ಹೌದು ಇದು ಕಂಡು ಬಂದಿದ್ದು ಕಲಬುರಗಿಯಿಂದ ಧರ್ಮಸ್ಥಳಕ್ಕೆ ಹೊರಟಿರುವ ಕಲಬುರಗಿಯ ಡಿಪೋ ನಂಬರ್ ೨ರ ಬಸ್ ಸಂಖ್ಯೆ ಕೆಎ ೩೨ ಎಫ್ ೨೫೭೯ ಬಸ್ ನಲ್ಲಿ ಇಂದು ಪ್ರಯಾಣಿಸುತ್ತಿರುವಾಗ ಬಸ್ಸಿನಲ್ಲಿ ದೂರದ ಪ್ರಯಾಣ ಮಾಡುವವರು ಹಾಗೂ ಲೋಕಲ್ ಪ್ರಯಾಣಿಕರು ಇರುವುದು ಸಹಜ ಆದರೆ ಬಸ್ ನಲ್ಲಿ ಪ್ರಯಾಣಕ್ಕೆ ಸೂಕ್ತವಾದ ಆಸನಗಳನ್ನು ಮೀರಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲು ಅವಕಾಶ ನೀಡುವುದು ಅದೆಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ ಅದರಲ್ಲೂ ವೃದ್ದರು, ಮಹಿಳೆಯರಿಗಂತೂ ತುಂಬಾ ತೊಂದರೆಯಾಗುವುದಂತೂ ಸಹಜ.ಇಷ್ಟೆಲ್ಲಾ ಮೀರಿಯೂ ಯಾವುದೇ ಬಸ್ ನಲ್ಲಿ ಮೀಸಲಿರುವ ಸೀಟುಗಳಿಗಿಂತಲೂ ಅಧಿಕ ಜನರನ್ನು ತುಂಬಿಸಿಕೊಂಡು ಹೋಗುವುದೆಂದರೆ ಏನು? ಇದನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ಕೊಡುವ ಬಸ್ ಕಂಡಕ್ಟರ್ ಹೀಗೆಲ್ಲ ಇದ್ದರೂ ಇದನ್ನು ಸರಿಪಡಿಸದೇ ಇರುವ ಉನ್ನತ ಅಧಿಕಾರಿಗಳು.ಇಷ್ಟೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಮಾತ್ರ ಜನಸಾಮಾನ್ಯರು ಹಾಗಾಗಿ ಇದನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಬಸ್ಸಿನಲ್ಲಿ ಪ್ರಯಾಣಿಸುವ ಹೆಸರು ಹೇಳಲಿಚ್ಛಿಸದ ಪ್ರಯಾಣಿಕರೊಬ್ಬರು ತಮ್ಮ ನೋವನ್ನು ನಮ್ಮ ವರದಿಗಾರರೊಂದಿಗೆ ಹಂಚಿಕೊಂಡರು.
-ಕರುನಾಡ ಕಂದ