕ್ಷದ ಓಬಿಸಿ ಮೋರ್ಜಾ ವತಿಯಿಂದ ನೂತನವಾಗಿ ಪ್ರಾರಂಭ ಮಾಡಿದರು,
ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡು ಜೀವನ ನೆಡಸಲು ಸ್ವಯಂ ಉದ್ಯೋಗಿಗಳಾಗ ಬೇಕೆನ್ನುವ ದಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಒಬಿಸಿ ಮೊರ್ಜ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಬಿ ವೆಂಕಟೇಶ್ ರವರು ಕುರುವಿಲ್ ಫೌಂಡೇಶನ್ ಸಹಯೋಗದೊಂದಿಗೆ ಉದ್ಯೋಗ ಸೃಷ್ಟಿ ಮಾಡುವ ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡಿದ್ದಾರೆ,
ಈ ಸಂದರ್ಭದಲ್ಲಿ ಮಾತನಾಡಿದ ಬಿ ವೆಂಕಟೇಶ್ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಂಡರೆ ಜೀವನದಲ್ಲಿ ಮುಂದೆ ಬರಬಹುದು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಭವಿಷ್ಯಕ್ಕೆ ದಾರಿದೀಪವಾಗ ಬಹುದು, ಹಳೆ ಮಾರ್ಟಳ್ಳಿ ಭಾಗದಲ್ಲಿ ಹೆಚ್ಚಿನ ಜನರು ಕಾಡಂಚಿನಲ್ಲಿ ವಾಸ ಮಾಡುತ್ತಿರುವುದರಿಂದ ಅವರು ಸ್ವಯಂ ಉದ್ಯೋಗಿಗಳು ಆಗಬೇಕು, ಹಾಗೆ ಇಲ್ಲಿನ ಜನತೆ ನಗರ ಪಟ್ಟಣಕ್ಕೆ ಬಂದು ಕೆಲಸ ಮಾಡಿ ಬರುವುದು ಕಷ್ಟವಾಗುತ್ತದೆ ಆದ್ದರಿಂದ ಈ ಭಾಗದಲ್ಲಿ ಸ್ವಯಂ ಉದ್ಯೋಗ ಕಲಿಕೆ ಕೇಂದ್ರವನ್ನು ಪ್ರಾರಂಭ ಮಾಡುತ್ತಿದ್ದೇವೆ ಇಲ್ಲಿ ಕೆಲವೊಂದು ಮನೆಯಲ್ಲೇ ಮಾಡಿ ಮಾರಾಟ ಮಾಡಬಹುದಾದ ಕೆಲವು ಗೃಹ ಉಪಯೋಗಿ ವಸ್ತುಗಳನ್ನ ತಯಾರು ಮಾಡುವುದು ಹಾಗೂ ಅದರ ಕಚ್ಚಾ ವಸ್ತುಗಳನ್ನ ನೀಡುತ್ತೇವೆ 7 ದಿನ ತರಬೇತಿ ಪಡೆದುಕೊಂಡು ನಂತರ ಮನೆಯಲ್ಲಿ ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡಬಹುದು ಇದರ ಉಪಯೋಗವನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮಹಿಳಾ ಮಂಡಲ ಅಧ್ಯಕ್ಷೆ ವೀಣಾ, ಕುರಟ್ಟಿ ಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಿ, ಮುಖಂಡ ನಟರಾಜ್ ಇನ್ನಿತ್ತರು ಇದ್ದರು…ವರದಿ ಉಸ್ಮಾನ್ ಖಾನ್ ಬಂಡಳ್ಳಿ.