ಹನೂರು:ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಶಿಸ್ತು ಬದ್ದ ಹಾಗೂ ಮಾರ್ಗದರ್ಶನ ನೀಡುವ ಯೋಜನೆಯಾಗಿದ್ದು ಸೇವಾ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಆರ್ ನರೇಂದ್ರ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಹನೂರು ವಿಧಾನಸಭಾ ಕ್ಷೇತ್ರದ ದೊಡ್ಡಿದು ವಾಡಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯಿಂದ ವಿನೂತನ ವಾಗಿ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮ ಏರ್ಪಡಿಸಿರುವುದು ಸಂತೋಷದ ವಿಷಯ ವಾಗಿದೆ ಪರಮ ಪೂಜ್ಯ ವೀರೇಂದ್ರ ಹೆಗ್ಡೆ ಅವರ ಮಾರ್ಗ ದರ್ಶನದಲ್ಲಿ ಕರ್ನಾಟಕದಾದ್ಯಂತ ಲಕ್ಷಾಂತರ ಸ್ವ ಸಹಾಯ ಸಂಘ ಗಳಿವೆ,ಧರ್ಮಸ್ಥಳ ಗ್ರಾಮೀಣಾಭಿರುದ್ಧಿ ಸ್ವ ಸಹಾಯ ಸಂಘದಲ್ಲಿ ಹೆಚ್ಚಿನ ಶಿಸ್ತುನ್ನು ಕಾಣಬಹುದು,ಮಹಿಳೆಯರು ಮನೆಯಲ್ಲಿ ಕೂತು ಕಾಲಹರಣ ಮಾಡುವ ಬದಲು ಸ್ವ ಸಹಾಯ ಸಂಘಗಳಲ್ಲಿ ಧನ ಸಹಾಯ ಪಡೆದು ಆರ್ಥಿಕವಾಗಿ, ಸಾಮಾಜಿಕ ವಾಗಿ ಬೆಳವಣಿಗೆಯಾಗಲು ಸಹಕಾರ ವಾಗಲಿದೆ ಈ ದೆಸೆಯಲ್ಲಿ ಸದುಪಯೋಗ ಪಡೆದುಕೊಳ್ಳಿ ಎಂದರು.
ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ ಮಾತನಾಡಿ ಕಳೆದ 12ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿರುದ್ಧಿ ಯೋಜನೆ ಸಾಮಾಜಿಕ ಸೇವೆ ಗಳನ್ನು ನೀಡುತ್ತಾ ಬಂದಿದೆ,
,ಜ್ಞಾನ ವಿಕಾಸ ಯೋಜನೆ ಸೇರಿದಂತೆ ಅನೇಕ ಯೋಜನೆ ಗಳನ್ನು ಜಾರಿಗೆ ತಂದು ಕಾರ್ಯನಿರ್ವಹಿಸುತ್ತಿದೆ.
ಕಾಡಂಚಿನ ಗ್ರಾಮಗಳಲ್ಲೂ ನಮ್ಮ ಸಂಘ ಸೇವೆಯನ್ನು ಸಲ್ಲಿಸುತ್ತಿದೆ,ರಾಜ್ಯ ಸರ್ಕಾರ ಸೇವೆಗಳನ್ನು ಮನೆ ಮನೆಗೆ ತಲುಪಿಸುವ ದೆಸೆಯಲ್ಲಿ ಕಾಮನ್ ಸರ್ವಿಸ್ ಸೆಂಟರ್ ಗಳನ್ನು ತೆರೆಯಲಾಗಿದೆ,ಸರ್ವ ಧರ್ಮಗಳನ್ನು ಒಗ್ಗೂಡಿಸುವ ಕ್ಷೇತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಹನೂರು ತಾಲ್ಲೂಕು ಯೋಜನಾಅಧಿಕಾರಿ ಪ್ರವೀಣ್,ಮೇಲ್ವಿಚಾರಕ ವಸಂತ ಮುಖಂಡರಾದ,ಬಸನಪ್ಪ ಗೌಡರ್,ಗ್ರಾಮ ಪಂಚಾಯತಿ ಸದಸ್ಯ ಸುರೇಶ್,ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ಸೇರಿದಂತೆ ಧರ್ಮಸ್ಥಳ ಗ್ರಾಮೀಣಾಭಿರುದ್ಧಿ ಯೋಜನೆ ವಲಯ ಮಟ್ಟದ ಸದಸ್ಯರುಗಳು ಹಾಗೂ ಮಹಿಳೆಯರು ಇದ್ದರು.
ವರದಿ:ಉಸ್ಮಾನ್ ಖಾನ್