ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೊಸ ವರ್ಷದ ಹೊಸ ಅನುಭವದೊಂದಿಗೆ..
ನಾನೆಂದೂ ನಿಮ್ಮವನು…

ಹೊಸ ವರ್ಷದ ಹೊಸ್ತಿಲಲ್ಲಿ.
ಮಲೆನಾಡ ಮಡಿಲಲ್ಲಿ..
ಮಲೆನಾಡ ಮುದ್ದು ಮಗ…
ಕನ್ನಡ ನೆಲದ ಹೆಮ್ಮೆಯ ಕುವರ…
ನಮ್ಮೆಲ್ಲರ ಮೆಚ್ಚಿನ “ಕರುನಾಡ ಕಂದ”
ಬಸವರಾಜ ಬಳಿಗಾರ ಅವರಿಗೆ ಈ ನನ್ನ ಲೇಖನ ಅರ್ಪಣೆ…

ಮೊದಲಿಗೆ ಪ್ರೀತಿಯ ಕರುನಾಡ ಕಂದ ಬಳಗದವರೆಲ್ಲರಿಗೂ ನನ್ನ ಕಡೆಯಿಂದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳನ್ನು ತಿಳಿಸುತ್ತಾ ಕರುನಾಡ ಕಂದ ಪತ್ರಿಕೆಯ ಸಂಪಾದಕರಾದ ಬಸವರಾಜ ಬಳಿಗಾರ ಅವರ ಜೊತೆ ಕಳೆದ ಎರಡು ದಿನಗಳ ಶಿವಮೊಗ್ಗ ಜಿಲ್ಲೆಯ ಪ್ರವಾಸದ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಪಯತ್ನಿಸುತ್ತಿರುವ ನಿಮ್ಮವ ಕಲಬುರಗಿಯ ಅಪ್ಪಾರಾಯ ಬಡಿಗೇರ…

ಹೌದು ಇದರ ಜೊತೆ-ಜೊತೆಗೆ ಇನ್ನೊಂದು ವಿಷಯವನ್ನು ಹೇಳುವುದಾದರೆ ನಾನು ಪತ್ರಿಕೋದ್ಯಮಕ್ಕೆ ಬರುತ್ತೇನೆ ಹಾಗೂ ಪತ್ರಿಕೆಯಲ್ಲಿ ಕೆಲಸ ಮಾಡುತ್ತೇನೆ ಅಂತ ಕನಸಿನಲ್ಲೂ ಅಂದುಕೊಳ್ಳದ ನನಗೆ ಪತ್ರಿಕೋದ್ಯಮದ ಪರಿಚಯದ ಜೊತೆ ಜೊತೆಗೆ ಒಂದಷ್ಟು ಮಾಧ್ಯಮದ ತಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾ ಈಗ ನಾನು ಒಬ್ಬ ವರದಿಗಾರನಾಗಿ ಮುಂದುವರೆಯಲು ಕಾರಣರಾದ ಬಸವರಾಜ ಬಳಿಗಾರ ಅವರ ಜೊತೆ ಶಿವಮೊಗ್ಗ ಪ್ರವಾಸ ಮಾಡಿ ಶಿವಮೊಗ್ಗದಲ್ಲಿನ ಕೆಲವು ವಿಚಾರಗಳು ಹಾಗೂ ನಾನು ವರದಿಗಾರನಾದ ಬಗ್ಗೆ ಒಂದಷ್ಟು ಮಾಹಿತಿ ಸಂಗ್ರಹ ಮಾಡಿ ನಿಮ್ಮ ಮುಂದೆ ಲೇಖನದ ರೂಪದಲ್ಲಿ ಬಿಚ್ಚಿಡುತ್ತಿದ್ದೇನೆ ಕೆಲವು ಸಣ್ಣ ಪುಟ್ಟ ಲೇಖನಗಳು ಬರೆಯುತ್ತಿದ್ದ ನನಗೆ ಬಸವರಾಜ ಬಳಿಗಾರ ಸರ್ ಅವರ ನಂಬರ್ ಕೊಟ್ಟು ಇವರ ಪತ್ರಿಕೆಯಲ್ಲಿ ರಿಪೋರ್ಟಿಂಗ್ ಕೆಲಸ ಖಾಲಿ ಇದೆ ಅಂತ ನನ್ನ ಸ್ನೇಹಿತನೊಬ್ಬ ತಿಳಿಸಿದಾಗ ನಾನು ಆವಾಗ ತಾನೇ ಪಿಯುಸಿ ಮುಗಿಸಿ ಡಿಗ್ರಿ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದೆ.

ಸುಮಾರು ಐದಾರು ವರ್ಷಗಳ ಹಿಂದಿನ ಮಾತು
ನಾನೇನಪ್ಪ ಪಿಯುಸಿ ಓದಿದ್ದೀನಿ ನನ್ನನ್ಯಾರು ರಿಪೋರ್ಟರ್ ಕೆಲಸಕ್ಕೆ ತಗೋತಾರೆ ಆ ಕೆಲಸ ಇರೋದು ತುಂಬಾ ಓದಿದವರಿಗೆ ಅದರಲ್ಲೂ “ಪತ್ರಿಕೋದ್ಯಮ” ಓದಿದವರಿಗೆ ಆ ಕೆಲಸ ಸೀಮಿತವಾಗಿರುತ್ತೆ ಅನ್ಕೊಂಡಿದ್ದ ನನಗೆ ಅದು ಹಾಗೇನೂ ರೂಲ್ಸ್ ಅಂತ ಇಲ್ಲ,ಕನ್ನಡ ಸರಿಯಾಗಿ ಬರೆಯೋಕೆ ಮತ್ತು ಓದೋಕೆ,ಅದರ ಜೊತೆ ಇಂಗ್ಲೀಷ್ ಓದಲು ಬರೆಯಲು ಬಂದು ಪಿಯುಸಿ ಮುಗಿಸಿ ಡಿಗ್ರಿ ತಗೊಂಡಿದ್ರೂ ಪಾರ್ಟ್ ಟೈಮಲ್ಲಿ ಈ ಕೆಲಸ ಮಾಡಬಹುದು ಅಂತ ತಿಳಿಸಿ ನೀವು ಒಂದೆರಡು ಲೇಖನ ಬರೆದು ಕಳಿಸಿ ಆಮೇಲೆ ಹೇಳ್ತೀನಿ ಅಂತ ತಿಳಿಸಿದ ಬಸವರಾಜ ಬಳಿಗಾರ ಸರ್ ಅವರು ಆವಾಗ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಉಪ-ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು ಅವರು ಹೇಳಿದಹಾಗೆ ನಾನೂ ಸಹ ಒಂದೆರಡು ವರದಿ ಬರೆದು ಕಳುಹಿಸಿದೆ ತದನಂತರವೇ ಕಾಲ್ ಮಾಡಿ ನಿಮ್ಮ ಡಾಕ್ಯೂಮೆಂಟ್ಸ್ ಕಳಿಸಿ ಅದರ ಜೊತೆಗೆ ಫೋಟೋ ಕಳಿಸಿ ಅಂತ ಹೇಳಿದರು ಅದಾದ ಮರುದಿನವೇ ಡಾಕ್ಯೂಮೆಂಟ್ಸ್ ಜೊತೆಗೆ ಫೋಟೋ ಕಳುಹಿಸಿ ಆ ಪತ್ರಿಕೆಯ ವರದಿಗಾರನಾಗಿ ಸೇರ್ಪಡೆಯಾದ ನನಗೆ ಆ ಕ್ಷಣದಿಂದಲೇ ಬೆನ್ನೆಲುಬು ಹಾಗೂ ಮಾರ್ಗದರ್ಶಕರಾದವರೇ ‘ಬಸವರಾಜ ಬಳಿಗಾರ’ ಅಂದರೆ ಈಗಿನ ಕರುನಾಡ ಕಂದ ಪತ್ರಿಕೆಯ ಸಂಪಾದಕರು.

ಐದಾರು ವರ್ಷಗಳ ಅವರ ನಮ್ಮ ಸ್ನೇಹ ಫೋನ್ ಕಾಲ್,ಮೆಸೆಜ್ ಗಷ್ಟೇ ಸೀಮಿತವಾಗಿತ್ತು ಅಂದ್ರೆ ನೀವು ನಂಬಲಿಕ್ಕಿಲ್ಲ…ಯಾಕಂದ್ರೇ ಅವರಿಗೆ ಮೊದಲನೇ ಸಲ ಭೇಟಿಯಾಗಿದ್ದು ಅಂತ ಹೇಳುವುದಾದರೆ ಕೆಲವು ತಿಂಗಳ ಹಿಂದೆ ಯಾವಾಗಂದ್ರೆ ಅವರಿಗೆ ದಿಢೀರ್ ಆರೋಗ್ಯ ಸಮಸ್ಯೆಯಾಗಿ ಬಾಗಲಕೋಟೆಯ ಆಸ್ಪತ್ರೆಯಿಂದ ಬಂದು ಒಂದೆರಡು ದಿನದ ನಂತರ ಕುಷ್ಟಗಿಯ ಕರುನಾಡ ಕಂದ ಪ್ರಧಾನ ಕಚೇರಿಯಲ್ಲಿ.

2024 ರ ಹೊಸ ವರ್ಷದ ಹೊಸ್ತಿಲಲ್ಲಿ ಭದ್ರಾವತಿಯ ವರದಿಗಾರರ ಸಭೆಗೆ ಅವರೊಂದಿಗೆ ಹೋದಾಗ ಅವರ ವ್ಯಕ್ತಿತ್ವ ಪರಿಚಯವಾಯಿತು.ಹೌದು ಬಳಿಗಾರ್ ಸರ್ ಬಗ್ಗೆ ಹೇಳುವುದಾದರೇ ಸುಮಾರು ಪುಟಗಳೇ ತುಂಬಿಸಬಹುದು ಆದ್ರೇ ನಾನೇನು ಅಷ್ಟೊಂದೆಲ್ಲಾ ಬರೆಯಲ್ಲ ಚಿಕ್ಕದಾಗಿ-ಚೊಕ್ಕದಾಗಿ ನನ್ನ ಮನಸಿನ ಮಾತುಗಳನ್ನು ಹೇಳ್ತೀನಿ ಸಂಪಾದಕರು ಅಂತ ಅಂದ್ರೇ ಅವರ್ದು ಒಂಥರಾ ಹೈಫೈ ಜೀವನ ಇರುತ್ತೆ ಅವರು ಬರೋದು ಕಾರಲ್ಲಿಯೇ,ಒಂಥರ ಅವರೂ ಸೆಲೆಬ್ರಿಟಿ, ಎಲ್ಲರನ್ನೂ ಹತ್ತಿರ ಬಿಟ್ಟುಕೊಳ್ಳುವರೋ?ಹೀಗೆ ಇನ್ನೂ ಹಲವು ವಿಚಾರಗಳು ತಲೇಲಿ ಇಟ್ಕೊಂಡಿದ್ದೆ ಯಾಕಂದ್ರೇ ನಮ್ಮ ಸ್ಥಳೀಯ ಇತರೆ ಮಾಧ್ಯಮ/ಪತ್ರಿಕೆಗಳ ಕೆಲವರನ್ನು ಒಂದಷ್ಟು ದೂರದಿಂದ ನೋಡಿದ ನನಗೆ ವರದಿಗಾರರು/ಪತ್ರಕರ್ತರೇ ಈ ರೀತಿ ಇರ್ತಾರಂದ್ರೇ ಇನ್ನೂ ಸಂಪಾದಕರು ಅದ್ಹೆಂಗ್ ಇರ್ಬೇಡ ಅನ್ಕೊಂಡಿದ್ದ ನನಗೆ ಕೆಲವರಿಗೆ ಹೋಲಿಕೆ ಮಾಡಿ ನೋಡಿದರೆ ಬಸವರಾಜ ಬಳಿಗಾರ ಅವರದು ತುಂಬಾ ಸರಳ ವ್ಯಕ್ತಿತ್ವ,ಸರಳ ಸ್ವಭಾವ ಅಂತಾನೇ ಹೇಳಬಹುದು.ಯಾಕಂದ್ರೇ ಕೆಲವು ಪತ್ರಿಕೆಗಳಲ್ಲಿ ಕೆಲಸ ಮಾಡುವ ಹಾಗೂ ಕೆಲವು ಚಾನಲ್’ಗಳಲ್ಲಿ ಕೆಲಸ ಮಾಡುವ ನನ್ನ ಒಂದಷ್ಟು ಸ್ನೇಹಿತರು ಹೇಳುವ ಪ್ರಕಾರ ಅವರವರ ಸಂಪಾದಕರು ಅವರ ಜೊತೆ ನಡೆದುಕೊಳ್ಳುವ ರೀತಿ ಅವರ ನಡವಳಿಕೆಗಳ ಬಗ್ಗೆ ನನ್ನ ಸ್ನೇಹಿತರು ಹೇಳಿದ ಮಾತಿನ ಪ್ರಕಾರ ಹೋಲಿಕೆ ಮಾಡಿ ನೋಡಿದರೆ,ಹಾಗೆಯೇ ನನ್ನ ಪರಿಚಯದ ಕೆಲವು ಸಂಪಾದಕರ ನಡವಳಿಕೆ ಹೀಗೆ ಇನ್ನೂ ಹತ್ತು ಹಲವು ವಿಚಾರಗಳಿಗೂ ಹೋಲಿಸಿದರೆ ಬಳಿಗಾರ್ ಸರ್ ತುಂಬಾ ಸರಳ ಮನುಷ್ಯ.!ಸಾಮಾನ್ಯ ಜನರಂತೆಯೇ ಅವರ ವರ್ತನೆ,ಸಾಮಾನ್ಯ ಜನರಂತೆಯೇ ಅವರ ಮಾತು,ಸಾಮಾನ್ಯ ಜನರಂತೆಯೇ ಅವರ ವಿಚಾರಗಳು ಇನ್ನು ಒಂದೇ ಮಾತಲ್ಲಿ ಹೇಳುವುದಾದರೆ
ಬಸವರಾಜ ಬಳಿಗಾರ
ಸಾಮಾನ್ಯರಲ್ಲಿ ಸಾಮಾನ್ಯರಾಗಿ
ನಮ್ಮೊಂದಿಗೆ ನಮ್ಮವರಾಗಿ
ಮಕ್ಕಳೊಂದಿಗೆ ಮಗುವಾಗಿ
ಹಿರಿಯರೊಂದಿಗೆ ಹಿರಿಯರಂತೆ ಕಂಡರೂ
ಮಗುವಿನ ಮನಸಿನ ತೆರದ ಪುಸ್ತಕ ಅಂತ
ಹೇಳಬಹುದು ಯಾಕಂದ್ರೇ ಅವರು ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣ್ತಾರೆ ಅದು ಆ ದೇವರು ಅವರಿಗೆ ಕೊಟ್ಟ ಒಂದು ವರ ಎನ್ನಬಹುದು.

ಬಡ ಕುಟುಂಬದಲ್ಲಿ ಜನಿಸಿದ ಅವರಿಗೆ ಎಲ್ಲದರ ಅನುಭವವಿದೆ,ಅವರ ಜೀವನದಲ್ಲಿ ಎಲ್ಲಾ ರೀತಿಯಾದ ನೋವು-ನಲಿವುಗಳನ್ನು ನೋಡಿದ್ದಾರೆ. ಇನ್ನೂ ಯಾವುದಾದರೂ ಕಷ್ಟಗಳು ಬರುವುದು ಬಾಕಿ ಯಾವಾಗಾದರೂ ಬರಲಿ ಎದುರಿಸಲು ಸದಾ ಸಿದ್ದ ಎನ್ನುವ ಇವರಿಗೆ ಭಯ ಅನ್ನೋದು ಬಯೋಡಟಾದಲ್ಲೇ ಇಲ್ಲ ಅನಿಸುತ್ತೆ.

ಶಿವಮೊಗ್ಗ ಪ್ರವಾಸ:
ಶಿವಮೊಗ್ಗ ಪ್ರವಾಸ ಅಂತ ಹೇಳಿದ್ರೆ ಎಲ್ಲರಿಗೂ ಸಂತೋಷವೇ ಯಾಕಂದ್ರೇ ಅದೊಂದು ಮಲೆನಾಡು ಪ್ರದೇಶ ಇನ್ನೂ ಆ ಜಿಲ್ಲೆಯಲ್ಲಿ ತುಂಬಾ ಪ್ರವಾಸಿ ತಾಣಗಳಿವೆ ಅದೆಲ್ಲಾ ನೋಡೋ ಅವಕಾಶ ಸಿಗುತ್ತೇ ಅಂತ ಹೇಳಿದ್ರೇ ಯಾರು ತಾನೆ ಹೋಗೋದಕ್ಕೆ ಹಿಂಜರಿತಾರೆ ಹೇಳಿ?ಆದರೆ ನಾನು ಹಿಂಜರಿದಿದ್ದೆ ಯಾಕಂದ್ರೆ ಅದೇ ಸಮಯದಲ್ಲಿ ಊರಲ್ಲಿ ಒಂದಷ್ಟು ಕೆಲಸಗಳಿದ್ದವು,ಆದರೂ ಬಳಿಗಾರ್ ಸರ್ ಹಾಗೂ ನಮ್ಮ ಜೇವರ್ಗಿಯ ಚಂದ್ರು ಗೌಡರ ಒತ್ತಾಯದಿಂದ
ಭದ್ರಾವತಿ ಮೀಟಿಂಗ್ ಕಾರಣವಾಗಿಸಿಕೊಂಡು
ಬಂದ ನನಗೆ ಭಾನುವಾರ ವರದಿಗಾರರ ಸಭೆಯ ದಿನ ಕರುನಾಡ ಕಂದ ಬಳಗದ ಒಂದಷ್ಟು ಸ್ನೇಹಿತರಿಗೆ ಭೇಟಿಯಾದ ಸಂದರ್ಭ ಮತ್ತು ಸಭೆಯ ನಂತರ ಒಂದು ದಿನ ಸಮಯ ಸಿಕ್ಕಿದ್ದರಿಂದ ಕುವೆಂಪು ಅವರ ಜನ್ಮ ಸ್ಥಳ ಕುಪ್ಪಳಿಯ ಅವರ ಮನೆ,ಮನೆಯಲ್ಲಿನ ಒಂದಷ್ಟು ಹಳೆಯ(ಕುವೆಂಪು ಅವರ ಕಾಲದಲ್ಲಿ) ಉಪಯೋಗಿಸುತ್ತಿದ್ದ ವಸ್ತುಗಳು,ಇನ್ನೂ ಮಲೆನಾಡಿನ ವಾತಾವರಣದ ಜೊತೆಗೆ ಆಗುಂಬೆ ಬೆಟ್ಟ ನೋಡಿ ತುಂಬಾ ಸಂತೋಷ ಆಯ್ತು ಮತ್ತೆ ಬಿಡುವು ಸಿಕ್ಕಾಗ ಇನ್ನಷ್ಟು ಶಿವಮೊಗ್ಗದಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಮತ್ತೆ ಬರ್ತೀನಿ ಅಂತ ಹೇಳುತ್ತಾ ಶಿವಮೊಗ್ಗ ಪ್ರಧಾನ ವರದಿಗಾರರಾದ ಶಂಕರ ಸರ್ ಅವರಿಗೆ ನನ್ನ ಕಡೆಯಿಂದ ಧನ್ಯವಾದಗಳು ಯಾಕಂದ್ರೆ ಭದ್ರಾವತಿಯಲ್ಲಿ ಸಭೆ ಆಯೋಜಿಸಿ ನಮ್ಮನ್ನೆಲ್ಲಾ ಕರೆಸಿ ತುಂಬಾ ಚೆನ್ನಾಗಿ ಉಪಚರಿಸಿದ್ದಕ್ಕೆ.

ವರದಿ-ಅಪ್ಪಾರಾಯ ಬಡಿಗೇರ,ಕಲಬುರಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ