ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬಡತನದ ಬೇಗೆಯಲ್ಲಿ ಹೂವಾಗಿ ಅರಳಿದ ಸುನೀಲ ದಂಗಾಪೂರ

ಬಡತನ ಒಂದು ಶಾಪವಲ್ಲ ಅದು ಜೀವನದಲ್ಲಿ ಬರುವ ಒಂದು ಪರೀಕ್ಷೆಯೆಂದರೆ ತಪ್ಪಾಗಲಾರದು. ಸರ್.ಎಂ.ವಿಶ್ವೇಶ್ವರಯ್ಯಯವರು ಕೋಲಾರದ ಮುದ್ದೇನ ಹಳ್ಳಿಯಿಂದ ನಡೆದುಕೊಂಡು ಬೆಂಗಳೂರಿಗೆ ನಡೆದು ಬಂದು ಶಿಕ್ಷಣ ಪಡೆದು ಇಂಜಿನಿಯರಿಂಗ್ ಪಡೆದ ಮೇಧಾವಿ ಸರ್.ಎಂ.ವಿಶ್ವೇಶ್ವರಯ್ಯ ಹೆಸರು ಇಂದಿಗೂ ಸಹ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದ್ದಾರೆ.ಕಲಿಯುವ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ.ಇದಕ್ಕೆ ಸಾಕ್ಷಿಯೆಂದರೆ ಸುನೀಲ ದಂಗಾಪೂರ ಇವರು ಒಬ್ಬರು ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲೂಕಿನ ಹೇರೂರ (ಬಿ) ಎಂಬ ಗ್ರಾಮದಲ್ಲಿ ಜನಿಸಿದರು ತಂದೆ ಬಾಬು ತಾಯಿ ಅನುಸುಬಾಯಿ ದಂಪತಿಗಳ ಮೂರನೇಯ ಮಗ ಸುನೀಲ ಬಡತನದ ಬೇಗೆಯಲ್ಲಿ ಬೆಂದು ಹೊಟ್ಟೆಪಾಡಿಗೆ ಮುoಬಯಿಗೆ ಹೋಗಿ ಕೂಲಿ ಕೆಲಸಕ್ಕೆ ಸೇರಿದರು.ತನ್ನ ಹಾಗೆ ತನ್ನ ಮಕ್ಕಳ ಜೀವನ ಹಾಳಾಗಬಾರದು ಎಂದು ವಿಚಾರ ಮಾಡಿದ ತಂದೆ ತಾಯಿಗಳು ಮುಂಬೈಯಲ್ಲಿರುವ ಮರೋಳ ಮಹಾ ನಗರ ಪಾಲಿಕೆಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದರು ಅಂತು ಇಂತೂ ಪ್ರಾಥಮಿಕ ಶಿಕ್ಷಣ ಮುಗಿಸಿದರು ಮನೆಯ ಆರ್ಥಿಕ ಸಮಸ್ಯೆಗಳಿಂದ ಶಾಲೆ ಬಿಟ್ಟು ದಿನಗೂಲಿ ಕೆಲಸ ಮಾಡುತ್ತ ಇದ್ದರು ಮುಂದೆಯೂ ಶಿಕ್ಷಣ ಮುಂದುವರೆಸ
ಬೇಕೆಂಬ ಆಶೆ ಸದಾ ಅವನಿಗೆ ಕಾಡುತ್ತಿತ್ತು ಹಾಗೆ ನನ್ನ ಜೀವನ ಇಷ್ಟೆ ನಿರಾಶೆಯಲ್ಲಿ ಕಾಲ ಕಳೆಯುತ್ತಿರುವಾಗಲೇ ಆಶಾ ಕಿರಣವಾಗಿ ಮುಂದೆ ಬಂದವರು ಶಿಕ್ಷಕರಾದ ಮಲ್ಲಿಕಾರ್ಜುನ ಬಡಿಗೇರ ಮತ್ತು ಸಿದ್ದರಾಮ ದಸಮಾನೆ ಸರ್ ಅವರ ಸಹಾಯದಿಂದ ಗುರುನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ಪ್ರವೇಶ ಪಡೆದನು. ಬೆಳಗ್ಗೆ ಕೂಲಿನಾಲಿ ಮಾಡಿ ರಾತ್ರಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದನು.
ಶಾಲೆಯ ಸಂಚಾಲಿತ ಬಿಲ್ಲವರ ಅಶೋಸಿಯೇಶನ್ ಇದರ ಪದಾಧಿಕಾರಿಗಳ ಸಹಕಾರದಿಂದ ಶಾಲೆಯ
ಗುರುಗಳ ಮಾರ್ಗದರ್ಶನದಿಂದಲೇ 2016 ರಲ್ಲಿ ನಡೆದ ಮಹಾರಾಷ್ಟ್ರದ ಬೋರ್ಡ್ SSLC ಪರೀಕ್ಷೆಯಲ್ಲಿ ಶೇ 88.8 ಪ್ರತಿಶತ ಅಂಕಗಳನ್ನು ಪಡೆದು ಮುಂಬೈಯ ಎಲ್ಲ ಮಾಧ್ಯಮದ ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಅತೀ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಜಾಣ ವಿದ್ಯಾರ್ಥಿ ಅಷ್ಟೇ ಅಲ್ಲದೇ ಮುಂಬೈ ಶಿಕ್ಷಕ ಶಾಸಕರಾದ ಸನ್ಮಾನ್ಯ ಕಪಿಲ್ ಪಾಟೀಲ್ ಮತ್ತು ಕೇಂದ್ರ ಮಾಜಿ ಸಚಿವ ಸನ್ಮಾನ್ಯ ಪ್ರಕಾಶ ಜಾವಡೇಕರ್ ಅವರು ಮುಂಬೈಯ ದಾದರನಲ್ಲಿ ಸತ್ಕಾರ ನೀಡಿ ಶುಭ ಹಾರೈಸಿದ್ದಾರೆ.
ಗುರುಗಳಾದ ಮಲ್ಲಿಕಾರ್ಜುನ ಬಡಿಗೇರ ಅವರು ಮಾರ್ಗದರ್ಶನ Masoom NGO ದ ಸಹಾಯದಿಂದ ಮುಂಬಯಿ ವಿದ್ಯಾ ವಿಹಾರದ ವಿಧ್ಯಾಭವನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 11ನೇ ಹಾಗೂ 12ನೇ ವರ್ಗದಲ್ಲಿ ಓದಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು ನಂತರ ಕೆಲವು ಸಮಸ್ಯೆಗಳಿಂದ ಮುಂಬಯಿ ತೊರೆದು ತವರೂರು ಆದ ಹೇರೂರು ಗ್ರಾಮಕ್ಕೆ ಬಂದು ನೆಲೆಸಿದರು ಮುಂದಿನ ವಿಧ್ಯಾಭ್ಯಾಸ ಮಾಡುವ ತವಕದಿಂದ ಕರ್ನಾಟಕದ ಗುಲ್ಬರ್ಗ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನೂತನ ಪದವಿ ಪೂರ್ವ ಕಾಲೇಜಿನಲ್ಲಿ B.Sc ಪದವಿ ಮುಗಿಸಿದರು ನಂತರ M.C.A.ಮಾಡಬೇಕೆಂಬ ಛಲದಿಂದ P.G.C ET ಪರೀಕ್ಷೆ ಬರೆದು ಅದರಲ್ಲೂ ಉತ್ತಿರ್ಣ ಆದನು ಮುಂದೆ ಕೌನ್ಸೆಲಿಂಗ್ ಗೆ ಬೆಂಗಳೂರಿಗೆ ಹೋದಾಗ ವಿದ್ಯಾರ್ಥಿಗೆ ನಾನಾ ತರದ ಸಮಸ್ಯೆಗಳು ಕಾಡಿದವು ಕರ್ನಾಟಕ ಪರೀಕ್ಷಾ ಮಂಡಳಿಯವರು ತಾವು ಹೊರನಾಡಿನಲ್ಲಿ ಕಲಿತವರು. ಹೀಗಾಗಿ ಆಯ್ಕೆಯಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಆಗ ಕಲಿಯುವ ವಿದ್ಯಾರ್ಥಿಗೆ ದಿಕ್ಕು ತೋಚದೆ ಮಾನಸಿಕ ವೇದನೆಯಾಯ್ತು ಹೊರನಾಡು ಕನ್ನಡಿಗರಿಗೆ ಈ ಸಮಸ್ಯೆ ಆಯಿತ್ತಲ್ಲ ಈ ಸಮಸ್ಯೆ ಪರಿಹಾರ ಕಂಡು ಕೊಳ್ಳಬೇಕೆಂಬ ಸದುದ್ದೇಶದಿಂದ ಕಲಿಯುತ್ತಿರುವ ವಿದ್ಯಾರ್ಥಿಗೆ ಶಿಕ್ಷಣದಿಂದ ವಂಚಿತನಾಗಬಾರದು ಎಂಬ ಕಾಳಜಿ ವಹಿಸಿದ ಕನ್ನಡ ಚಿಂತಕರು ಪ್ರಯತ್ನ ಬಿಡದೆ ಮಲ್ಲಿಕಾರ್ಜುನ ಬಡಿಗೇರ,ರಾಜೇಂದ್ರ ಬಿರಾದಾರ,ಅನಿಲ ಪೋತದಾರ, ಇವರ ಸಹಾಯದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಇವರೊಂದಿಗೆ ಮಾತ ನಾಡಿ ಪರಿಸ್ಥಿತಿ ಬಿಚ್ಚಿ ಹೇಳಿದರು ಅದನ್ನರಿತ ಶ್ರೀ ಸಂತೋಷ ಹಾನಗಲ್ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ಬೆಂಗಳೂರು ಇದರ
ನಿರ್ದೇಶಕರಾದ ಶ್ರೀಮತಿ ರಮ್ಯಾ ಅವರಿಗೆ ಪತ್ರ ಬರೆದು ತಿಳಿಸಿದರು ಈ ಪತ್ರದಿಂದ ಕರ್ನಾಟಕ ಅಭ್ಯರ್ಥಿ ಎಂದು ಪರಿಗಣಿಸಿ ಕಲಿಯುವ ವಿದ್ಯಾಭ್ಯಾಸಕ್ಕೆ ದಾರಿ ಮಾಡಿ ಕೊಟ್ಟರು ಆಗ ವಿದ್ಯಾರ್ಥಿ ಸುನೀಲ ದಂಗಾಪುರ ಅವನಿಗೆ ಮನದಲ್ಲಿ ಹುದಗಿದ್ದ ಕಲಿಕೆಗೆ ಉತ್ಸಾಹ ಬಂತು ಅವರು ತಾವು ಪಡಬಾರದ ಕಷ್ಟಗಳನ್ನು ಹೇಳಿದರು MCA ಪದವಿ ಪ್ರವೇಶ ಪಡೆಯಲು ಪ್ರೋತ್ಸಾಹ ನೀಡಿ ಸಹಕರಿಸಿದ ಮಾರ್ಗದರ್ಶಕರಿಗೂ ವಿದ್ಯಾರ್ಥಿ ಸುನೀಲ್ ಧನ್ಯವಾದಗಳು ತಿಳಿಸಿದ್ದಾನೆ.ಮುಂಬಯಿಯಲ್ಲಿ 40 ಕನ್ನಡ ಶಾಲೆಗಳಿದ್ದು ಅದರಲ್ಲಿ ರಾತ್ರಿ ಶಾಲೆಗಳು ಬಡವರ ನಿರ್ಗತಿಕ ಮಕ್ಕಳ ಪಾಲಿಗೆ ಕಲ್ಪ ವೃಕ್ಷ ಯೆಂದರೆ ತಪ್ಪಾಗಲಾರದು ಇದರಲ್ಲಿ ಹೆಚ್ಚಾಗಿ, ಕನ್ನಡಿಗರು ಮುಂಬಯಿ ಕನ್ನಡ ಸಂಘ ಸಂಸ್ಥೆಗಳು ಕಟ್ಟುವುದರ ಮೂಲಕ ರಾತ್ರಿಪ್ರೌಢ ಶಾಲೆಗಳನ್ನು ಸ್ವಂತ ಖರ್ಚಿನಿಂದ ನಡೆಸಿಕೊಂಡು ಬರುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯ ಸುನೀಲ ಧಂಗಾಪುರ ಎಂಬಂತಹ ಸಾವಿರಾರು ವಿಧ್ಯಾರ್ಥಿ
ಗಳಿಗೆ ಜ್ಞಾನ ನೀಡುವಂತಾಗಲಿ ಗಡಿನಾಡಿನ ಕನ್ನಡಿಗರಿಂದ ತುಂಬು ಹೃದಯದ ಅಭಿನಂದನೆಗಳು.

ಲೇಖಕರು:ದಯಾನಂದ ಪಾಟೀಲ ಅಧ್ಯಕ್ಷರು, ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ