ಗದಗ ನಗರದಲ್ಲಿ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಆಗಮಿಸಿದ್ದರು ನಗರದ ಪ್ರಮುಖ ಬೀದಿಯಲ್ಲಿ ಬೈಕ್ ರ್ಯಾಲಿ ಮೂಲಕ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ನಂತರ ನಗರದ ಮುನ್ಸಿಪಲ್ ಕಾಲೇಜು ಆವರದಲ್ಲಿ ಸಮಾರಂಭ ಜರುಗಿತು.ರಾಜ್ಯಾಧ್ಯಕ್ಷರು ಮಾತನಾಡಿ ಈ ಕಾಂಗ್ರೇಸ್ ಸರ್ಕಾರದ ಬಿಟ್ಟಿ ಯೋಜನೆಗಳಿಂದ ಸಾಮಾನ್ಯ ಜನರ ಜೀವನದ ಮೇಲೆ ತುಂಬಾ ಪರಿಣಾಮ ಬೀರಿದೆ ಮತ್ತು ಬರಗಾಲದಿಂದ ರೈತರು ಸಂಕಷ್ಟದ ಪರಿಸ್ಥಿಯಲ್ಲಿದ್ದಾರೆ. ಆದರೆ ಈ ಕಾಂಗ್ರೇಸ್ ಸರ್ಕಾರ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿ ರೈತರ ಮತ್ತು ಇತರೆ ಅಭಿವೃದ್ಧಿ ಕೆಲಸದ ಕಡೆ ನಿರ್ಲಕ್ಷ ವಹಿಸುತ್ತಿದೆ ನೀವೆಲ್ಲಾ ಎಚ್ಚೆತ್ತುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕು ಅಂದಾಗ ನಮ್ಮ ದೇಶದ ರೈತರು,ವಿದ್ಯಾರ್ಥಿಗಳಿಗೆ ಉದ್ಯೋಗ,ಬಡವರ ಏಳಿಗೆ ಸಾಧ್ಯ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮಾನ್ಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಡಾ.ಚಂದ್ರು ಕೆ. ಲಮಾಣಿ ಅವರು ಭಾಗವಹಿಸಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕರ್ತರ ಬಹಿರಂಗ ಸಮಾರಂಭದಲ್ಲಿ,ಮಾಜಿ ಸಚಿವರು ಹಾಲಿ ಶಾಸಕರಾದ ಶ್ರೀ.ಸಿ. ಸಿ ಪಾಟೀಲಯವರು ಸಂಸದರಾದ,ಶ್ರೀ.ಪಿ. ಸಿ ಗದ್ದಿಗೌಡ್ರ ಅವರು ಮಾಜಿ ಶಾಸಕರಾದ,ಶ್ರೀ ಕಳಕಪ್ಪ ಬಂಡಿಯವರು ವಿಧಾನ ಪರಿಷತ್ ಸದಸ್ಯರಾದ,ಶ್ರೀ. ಎಸ್.ವಿ.ಸುಂಕನೂರ,ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಲಿಂಗನಗೌಡರ,ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ, ಮಂಡಲದ ಅಧ್ಯಕ್ಷರು,ಉಪಾಧ್ಯಕ್ಷರು,ಬೂತ್ ಅಧ್ಯಕ್ಷರು,ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ