ಕಾರವಾರ :ಮಂಗಳೂರಿನಿಂದ ಕಾರವಾರ ಮಾರ್ಗವಾಗಿ ಗೋವಾ ಕಡೆಗೆ ಹೊರಟ ಕರ್ನಾಟಕದ ನಾಲ್ಕನೆಯ ವಂದೇ ಭಾರತ ರೈಲು ಲೋಕಾರ್ಪಣೆ.ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಬೆಂಬಲಿಗರು ಕಿತ್ತಾಡಿಕೊಂಡ ಘಟನೆ ಶನಿವಾರ ನಡೆದಿದೆ. ಕಾರ್ಯಕ್ರಮಕ್ಕೆ ಶಾಸಕ ಶೈಲ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಆಗಮಿಸಿದ ಸಂದರ್ಭದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಘೋಷಣೆ ಹಾಕಿದರು ಕೆಲ ಕಾಲ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು ಅಧಿಕಾರಿಗಳು ರಾಜಕೀಯ ಮಾಡಿದಂತೆ ಹೇಳಿದರು ಪ್ರಯೋಜನವಾಗಲಿಲ್ಲ ಇದರಿಂದ ಕಾರ್ಯಕ್ರಮ ಅರ್ಧದಲ್ಲೇ ಸ್ಥಗಿತಗೊಂಡಿತು ಬಳಿಕ ಇಬ್ಬರು ನಾಯಕರು ಬೆಂಬಲಿಗರೊಂದಿಗೆ ರೈಲು ಹತ್ತಿ ಪ್ರಯಾಣಿಕರಿಗೆ ಸಿಹಿ ನೀಡಿ ಶುಭ ಕೋರಿದರು.
ವರದಿ ಎಸ್ ಆರ್ ಭೋವಿ