ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಮನುಷ್ಯರನ್ನು ಮನುಷ್ಯರಂತೆ ಕಾಣುವುದೇ ನಿಜವಾದ ಸಮಾನತೆ-ಶಂಭುಲಿಂಗ ವಾಲ್ದೊಡ್ಡಿ ಅಭಿಮತ”

ಬೀದರ್ ನಗರದ ಹೈ.ಕ.ಶಿ. ಸಂಸ್ಥೆಯ
ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಬಿ.ವಿ.ಬಿ. ಕಾಲೇಜು ಆವರಣ ದಿನಾಂಕ 03-01-2023 ಬುಧವಾರ ರಂದು ಅಕ್ಷರದವ್ವ,ಭಾರತದ ಮೊದಲ ಮಹಿಳಾ ಶಿಕ್ಷಕಿ ಶ್ರೀಮತಿ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಚಾರಣೆ ಆಚರಿಸಲಾಯಿತು.
“ಮನುಷ್ಯರನ್ನು ಮನುಷ್ಯರಂತೆ ಕಾಣುವುದೇ ನಿಜವಾದ ಸಮಾನತೆ – ಶಂಭುಲಿಂಗ ವಾಲ್ದೊಡ್ಡಿ ಅಭಿಮತ”
ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಪದ್ಧತಿಗಳಾದ,ಜಾತಿವ್ಯವಸ್ಥೆ, ಶೋಷಣೆ,ದಬ್ಬಾಳಿಕೆ,ತಾರತಮ್ಯ,ಸ್ತ್ರೀ ಅಸಮಾನತೆಯಿಂದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು.ಇದರಿಂದ ಸಮಾಜದಲ್ಲಿ ಅಶಾಂತಿ, ಅಸಮಾಧಾನ ಮತ್ತು ಅಸಮಾನತೆ ಬೇರೂರಿತ್ತು ಎಂದು ನುಡಿದರು.
ಅಕ್ಷರದವ್ವ,ಭಾರತದ ಮೊದಲ ಮಹಿಳಾ ಶಿಕ್ಷಕಿ ಶ್ರೀಮತಿ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಚಾರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಶಂಭುಲಿಂಗ ವಾಲ್ದೊಡ್ಡಿ ಅವರು ಮಾತನಾಡುತ್ತಾ ಸಾಮಾಜಿಕ ಅಸಮಾನತೆಯ ಕುರಿತು ಭಾರತದ ಪ್ರಾಚೀನ ಸಾಮಾಜಿಕ ವ್ಯವಸ್ಥೆಯ ಸುಧಾರಣೆ ನಿಟ್ಟಿನಲ್ಲಿ ಗೌತಮಬುದ್ಧರಿಂದ ಪ್ರಾರಂಭವಾದ ಪ್ರಯತ್ನ ಸ್ವಾತಂತ್ರ್ಯ ನಂತರದ ಅವಧಿಯವರೆಗೆ ನಿರಂತರವಾಗಿ ನಡೆಯುತ್ತಾ ನಡೆದ ಪ್ರಯತ್ನ ಇಂದಿನ ಈ ಆಧುನಿಕ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದೆ.
ಭಾರತದ ಮಹಿಳಾ ಸ್ಥಿತಿಗತಿಯ ಸುಧಾರಣೆಯಲ್ಲಿ ಸ್ತ್ರೀ ಶಿಕ್ಷಣದ ಮಹತ್ವ ಅರಿತು ಕಾರ್ಯರೂಪಕ್ಕೆ ತಂದರು. ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿತ್ವ ನಿರ್ಮಾಣ, ಶಿಕ್ಷಣದ ಬೆಳವಣಿಗೆಗಾಗಿ ಜ್ಯೋತಿಭಾ ಫುಲೆಯವರು ವಿಶೇಷ ಪ್ರೇರಣೆಯನ್ನು ನೀಡಿ, ಒಬ್ಬ ಶಿಕ್ಷಕಿಯಾಗಿ ನಿರ್ಮಾಣ ಮಾಡಿದರು.ಜೊತೆಗೆ ಸಮಾಜದ ಎಲ್ಲಾ ವರ್ಗದ ಮಹಿಳೆರಿಗಾಗಿ ಶಾಲೆ ಪ್ರಾರಂಭಿಸಿ ಶಿಕ್ಷಣ ನೀಡಲು ಕೈ ಜೋಡಿಸಿದರು. ಈ ಪ್ರಯತ್ನಕ್ಕೆ ಸಾವಿತ್ರಿಬಾಯಿ ಫುಲೆಯವರಿಗೆ ರಾಷ್ಟçದ ಮೊದಲ ಶಿಕ್ಷಕಿ ಎಂಬ ಬಿರುದನ್ನು ಪಡೆದರು. ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ,ಸತಿಸಹಗಮನ ಪದ್ಧತಿಗಳ ನಿರ್ಮೂಲನೆಗಾಗಿ ತಮ್ಮ ಜೀವಿತದ ಕೊನೆಯ ಅವಧಿಯವರೆಗೂ ನಿರಂತರವಾಗಿ ಶ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಮಲ್ಲಿಕಾರ್ಜುನ ಚ.ಕನಕಟ್ಟೆ ಅವರು ಮಾತನಾಡಿ, ಸಾವಿತ್ರಿಬಾಯಿ ಫುಲೆಯವರು ಒಬ್ಬ ಛಲಗಾರ್ತಿಯಾಗಿ,ಹೋರಾಟಗಾರ್ತಿಯಾಗಿ, ಸಮಾಜಸುಧಾರಕರಾಗಿ ದೇಶದಲ್ಲಿ ಹೆಣ್ಣಮಕ್ಕಳ ಸಮಾನ ಶಿಕ್ಷಣಕ್ಕಾಗಿ ಶ್ರಮಿಸಿದ ಏಕೈಕ ಮಹಿಳೆ.ಇದಕ್ಕೆ ಪ್ರತಿಯಾಗಿ ಇಂದಿನ ಸಮಾಜದಲ್ಲಿ ಪ್ರತಿಯೊಂದು ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರವು ಹೆಚ್ಚಳವಾಗಿದೆ.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಶಿಲ್ಪಾ ಹಿಪ್ಪರಗಿ,ಶ್ರೀಮತಿ ವೀಣಾ ಎಸ್.ಜಲಾದೆ,ಡಾ. ಸಂತೋಷಕುಮಾರ ಸಜ್ಜನ,ರಾಜಕುಮಾರ ಶಿಂಧೆ, ಪಾಂಡುರಂಗ ಕುಂಬಾರ ಉಪಸ್ಥಿತರಿದ್ದರು.ವೈಷ್ಣವಿ ನಿರೂಪಿಸಿದರು,ಕಾವೇರಿ ಸ್ವಾಗತಿಸಿದರು,ಪ್ರಿಯಾಂಕ ವಂದಿಸಿದರು.

ವರದಿ:ಸಾಗರ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ