ಬಳ್ಳಾರಿ:ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಮಾನ್ಯ ಶ್ರೀ ಜನಾರ್ಧನ ರೆಡ್ಡಿಯವರ ಜನಪ್ರಿಯತೆಯನ್ನು ಸಹಿಸಲಾಗದೆ ಐತಿಹಾಸಿಕ ಸ್ಥಳದ ಮಹಿಮೆಯನ್ನು ಅರಿಯದೆ ಗಂಗಾವತಿಯ ಪಂಪಾಸರೋವರದ ಕುಟೀರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ “ಘನತೆವೆತ್ತ ರಾಜ್ಯಪಾಲರು,ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ” ಮನವಿ ಪತ್ರ ಸಲ್ಲಿಸಲು ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರ ನಿಯೋಗ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಂದು ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತ (ರಾಯಲ್ ಸರ್ಕಲ್) ದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನೂರಾರು ಪದಾಧಿಕಾರಿಗಳು ಕಾರ್ಯಕರ್ತರು ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷರಾದ ಶ್ರೀ ದಮ್ಮೂರು ಶೇಖರ್ ರವರ ನೇತತ್ವದಲ್ಲಿ ರಾಜ್ಯ ಉಪಾಧ್ಯಕ್ಷರಾದ,ಶ್ರೀ ಕೆ ಎಸ್ ದಿವಾಕರ್ ರವರು,ಶ್ರೀ ಮುನ್ನಾಬಾಯ್ ರವರು,ಶ್ರೀ ವೆಂಕಟರಮಣ ರವರು ರಾಜ್ಯ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಶ್ರೀ ದರಪ್ಪ ನಾಯಕ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಲ್ಲಿಕಾರ್ಜುನ ಆಚಾರ್,ಶ್ರೀ ಹುಂಡೇಕರ್ ರಾಜೇಶ್, ಶ್ರೀ ಶ್ರೀನಿವಾಸ ರವರು,ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪ್ರಭುಶೇಖರ್ ಗೌಡ,ಶ್ರೀ ಪಿ ವಿ ಶ್ರೀನಿವಾಸುಲು,ಶ್ರೀ ಜೆ ತಿಮ್ಮಪ್ಪ,ಶ್ರಿಮತಿ ಸುನೀತ,ಪರಿಶಿಷ್ಠ ಜಾತಿ ಘಟಕದ ಅಧ್ಯಕ್ಷರಾದ ಶ್ರೀ ಡಿ ವಿಜಯಕುಮಾರ್,ಮಹಿಳಾ ಶಕ್ತಿ ಘಟಕ ಅಧ್ಯಕ್ಷರಾದ ಶ್ರೀಮತಿ ಹಂಪಿ ರಮಣ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷರಾದ ಶ್ರೀ ರೋಸಿರೆಡ್ಡಿ,ಕಾರ್ಯದರ್ಶಿಗಳಾದ ಶ್ರೀ ಗೋವಿಂದರಾಜು, ಅಲ್ಪಸಂಖ್ಯಾತಘಟಕದ ಅಧ್ಯಕ್ಷರಾದ ಶ್ರೀ ಶೇಕ್ ದಾದಾಪೀರ್ ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾದ ಶ್ರೀ ಬಿ ರಾಘವೇಂದ್ರ, ಹಿಂದುಳಿದ ವರ್ಗಗಳ ಶಕ್ತಿ ಘಟಕದ ಅಧ್ಯಕ್ಷರಾದ ಶ್ರೀ ಕೊಳಗಲ್ ಆಂಜಿನಿ, ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀ ಮಾರೇಶ್ ಓಬಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಉಪ್ಪಾರ್ ಹನುಮೇಶ್, ಕಾರ್ಯಾಲಯ ಕಾರ್ಯದರ್ಶಿ ಶ್ರೀ ವೀರಶೇಖರ್ ರೆಡ್ದಿ ರವರು ಮುಖಂಡರಾದ ಎಚ್ ಹೆಬ್ಬಲ್ ರವರು ಮತ್ತು ನೂರಾರು ಜನ ಮುಖಂಡರು ಹಾಗೂ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವರದಿ-ಜಾಫರ್ ಸಾಧಿಕ್ ಬಳ್ಳಾರಿ