ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ
ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕದೆ ಇರುವುದನ್ನು ಪ್ರತಿಭಟನೆ ಮಾಡಿ ಬೇರೆ ಭಾಷಾ ನಾಮಫಲಕ ತೆರವು ಕಾರ್ಯಾಚರಣೆ ವೇಳೆ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಬಂಧಿಸಿದ್ದಾರೆ.
ಸರ್ಕಾರವೇ ಮಾಡಬೇಕಾದ ಕೆಲಸವನ್ನು
ಕನ್ನಡಪರ ಸಂಘಟನೆಗಳು ಮಾಡುತ್ತವೆ
ಅದ್ದರಿಂದ ಹೋರಾಟಗಾರರನ್ನು ಮತ್ತು ಅಧ್ಯಕ್ಷರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರವೇ ಶ್ರೀನಿವಾಸ ತಿಳಿಸಿದರು,
ಬಾಬು ಎಂ ಮಾತನಾಡಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಮತ್ತು ಅಡಳಿತ ಭಾಷೆ ಕನ್ನಡವೇ ಆಗಬೇಕು ಎಂದು ಹೇಳಿದರು
ಸರ್ಕಾರ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಸ್ವಾಗತ
ಅಂದರೆ ಸಾರ್ವಜನಿಕ ಮನಸಿನಲ್ಲಿ ಗೊಂದಲ ಬೇಡ ಇದಕ್ಕೆ ಯಾವುದೇ ದಿನಾಂಕ ನಿಗದಿ ಪಡಿಸಿಲ್ಲ ಅದರಿಂದ ಸರದಿ ಸಾಲಿನಲ್ಲಿ ಬಿಸಿಲಿನಲ್ಲಿ ನಿಂತು
ಗ್ಯಾಸ್ ಏಜೆನ್ಸಿ ಯವರು ಜನರಿಗೆ ಶ್ಯಾಮಿಯಾನ ಹಾಕಿ ಅನುಕೂಲ ಮಾಡಿಕೊಡಬೇಕು ಎಂದು ಈ ಸಂದರ್ಭದಲ್ಲಿ ಅಂಗಡಿಯವರಿಗೆ ಮನವಿ ಮಾಡಿದರು.
ವರದಿ ಪ್ರಭಾಕರ ಡಿ ಎಂ ಹೊನ್ನಾಳಿ