ಬಸವಕಲ್ಯಾಣ:ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಸ್ವಾಮಿ ವಿವೇಕಾನಂದರು ಜಗತ್ತಿನ ಶ್ರೇಷ್ಠ ಚೇತನರು.ಅವರು ಭಾರತೀಯ ಸಾಂಸ್ಕೃತಿಕ ಜಗತ್ತಿನ ಚೇತನರಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದಿಂದ ಬುಧವಾರ ಹಮ್ಮಿಕೊಂಡಿದ್ದ ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದರು ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಸ್ವಾಮಿ ವಿವೇಕಾನಂದರ ತತ್ವಗಳನ್ನು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದರ ಚಿಂತನೆ ಯುವ ಸಮುದಾಯಕ್ಕೆ ಮುನ್ನಡೆಸುವ ಹಾಗೂ ಸಾವಿತ್ರಿಬಾಯಿ ಫುಲೆ ಅವರ ತತ್ವಗಳು ಎಲ್ಲ ಭಾರತೀಯರನ್ನು ದಾರಿದೀಪವಾಗಬೇಕು ಅವರ ಪ್ರಭಾವದಿಂದ ಭಾರತದ ಸಮಾಜಕ್ಕೆ ಪ್ರಗತಿಪರ ಮಾರ್ಗದೊರೆತಿದೆ.ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣ ಸರ್ವ ಧರ್ಮದ ಸಾರವನ್ನು,ಸಂದೇಶ ಮನುಷ್ಯನ ಒಳಿತು ಸೂಚಿಸಿದ್ದು ತಿಳಿಸುತ್ತದೆ ಎಂದರು. ಬಸವೇಶ್ವರ ಪದವಿ ಕಾಲೇಜಿನ ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ,ಸ್ವಾಮಿ ವಿವೇಕಾನಂದರು ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ಭಾರತೀಯತೆಯನ್ನು ಇಡೀ ಜಗತ್ತಿನ ಅರುಹಿದ್ದಾರೆ.ಸುಧಾರಣಾವಾದಿ ನೆಲೆಯಲ್ಲಿರುವ ಅವರ ಚಿಂತನೆ ಯುವ ಸಮುದಾಯದ ಶಕ್ತಿ,ಸಾಮರ್ಥ್ಯ,ಪ್ರತಿಭೆಗಳು ಸದುಪಯೋಗವಾಗಲು ಹಂಬಲಿಸಿದ್ದವು.ಮೌಢ್ಯ, ಅಜ್ಞಾನ,ಬಡತನ,ಜಾತಿಯತೆಯನ್ನು ಸ್ವಾಮಿ ವಿವೇಕಾನಂದರು ಕಟುವಾಗಿ ವಿರೋಧಿಸಿದ್ದರು ಎಂದರು.
ಸ್ವಾಮಿ ವಿವೇಕಾನಂದರು ವ್ಯಕ್ತಿ ಸ್ವಾತಂತ್ರ್ಯ,ಸಮಾನತೆ, ಆರ್ಥಿಕತೆ ಗಟ್ಟಿಗೊಳಿಸುವ ಉತ್ತಮ ಉದ್ಯೋಗಕ್ಕೆ , ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು.ಮಹಿಳಾ ಶಿಕ್ಷಣವನ್ನು ಹೆಚ್ಚು ಪ್ರೋತ್ಸಾಹ ನೀಡಿದ್ದರು.ತತ್ವಜ್ಞಾನ,ದರ್ಶನ ಮತ್ತು ಭಾರತೀಯ ಸಂಸ್ಕೃತಿ ಲೋಕಕ್ಕೆ ಪರಿಚಯಿಸಿದ ಶ್ರೇಷ್ಠ ಚೇತನ.ಭಾರತದ ಅಕ್ಷರ ಜಗತ್ತು ಹೊಳೆಯುವಂತೆ ಮಾಡಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಹೊಸ ಶಿಕ್ಷಣ ಕ್ರಾಂತಿ ತಂದ ಧೀಮಂತ ಚೇತನ ಅವರ ನೋಟ ಮತ್ತು ನಿಲುವುಗಳಿಂದ ಸಾರ್ವತ್ರಿಕ ಶಿಕ್ಷಣ ಪದ್ಧತಿ ಸಂವಿಧಾನದಲ್ಲಿ ಅನುಷ್ಠಾನಕ್ಕೆ ಬರಲು ಸಾಧ್ಯವಾಯಿತು ಎಂದರು.
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಲರಾಮ ಹುಡೆ ಮಾತನಾಡಿ, ಸ್ವಾಮಿ ವಿವೇಕಾನಂದರು ಮತ್ತು ಸಾವಿತ್ರಿಬಾಯಿ ಫುಲೆ ಅವರು ಪ್ರಾತಃಸ್ಮರಣೀಯರು ಅವರ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸುವ ಅಗತ್ಯವಿದೆ ಅವರು ತೋರಿದ ಮಾರ್ಗದಲ್ಲಿ ನಡೆದರೆ ಬದುಕು ಹಸನಾಗುತ್ತದೆ ಎಂದರು.
ಡಾ.ವೀರಶೆಟ್ಟಿ ಚಿಟಗುಪ್ಪ,ದೀಪಕ ಗೌಡ,ಬಸವರಾಜ ಬಿರಾದಾರ,ಕಲಾವತಿ ಪಾಲಾಪೂರೆ,ಶರಣಬಸಪ್ಪ ಜನ್ನಾ,ಮಂಗಲಬಾಯಿ ಹಲವರಿದ್ದರು.
ಡಾ.ಚಂದ್ರಕಾಂತ ಗಾಯಕವಾಡ ಸ್ವಾಗತಿಸಿದರು.ಪ್ರೊ. ಮೀನಾಕ್ಷಿ ಬಿರಾದಾರ ನಿರೂಪಿಸಿದರು.ಡಾ. ಪುಷ್ಪಾಬಾಯಿ ಕೋರೆ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.