ಕನ್ನಡ ನಾಡಿನ ಹಿಂದೆ ನಾಟಕ ಶಾಲೆಗಳು ಇದ್ದವು ಒಂದು ದಿನ
ಕಲಾ ಕವಿಗಳ ಉದಯವಾಯಿತು
ಕನ್ನಡ ಕಂಪಿನ ಸುದಿನ
ಮಹಾದೇವಿ,ರೂಪದೇವಿ ರಾಣಿಯರು
ಸೀತಾರಾಮರಾಗಿ ಆಡಿದ ನಾಟಕ
ಸುರುವಾಯ್ತು ನಟನೆ ಕಲಾ ಕ್ಷೇತ್ರ
ಕನ್ನಡ ಮಣ್ಣಿನ ಕರ್ನಾಟಕ
ಮುಖ ವರ್ಣಿತೆ ವೇಷ ಭೂಷಣ
ಅಲಂಕಾರ ಕುಣಿತಗಳಗೊಂಡು
ವೈದ್ಯಕುಣಿತ ನಾಗನೃತ್ಯ ಬೆರಗಾಯಿತು
ಕರುನಾಡು ಎಲ್ಲರ ಕಂಡು
ಪಾತ್ರಗಳಿಗೆ ಬೊಂಬೆಗಳಂತೆ ವೇಷ ತೊಡಗಿಸಿ ಅಲಂಕಾರ ಮಾಡಿ
ಶ್ರೀಕೃಷ್ಣನು ಪಾರಿಜಾತವು ಭೂವಿಗೆ
ತಂದಂತೆ ಮೋಡಿ
ನಡೆದಾಡುವಂತೆ ಹಾರುವಂತೆ ಕದನ ವಾಗುವಂತೆ ಪೌರಾಣಿಕ ಪ್ರಸಂಗ ತೋರಿ
ಪರದೆ ಮುಂದೆ ಕುಳಿತ ಜನರ ಮನಮುಟ್ಟುವ ಸಾಧನೆ ಮೇಲೇರಿ
ಕರಾವಳಿಯ ತುಳುನಾಡು ಬಿಚ್ಚಿಡುತಿದೆ ಮರೆಯದಿರುವ ಕಲೆ
ಆಧುನಿಕ ಕಾಲದಲ್ಲಿ ನಿಧಾನವಾಗಿ
ಮರೆಯಾಗುತ್ತದೆ ಇದರ ಬೆಲೆ
ಉಳಿಸಬೇಕಿದೆ ಕನ್ನಡ ಕಂಪಿನ ರಂಗ ನಾಟಕದ ಪಾತ್ರಧಾರಿಗಳ ಜಾಡು
ವೇದಿಕೆ ಎಂದೇ ಕೊಡುತ್ತಿದೆ ಸಾಹಿತ್ಯದ ಕರುನಾಡ ಬೀಡು
ಪೌರಾಣಿಕ ಕಥೆಗಳನ್ನು ಆಧರಿಸಿ ಆಡಬೇಕಿದೆ ಬಣ್ಣವ ಹಚ್ಚಿ
ಇದಕ್ಕೆ ಇರುವುದೊಂದೇ ವೇದಿಕೆ ರಂಗಭೂಮಿಯ ಮನಮೆಚ್ಚಿ.
✍️ ಸುಭಾಷ್ ಎಸ್