ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಗರ ನಾಡಿನ ಕರ್ಮ ಭೂಮಿ ಹಾಗೂ ಪುಣ್ಯ ಭೂಮಿ ಯಡ್ರಾಮಿ:ವಿಜಯಕುಮಾರ್ ಜೆ ಮಲ್ಲೇದ್ ಪಕ್ಷೇತರ ಅಭ್ಯರ್ಥಿ ಅಭಿಮತ…!

ಯಡ್ರಾಮಿ ಸುದ್ದಿ:ಯಡ್ರಾಮಿ ತಾಲೂಕಿನಲ್ಲಿ ಸತ್ಪುರುಷರು ಅವಧೂತರು ಅವತರಿಸಿದಂತ ಈ ನಮ್ಮ ನಾಡಿನಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಸಿದ್ಧಾಂತದ ನೆಲೆಯಲ್ಲಿ ನಾವು ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟದ ಹಾದಿಯನ್ನು ನೆಚ್ಚಿಕೊಂಡಿದ್ದೇವೆ ಸಂವಿಧಾನದ ಪರಂಪರೆಯ ನಾಡಿನಲ್ಲಿ ನಾವು ಹಾಕಿರುವಂತಹ ಮತದಾನದ ಪ್ರಜಾ ಸತ್ತಾತ್ಮಕ ಸಾರ್ವಭೌಮತೆಯಲ್ಲಿ ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಪೀಪಲ್ ರೈಟ್ಸ್ ಆಫ್ ದಿ ಪೆಂಡಮೆಂಟಲ್ ರೈಟ್ಸ್ ಪ್ರಜೆಗಳಿಗೋಸ್ಕರ ಪ್ರತ್ಯೇಕವಾದ ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟಗಾರರಾಗಿ ನಮ್ಮಹಕ್ಕನ್ನು ನಾವು ಕೇಳುತ್ತಿದ್ದೇವೆ ಯಾಕೆಂದರೆ ಹಾಗೂ ಯಡ್ರಾಮಿ ತಾಲೂಕಿನ ಸಂವಿಧಾನಾತ್ಮಕವಾದ ಹಕ್ಕು ನಮ್ಮ ತಾಲೂಕಿನ ಪ್ರಜೆಗಳಿಗೆ ಸಿಕ್ಕಿದೆಯೇ ಇಲ್ಲ ಇನ್ನೂ ಬ್ರಿಟಿಷ್ ಕಾಲದಲ್ಲಿ ಇದ್ದೇವೆ ಎಂದು ಭಾಸವಾಗುತ್ತಿದೆ ಪ್ರಜೆಗಳಿಗೋಸ್ಕರ ನಾವು ಪ್ರತ್ಯೇಕ ಅಭ್ಯರ್ಥಿಯಾಗಿ ಪ್ರಜೆಗಳ ಸಂವಿಧಾನಾತ್ಮಕ ಹಕ್ಕಿನ ಅಡಿಯಲ್ಲಿ ನಾವು ಸ್ಪರ್ಧೆ ಮಾಡಿದ್ದೇವೆ ಇದುವರೆಗೂ ನಮ್ಮ ತಾಲೂಕಿನಲ್ಲಿ ಸಿಗಬೇಕಾದಂತಹ ಮೂಲಭೂತ ಸೌಕರ್ಯಗಳು ಸಿಗದಿರುವುದು ದುರಂತವೇ ಸರಿ ಯಾಕೆಂದರೆ ಇದುವರೆಗೆ ನಮ್ಮ ತಾಲೂಕಿನಲ್ಲಿ ಬಯಲು ಮುಕ್ತ ಶೌಚಾಲಯ ಮಾಡದಿರುವುದು ದುರ್ದೈವದ ಸಂಗತಿ ಆ ನಿಟ್ಟಿನಲ್ಲಿ ನಾವು ಪ್ರಜೆಗಳಿಗೋಸ್ಕರ ಹೋರಾಟದ ಹಾದಿಯನ್ನು ತುಳಿಯುವುದು ಅನಿವಾರ್ಯವಾಗಿದೆ ನಮ್ಮ ತಾಲೂಕಿನಲ್ಲಿ ಶತ-ಶತಮಾನಗಳಿಂದ ನಾವು ಗುಡಿಸಲುಗಳಲ್ಲಿದ್ದರೂ ಕೂಡ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಿಸಲು ಶೈಕ್ಷಣಿಕ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಅದೇ ರೀತಿಯಾಗಿ ಹಲವಾರು ಸಂಘಟನೆ ಹೋರಾಟಗಾರರಿಗೆ ಮೂಲಭೂತ ಸೌಕರ್ಯಗಳ ಕೊರತೆ ಸಲುವಾಗಿ ಹೋರಾಟ ಮಾಡಿದ್ದಾರೆ ಅವರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ ಆದ ಕಾರಣ ಡಾ.ಬಿಆರ್ ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವೇಶ್ವರರ ಸಿದ್ಧಾಂತದಡಿಯಲ್ಲಿ ಜನರಿಗೆ ನಮ್ಮ ವಿಚಾರ ಸಂಕೀರ್ಣವನ್ನು ಹಂಚುವ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಬಡಬಗ್ಗರ ದೀನದಲಿತರ ಹಿಂದುಳಿದ ವರ್ಗದವರ ಶೋಷಿತರ ನಿರ್ಗತಿಕರ ಧ್ವನಿಯಾಗಿ ಹೊಂಬೆಳಕು ಸಮಿತಿ ಎಂಬ ಸಂಘಟನೆಯನ್ನು ಕಟ್ಟಿ ಯಡ್ರಾಮಿ ತಾಲೂಕಿನಾದ್ಯಂತ ಯುವಕರ ಹಾಗೆ ಜನತೆಯನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಧಾರ್ಮಿಕವಾಗಿ ಅರಿವು ಮೂಡಿಸುತ್ತಿದ್ದೇವೆ ನಾವು ಇವತ್ತು ಸೋತಿರಬಹುದು ಆದರೆ ಪ್ರಜಾ ಸತಾತ್ಮಕ ವಿಚಾರಧಾರೆ ಪ್ರತಿಯೊಬ್ಬರ ಮನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜ್ಯೋತಿಬಾಪುಲೆ,ಸುಭಾಷ್ ಚಂದ್ರ ಬೋಸ್ ಹಾಗೂ ಸ್ವಾಮಿ ವಿವೇಕಾನಂದ ಅವರ ಆದರ್ಶಗಳನ್ನು ಪ್ರತಿಯೊಬ್ಬ ಯುವಕರ ಮನದಲ್ಲಿ ಮೂಡಿಸುವ ನಿಟ್ಟಿನಲ್ಲಿ ನಾವು ತಾಲೂಕಿನ ತುಂಬೇಲ್ಲ ಯುವ ಪೀಳಿಗೆಯನ್ನು ಜಾಗೃತಗೊಳಿಸಲು ಪಣತೊಡುತ್ತೇವೆ ಹಾಗೂ ಈ ನಿಟ್ಟಿನಲ್ಲಿ ನಾವು ಜನಪರವಾದ ಸಮಾಜ ಪರವಾದ ನಿಸ್ವಾರ್ಥ ಪರವಾಗಿ ಪ್ರಜಾಸತ್ತಾತ್ಮಕವಾದ ಏಳಿಗೆಯಲ್ಲಿ ಶ್ರಮಿಸುತ್ತೇವೆ ಆದ್ದರಿಂದ ಬದಲಾವಣೆಯೆ ನಮ್ಮ ಗುರಿ ಬದಲಾಯಿಸುತ್ತೇವೆ ಬದಲಾವಣೆಯೆ ನಮ್ಮ ಗುರಿ ನಮ್ಮ ತಾಲೂಕಿನಲ್ಲಿ ನಮ್ಮ ತೆರಿಗೆ ದುಡ್ಡಿನಲ್ಲಿ ರಾಜಕೀಯ ಮಾಡುವ ರಾಜಕೀಯ ನಾಯಕರಿಗೆ ಹಾಗೂ ಸರ್ಕಾರಿ ನೌಕರಿ ವರ್ಗದವರಿಗೆ ಸಂವಿಧಾನದ ಬಿಸಿ ಮುಟ್ಟಿಸಿ ಬದಲಾಯಿಸುತ್ತೇವೆ ಬದಲಾಗಿ ಇಲ್ಲದಿದ್ದರೆ ಬದಲಾಯಿಸಲು ನಾವು ಬಂದೇ ಬರುತ್ತೇವೆ ಇದೇ ನಮ್ಮ ಶಪಥ ಇದೇ ನಮ್ಮ ಗುರಿ ಇದು ಕೊನೆಯಲ್ಲ ಆರಂಭ ಯಾಕೆಂದರೆ ಹತಾಶೆ ಗೊಂಡ ಮನಸುಗಳು ಸರ್ಕಾರಿ ಸೌಲಭ್ಯ ಸಿಗದೆ ನೊಂದ ಮನಸುಗಳೆಷ್ಟು ಬೆಂದ ಹೃದಯಗಳೆಷ್ಟು ಬದಲಾಗಬೇಕಿದೆ ಇಂದಿನ ಯುವಜನತೆ ಬದಲಾಯಿಸಬೇಕಿದೆ ನಾವು ನೀವೆಲ್ಲರೂ
ಆದಕಾರಣ ತಾಲೂಕಿನಲ್ಲಿ ಎಷ್ಟೋ ಜನ ಉದ್ಯೋಗವಿಲ್ಲದೆ ರಾಜ್ಯವಲ್ಲದ ಅಂತರಾಜ್ಯದಲ್ಲಿ ಹೋಗಿ ದುಡಿಯುವ ಜೀವಿಗಳೆಷ್ಟು ಶಪಿಸುವ ಹೃದಯಗಳೆಷ್ಟು ಅದನ್ನ ಯಾರಾದರೂ ಅರ್ಥ ಮಾಡಿಕೊಂಡಿದ್ದೀರಾ ಇಲ್ಲ ಅವರ ತುಡಿತಗಳನ್ನು ಮನಗಂಡು ನಾನು ಏಕಾಂಗಿಯಾಗಿ ಈ ಅವ್ಯವಸ್ಥೆ ವಿರುದ್ಧ ಹೋರಾಡುವುದಕ್ಕೆ ಸೈ ದಯವಿಟ್ಟು ನಮ್ಮ ವಿಚಾರ ಸಂಕಿರಣಕ್ಕೆ ಹಾಗೂ ನಮ್ಮ ಸಿದ್ಧಾಂತಕ್ಕೆ ನೈತಿಕ ಬೆಂಬಲ ಕೊಟ್ಟರೆ ಸಾಕು ನಿಮ್ಮ ಪರವಾಗಿ ನಾನು ಯಾವತ್ತೂ ನಾನು ಸಮಾಜ ಸೇವೆಗೆ ರೆಡಿ ಯಾಕಂದರೆ ಶತಶತಮಾನಗಳಿಂದ ಹಿಂದುಳಿದ ಸಮುದಾಯದವರಿಗೆ ತಾಲೂಕಿನಲ್ಲಿ ಯಾವ ರೀತಿಯ ಸೌಲಭ್ಯಸಿಕ್ಕಿದೆ ಆತ್ಮವಲೋಕನ ಮಾಡಿಕೊಳ್ಳಿ ಬದಲಾಗಿ ಯುವಕರೆ ಬದಲಾಯಿಸಿ ವ್ಯವಸ್ಥೆಯನ್ನು ನೀವು ಎಲ್ಲಿವರೆಗೂ ಎಚ್ಚೆತ್ತುಕೊಳ್ಳುವುದಿಲ್ಲ ಅಲ್ಲಿಯವರೆಗೂ ಈ ಅವ್ಯವಸ್ಥೆ ಮುಂದುವರಿತಾನೆ ಇರುತ್ತೆ ನಾವಲ್ಲ ನಮ್ಮ ಮಕ್ಕಳು ಸಹಿತ ನಿರ್ಗತಿಕರಾಗಿ ಹೊರಗಿನ ರಾಜ್ಯಗಳಿಗೆ ದುಡಿಯಲು ಹೋಗಬೇಕಾದ ಸನ್ನಿವೇಶ ಎದುರಾಗುತ್ತದೆ ಇದು ನಿಮಗೆ ಬೇಕಾ?
ತಾಲೂಕುನ್ನು ಸಿಂಗಾಪುರ ಮಾಡ್ತೀನಿ ಅಂತ ಹೇಳಿದವರು ಏನು ಮಾಡಿದರು ವಿಚಾರ ಮಾಡಿ ವಿಚಾರವಂತರಾಗಿ ದಯವಿಟ್ಟು ನಮ್ಮ ವಿಚಾರ ವಿಮರ್ಶೆಗಳಿಗೆ ಕೈಜೋಡಿಸಿ ಬದಲಾವಣೆಗೆ ಕೈಜೋಡಿಸಿ ಬದಲಾಯಿಸೋಣ ನಾವು ನೀವು.
ಇಲ್ಲಿ ಯಾರಿಗೆ ಯಾರು ನಾಯಕರಲ್ಲ ನೀವೇ ಪ್ರಜೆಗಳೇ ಪ್ರಭುಗಳು ಮತ್ತು ನಾಯಕರು ಪ್ರಜಾಸತ್ತಾತ್ಮಕ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರು ನಾಯಕರೆ ಅರ್ಥ ಮಾಡಿಕೊಳ್ಳಿ,ಅರ್ಥಮಾಡಿಕೊಳ್ಳದವರಿಗೆ ಅರ್ಥ ಮಾಡಿಸಿ !
ಇದು ಇಂದು ನಿನ್ನೆಯದಲ್ಲ ದಯವಿಟ್ಟು ಅರ್ಥ ಮಾಡಿಕೊಳ್ಳಿ ಯಾಕೆಂದರೆ ಇವರಿಂದ ನಮಗೆ ಯಾವ ನ್ಯಾಯ ಸಿಕ್ಕಿದೆ ಎದೆ ಮುಟ್ಟಿಕೊಂಡು ಹೇಳಿ ಬದಲಾಗಿ ಬದಲಾಯಿಸಿ
ನಿಮ್ಮ ಜೊತೆ ನಾನಿದ್ದೇನೆ ಯಾವತ್ತು ನಾವು ಬದಲಾಗುವುದಿಲ್ಲವೋ ಅಲ್ಲಿಯತನಕ ಈ ವ್ಯವಸ್ಥೆ ಬದಲಾಗುವುದಿಲ್ಲ ದಯವಿಟ್ಟು ನಾವು ಬದಲಾಗೋಣ ನೀವು ಬದಲಾಗಿ ನಮ್ಮ ಯಡ್ರಾಮಿ ತಾಲೂಕಿನ ಅತ್ಯಂತ ಪ್ರತಿಭಾನ್ವಿತರು ಪದವೀಧರರು ಗ್ರಾಜುವೇಟ್ ಪರ್ಸನ್ಸ್ ಬಿಎ ಬಿಎಡ್ ಎಂ ಟೆಕ್ ಎಮ್ ಎಸ್ ಡಬ್ಲ್ಯೂ ಪಿ ಎಚ್ ಡಿ ಇನ್ನೂ ಹಲವಾರು ಡಿಗ್ರಿ ಪಡೆದುಕೊಂಡು ಕುರಿ ಸಾಕಾಣಿಕೆ ಹೈನುಗಾರಿಕೆ ಹೊಲ ಗದ್ದೆಗಳಲ್ಲಿ ರೈತಪಿ ಜನರಾಗಿ ಬಡಜನರ ಮಕ್ಕಳು ವಿದ್ಯಾವಂತರಿದ್ದರು ಇಂಥ ಪರಿಸ್ಥಿತಿ ದುಸ್ಥಿತಿ ಇದು ವಿಪರ್ಯಾಸದ ಸಂಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿಲ್ಲ ಹಾಗೂ ಪದವೀಧರರಿಗೆ ನೌಕರಿ ಇಲ್ಲ ಪ್ರಜ್ಞಾವಂತರು ನೀವೇ ನಿರ್ಧರಿಸಿ ಪ್ರತಿಯೊಬ್ಬರಿಗೂ ಪುಕ್ಕಟೆ ಭಾಗ್ಯ ಭರವಸೆ ಕೊಟ್ಟು ನೌಕರಿ ಭಾಗ್ಯ ಕೊಡದೆ ನಿರುದ್ಯೋಗಿ ಭಾಗ್ಯ ನೀಡುವ ಇಂತ ರಾಜ್ಯ ಸರ್ಕಾರ ನಿಮಗೆ ಬೇಕೆ ಪ್ರಜ್ಞಾವಂತರು ಪದವಿದರು ನಿರುದ್ಯೋಗಿಗಳು ನೀವೇ ನಿರ್ಧರಿಸಿ ಪ್ರತಿಯೊಬ್ಬರನ್ನು ಬದಲಾಗಿಸಿ ನಮ್ಮ ನಿಮ್ಮ ತೆರಿಗೆ ದುಡ್ಡಲ್ಲಿ ಮೋಜು ಮಸ್ತಿ ಮಾಡಿ ಪರದೇಶಗಳಲ್ಲಿ ಮೆರೆದಾಡುವವರು ನಿಮಗೆ ಬೇಕಾ ಅಥವಾ ನಿಮ್ಮ ಮನಸ್ಥಿತಿಯನ್ನು ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿಮ್ಮ ಜೊತೆ ಕೈಜೋಡಿಸುವವರು ಬೇಕಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮಗೆ ಮತದಾನದ ಹಕ್ಕನ್ನು ಕೊಟ್ಟಿದ್ದಾರೆ ರಾಜರ ಹೊಟ್ಟೆಯಲ್ಲಿ ರಾಜ ಹುಟ್ಟುವುದಿಲ್ಲ ಪ್ರಜೆಗಳೇ ರಾಜರನ್ನಾಗಿ ಆಯ್ಕೆ ಮಾಡುವ ಅಧಿಕಾರ ಕೊಟ್ಟಿದ್ದಾರೆ ಅದು ಮತದಾನದ ಮುಖಾಂತರ ಉತ್ತಮ ರಾಜನನ್ನು ಆಯ್ಕೆ ಮಾಡುವ ಅಧಿಕಾರ ನೀವೇ ನಿರ್ಧರಿಸಿ ಇಂತಿ ನಿಮ್ಮ ಪಕ್ಷೇತರ ಅಭ್ಯರ್ಥಿ ವಿಜಯಕುಮಾರ್ ಜೆ ಮಲ್ಲೇದ್ ಅಭಿಮತ ವ್ಯಕ್ತಪಡಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ