ಮುಂಡಗೋಡ:ಕಳೆದ ಎರಡು ದಿನಗಳಿಂದ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ವರ್ದಂತಿ ಉತ್ಸವ ಸಮೇತ, ಮಂಡಲ ಪೂಜೆ ಹಾಗೂ ಅಗ್ನಿ ಕಾರ್ಯಕ್ರಮ ಗಳು ಅಯ್ಯಪ್ಪ ಮಾಲಾಧಾರಿಗಳ ಭಕ್ತಿ ಪರಾಕಾಷ್ಠೆ ಯೊಂದಿಗೆ ವೈಭವಯುತವಾಗಿ ಸಂಪನ್ನಗೊಂಡಿತು.
ಕುಂಭ ಮೆರವಣಿಗೆ:
ಪ್ರತಿ ವರ್ಷದ ಸಂಪ್ರದಾಯದಂತೆ ಹಳೂರ ಕಲ್ಮೇಶ್ವರ ದೇಗುಲದ ಮೂಲಕ ಕುಂಭದಲ್ಲಿ ನೀರು ತುಂಬಿಕೊಂಡು ಅದರ ಮೂಲಕ ಸ್ವಾಮಿಯ ಪೂಜೆಗೆ ಮೆರವಣಿಗೆ ಮೂಲಕ ದೇಗುಲಕ್ಕೆ ತರಲಾಯಿತು.ಇದೆ ವೇಳೆ ಅಯ್ಯಪ್ಪ ಮಾಲಾದಾರಿಗಳು ಶರಣು ನುಡಿಗಳ ಮೂಲಕ ಸುಮಾರು ಎರಡು ಕಿಲೋಮೀಟರ್ ಹೆಜ್ಜೆ ಹಾಕಿ ದೇವಸ್ಥಾನ ತಲುಪಿದರು.
ಮಂಡಲ ಪೂಜೆ ಹಾಗೂ ಅನ್ನ ಸಂತರ್ಪಣೆ:
ಗಂಧದ ಅಭಿಷೇಕ,ಹಾಲಿನ ಅಭಿಷೇಕ,ತುಪ್ಪದ ಅಭಿಷೇಕ ಗಳ ನಂತರ ಪಡಿ ಪೂಜೆ ಮಾಡುವ ಮೂಲಕ ಮಂಡಲ ಪೂಜೆ ಮಾಡಲಾಯಿತು.ಇದೇವೇಳೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಸುಮಾರು 8 ಸಾವಿರಕ್ಕೂ ಹೆಚ್ಚು ಅಯ್ಯಪ್ಪ ಭಕ್ತಾಧಿಗಳು ಸ್ವಾಮಿಯ ದರ್ಶನ ಮಾಡಿ ಪ್ರಸಾದ ಸ್ವೀಕಾರ ಮಾಡಿದರು.
ಅಗ್ನಿ ಕಾರ್ಯಕ್ರಮ:
ಸರಿಯಾಗಿ 8 ಗಂಟೆಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಗಳಿಂದ ಅಗ್ನಿ ಕಾರ್ಯಕ್ರಮ ಹಾಗೂ ಕುದಿಯುವ ಎಣ್ಣೆಯಲ್ಲಿ ವಡೆ ತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸುಮಾರು 7 ಗಂಟೆಗಳ ನಿರಂತರ ಶರಣು ಘೋಷಗಳ ಮೂಲಕ ಮುಂಜಾನೆ ಸುಮಾರು 3. ಗಂಟೆಯ ವೇಳೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕೆಂಡ ಹಾಯ್ದು ಕುದಿಯುವ ಎಣ್ಣೆಯಲ್ಲಿ ವಡೆ ತೆಗೆದರು.
ಇಲಾಖೆಗಳ ಸಹಕಾರ
ಪಟ್ಟಣ ಪಂಚಾಯಿತಿ,ಪೊಲೀಸ್ ಇಲಾಖೆ,ಹೆಸ್ಕಾಂ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಮೂಲಕ ಮಂಡಲ ಪೂಜೆ ಮಹೋತ್ಸವ ಯಶಸ್ವಿ ಆಗಿದೆ ಎಂದು ದೇವಸ್ಥಾನ ವಿಶ್ವಸ್ಥ ಸಮಿತಿಯವರು ಧನ್ಯವಾದ ತಿಳಿಸಿದರು.