ಕಲಬುರಗಿ:ವಿಶ್ವಮಾನವ ಕುವೆಂಪು ವಿಚಾರಧಾರೆಗಳು ಮನುಷ್ಯರ ಮನಸ್ಸಿನಲ್ಲಿರುವ ಕ್ಲೇಶಗಳನ್ನು ತೊಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹಿರಿಯ ಸಾಹಿತಿ ಸದಾನಂದ ಪೆರ್ಲೆ ಗುರುವಾರ ಅಭಿಪ್ರಾಯಪಟ್ಟರು.
ನಗರದ ಕಲಾ ಮಂಡಳದಲ್ಲಿ ಕರವೇ(ಕಾವಲುಪಡೆ) ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮ ದಿನಾಚರಣೆಯಲ್ಲಿ ಕುವೆಂಪು ಅವರ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಕುವೆಂಪು ಯಾವುದೇ ಜಾತಿಗೆ ಸೇರಿದವರಲ್ಲದವರು.ವೈಚಾರಿಕ ಪ್ರಜ್ಞೆಯೊಂದಿಗೆ ಪೂರ್ಣ ಅರಳಿದ ಬದುಕು ಅವರದಾಗಿತ್ತು. ಅನುಭವದ ಆಳಕ್ಕೆ ಇಳಿದು ಕವಿಯಾಗಿ ಜಗತ್ತಿಗೆ ವಿಚಾರಧಾರೆಗಳನ್ನು ಹಂಚುವ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಮನುಕುಲದಲ್ಲಿ ಅಜರಾಮರಾಗಿ ಉಳಿದದರು ವಿಶ್ವಮಾನವನಾಗಿ ಎಲ್ಲರ ಮನೆ ಮನದಲ್ಲಿ ಉಳಿದುಕೊಂಡಿರುವ ಇಂತಹ ಮಹಾನ್ ಸಂತನನ್ನು ನೆನೆಯುವುದೇ ನಮ್ಮೆಲ್ಲರ ಭಾಗ್ಯ ಎಂದು ಸ್ಮರಿಸಿದರು ಯಾವ ವ್ಯಕ್ತಿ ಎಲ್ಲಿ ಹೋದರೂ,ದೈವತ್ವದ ದೃಷ್ಟಿಯಿರಿಸಿಕೊಂಡಿರುತ್ತಾನೋ ಆತ ಮಾತ್ರ ವಿಶ್ವಮಾನವನಾಗಲು ಸಾಧ್ಯ ಅಂತಹ ವ್ಯಕ್ತಿತ್ವ ಕುವೆಂಪು ಅವರಲ್ಲಿ ಇತ್ತು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲಿಕೆ ಮಾಜಿ ಸದಸ್ಯ ಗಣೇಶ ವಳಕೇರಿ,ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಪವನಕುಮಾರ ವಳಕೇರಿ,ಬಿಜೆಪಿ ಮುಖಂಡ ಸುನೀಲ ವಂಟಿ,ಸಮಾಜ ಸೇವಕ ಬಸವರಾಜ ನಾಟೀಕಾರ, ಉಪನ್ಯಾಸಕ ಡಾ.ವೀರಶೆಟ್ಟಿ ಗಾರಂಪಳ್ಳಿ,ಪ್ರಲ್ಹಾದ ಹಡಗಿಲ,ಅಮರ ಕೊಳ್ಳೂರ ಸೇರಿದಂತೆ ಇತರರು ಇದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಸಿದ್ದರಾಮ ರಾಜಮಾನೆ ಮಾಡಿದರು.ಕಾರ್ಯಕ್ರಮದ ನೇತೃತ್ವವನ್ನು ಜಿಲ್ಲಾಧ್ಯಕ್ಷ ಮಂಜುನಾಥ ಎಸ್ ನಾಲವರಕರ್ ವಹಿಸಿದ್ದರು.
ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪುರಸ್ಕೃತರು:
ಕೆ.ಎಸ್.ಬಂಧು(ಲೇಖಕ),
ಶರಬಯ್ಯ ಸ್ವಾಮಿ(ಶಿಕ್ಷಕ), ಎಂ.ಬಿ.ಕಟ್ಟಿ(ಪ್ರಾಧ್ಯಾಪಕರು),
ವಿಜಯಕುಮಾರ ಪರುಟೆ(ಸಾಹಿತಿಗಳು),
ಶಾಂತಾ ಪಸ್ತಾಪೂರ(ಹಿರಿಯ ಸಾಹಿತಿ),
ಡಾ.ಎಸ್.ಎಸ್.ಗುಬ್ಬಿ(ಹಿರಿಯ ಸಾಹಿತಿಗಳು), ಸದಾನಂದ ಪೆರ್ಲೆ(ಹಿರಿಯ ಸಾಹಿತಿ),
ಸಿದ್ದರಾಮ ಹೋನ್ಕಲ(ಹಿರಿಯ ಸಾಹಿತಿ),
ಸದಾನಂದ ಪಾಟೀಲ(ಯುವ ಸಾಹಿತಿ),
ಶೈಲಜಾ ಬಾಗೇವಾಡಿ(ಕನ್ನಡ ಉಪನ್ಯಾಸಕರು), ಕಾಶೀನಾಥ ಗುತ್ತೇದಾರ(ಹಿರಿಯ ಸಾಹಿತಿ),
ನಾಗಲಿಂಗಯ್ಯ ಮಠಪತಿ(ಯುವ ಸಾಹಿತಿ).