ಹನೂರು ಡಿ 28:ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿಗಳ ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರೇಡ್-2 ಹನೂರು ತಹಸಿಲ್ದಾರ್ ಡಾIIಕೆ.ಧನಂಜಯ ರವರು ತಿಳಿಸಿದರು.
ದಿನಾಂಕ 30/12/2023ರಂದು ಬೆಳಗ್ಗೆ 11 ಗಂಟೆಗೆ ಹನೂರು ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಣಗಳ್ಳಿ ದೊಡ್ಡಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಪಿಂಚಿಣಿ ಅದಾಲತ್ ಕಾರ್ಯವನ್ನು ಆಯೋಜನೆ ಮಾಡಲಾಗಿದ್ದು.
ಸದರಿ ಸಾಮಾಜಿಕ ಭದ್ರತೆ ಯೋಜನೆಯ ವಿವಿಧ ಪಿಂಚಣಿ ಗಳಾದ ಇಂದಿರಾ ಗಾಂಧಿ ರಾಷ್ಟ್ರಿಯ ವೃಧ್ಯಾಪ ವೇತನ,ನಿರ್ಗತಿಕ ಅಥವಾ ವಿಧವಾ ವೇತನ, ಅಂಗವಿಕಲ ವೇತನ,ಸಂಧ್ಯಾ ಸುರಕ್ಷಾ,ಯೋಜನೆ, ಮನಸ್ವಿನಿ ಮತ್ತು ಮೈತ್ರಿ ಪಿಂಚಣಿ ಯೋಜನೆಗೆ ಅರ್ಹ ಪಲಾನುಭವಿಗಳಿಂದ ಅರ್ಜಿ ಪಡೆದು ಆದೇಶ ಪ್ರತಿ ನೀಡಲಾಗುವುದು ಆದ್ದರಿಂದ ಸಾರ್ವಜನಿಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಗ್ರೇಡ್-2 ಹನೂರು ತಹಸಿಲ್ದಾರ್ ಡಾIIಕೆ. ಧನಂಜಯರವರು ತಿಳಿಸಿದ್ದಾರೆ.
ವರದಿ:ಉಸ್ಮಾನ್ ಖಾನ್