ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಸ್ ಟಿ ಸೇರ್ಪಡೆಗೆ ಒತ್ತಾಯಿಸಿ ಪ್ರತಿಭಟನೆ! ಮೇಕೆ ಕುರಿಗಳ ಜೊತೆ ವಿಧಾನ ಸೌಧದ ಮುಂದೆ ಧರಣಿ

ಜೇವರ್ಗಿ:ಗೊಂಡ ಪರ್ಯಾಯ ಪದ ಕುರುಬರೆಂದು ಕೇಂದ್ರ ಸರಕಾರ ಪರಿಗಣಿಸಬೇಕು,ಗೊಂಡ ಮತ್ತು ಕುರುಬ ಎರಡೂ ಒಂದೇ ಎಂದು ತಿಂತಣಿ ಬ್ರಿಜ್ ಕನಕ ಗುರು ಪೀಠಾಧಿಪತಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ ಹೇಳಿದರು.
ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್ ನಿಂದ ಮಿನಿ ವಿಧಾನ ಸೌಧದ ವರೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಿದ ಪ್ರತಿಭಟನಾಕಾರರು ಕುರಿ ಮತ್ತು ಮೇಕೆಗಳನ್ನು ಮಿನಿ ವಿಧಾನ ಸೌಧದ ತಾಲೂಕು ದಂಡಾಧಿಕಾರಿಗಳ ಕಛೇರಿ ಒಳಗೆ ಪ್ರತಿಭಟನಾಕಾರರು ನುಗ್ಗಿಸಲು ಪ್ರಯತ್ನಿಸಿದರು ಬಸವೇಶ್ವರ ವೃತ್ತದಲ್ಲಿ ಟೈಯರಿಗೆ ಬೆಂಕಿ ಹಚ್ಚುವುದರ ಮೂಲಕ ಕೇಂದ್ರ ಸರಕಾರದ ವಿರುದ್ದ ಕಿಡಿ ಕಾರಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ ಆದಿವಾಸಿಗಳಾದ ಗೊಂಡ ಜನರನ್ನು 1936 ರಲ್ಲಿ ರಾಣಿ ಎಲೆಜಿಬೆತ್ ಹಾಗೂ 1950 ರಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ರವರು ಎಸ್ ಟಿ ಪಟ್ಟಿಯಲ್ಲಿ ಪರಿಗಣಿಸಿದ್ದಾರೆ ಆದ್ದರಿಂದ ಸರಕಾರ ಗೊಂಡ ಪರ್ಯಾಯ ಪದ ಕುರುಬ ಸಮಾಜದ ಏಳಿಗೆಗಾಗಿ, ನಮಗೆ ಸರ್ಕಾರ ಯಾವುದೇ ಇರಲಿ ಮುಂದಿನ ಭವಿಷ್ಯದ ಸಲುವಾಗಿ ಎಸ್ ಟಿ ಸೇರ್ಪಡೆ ಮಾಡಬೇಕು.
ಗೊಂಡ ಮತ್ತು ಕುರುಬ ಇವೆರಡು ಒಂದೇ ಜಾತಿ ಸೇರಿದ ಪದಗಳು ಅದಕ್ಕಾಗಿ ಗೊಂಡ ಪದದ ಪರ್ಯಾಯ ಪದವೇ ಕುರುಬ ಎಂಬುವುದನ್ನು ಸರಕಾರ ಅರಿತು ಎಸ್ ಟಿ ಗೆ ಸೇರ್ಪಡೆ ಮಾಡಬೇಕೆಂದು ಸರಕಾರಕ್ಕೆ ಈ ಹೋರಾಟದ ಮೂಲಕ ಒತ್ತಾಯಿಸುತ್ತಿದ್ದೇವೆ‌ ಕಲಬುರಗಿ ಬೀದರ ಹಾಗೂ ಯಾದಗಿರ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕ ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕ್ಕೊಳ್ಳಲಾಗಿದೆ. ತಕ್ಷಣವೆ ಕೇಂದ್ರ ಸರಕಾರ ಎಸ್ ಟಿ ಗೆ ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ಈ ಮೂರು ಜಿಲ್ಲೆಗಳ ನಮ್ಮ ಸಮಾಜದ ಜನರು ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಸವಪಟ್ಟಣದ ಪುಜ್ಯರಾದ ಶ್ರೀ ಲಿಂಗ ಬೀರದೇವರು, ಕೊಲ್ಲೂರಿನ ಶ್ರೀಗಳು, ಧರ್ಮಣ್ಣ ದೊಡ್ಮನಿ, ಭಗವಂತ್ರಾಯ ಪಾಟೀಲ್, ಬೈಲಪ್ಪ ನೇಲೋಗಿ, ಸಾಯಬಣ್ಣ ದೊಡ್ಮನಿ, ನಿಂಗಣ್ಣ ಭಂಡಾರಿ, ಗುರುನಾಥ ಪೂಜಾರಿ, ತಿಪ್ಪಣ್ಣ ಭಳಬಟ್ಟಿ, ಮಹಾಂತೇಶ ಕವಲಗಿ, ಚಂದ್ರಶೇಖರ ನೇರಡಗಿ, ಸಿದ್ದು ಗಜಾ,ಭೀಮಾಶಂಕರ ಬಿಲ್ಲಾಡ, ರಾಜಶೇಖರ ಮುತ್ತಕೊಡ, ಮಲ್ಲಿಕಾರ್ಜುನ ಕುರಳಗೇರಾ, ಶರಣಗೌಡ ಸರಡಗಿ, ನಿಂಗಣ್ಣ ರದ್ದೆವಾಡಗಿ, ಸಿದ್ದಣ್ಣ ಮೈಯೂರ, ಮಾಳು ಹಿಪ್ಪರಗಿ, ತೋಟಪ್ಪ ಕೆಳಗಿನ ಮನಿ ಜನಿವಾರ, ಹಣಮಂತ್ರಾಯ ಕೆಳಗಿನಮನಿ, ಶರಣು ಪುಜಾರಿ, ಶಂಕರಲಿಂಗ ಕರಕಿಹಳ್ಳಿ, ಲಿಂಗರಾಜ ವೈ ಮಾಸ್ಟರ್, ಅಖಂಡಪ್ಪ ನರಿಬೊಳ, ಭಂಗಾರಪ್ಪ ಆಡಿನ್, ಬಸವರಾಜ ನೇರಡಗಿ, ಸೇರಿದಂತೆ ತಾಲೂಕ ಮುಖಂಡರು ಹಾಗೂ ಯುವಕರು ಮತ್ತು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

  • ಚಂದ್ರಶಾಗೌಡ ಪಾಟೀಲ್
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ