ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಗಣಿತಾ ಕಲಿಕಾ ಆಂದೋಲನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮವು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಗ್ರಾಮ ಪಂಚಾಯಿತಿ ಸಮುದಾಯ,ಶಿಕ್ಷಣ ಇಲಾಖೆ ಶೈಕ್ಷಣಿಕ ಸ್ವಯಂ ಸೇವಕರು ಹಾಗೂ ಅಕ್ಷರ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.
ಈ ಗಣಿತ ಕಲಿಕಾ ಆಂದೊಲನದ ಸ್ಫರ್ಧೆಯಲ್ಲಿ ೪ನೇ , ೫ ನೇ,೬ನೇ ತರಗತಿ ವಿದ್ಯಾರ್ಧಿಗಳಿಗೆ 20 ಅಂಕದ ಪರಿಕ್ಷೇ ಏರ್ಪಡಿಸಿ ಹೆಚ್ವು ಅಂಕಪಡೆದ ಪ್ರಥಮ,ದ್ವಿತೀಯ,ತೃತೀಯ ಪಡೆದವರಿಗೆ ಅಭಿನಂದನಾ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಮಕ್ಕಳಲ್ಲಿ ಕಲಿಕಾ ಶಕ್ತಿಯನ್ನು ಹೆಚ್ಚಿಸಲು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಿಡಿಒ ವತ್ಸಲಾ ಮಾತನಾಡಿ ಮಕ್ಕಳ ಕಲಿಕಾ ಅಂಶವನ್ನು ಗ್ರಾಮ ಪಂಚಾಯಿತ ಮಟ್ಟದಲ್ಲಿ ತಿಳಿದುಕೊಂಡು ಕಲಿಕೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ಗ್ರಾಂ.ಪಂ.ಬರಿ ಕಾಮಗಾರಿಗಳಿಗೆ ಸೀಮಿತವಾಗದೆ ಕಲಿಕೆಗೂ ಒತ್ತು ನೀಡುವುದರೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕೆಂದರು.
ಪರಿಕ್ಷೆ ನಡೆಸಿದ ಬಳಿಕ ವಿಜೇತರಾದ ವಿದ್ಯಾರ್ಥಿಗಳು:
೪ನೇ ತರಗತಿ ಪ್ರಥಮ ಅಕ್ಷರ ಸ.ಹಿ.ಪ್ರಾ.ಶಾಲೆ ಹೆಬ್ಬಾಳ,ದ್ವೀತಿಯ ಹರೀಶ,ತೃತೀಯ ರಾಕೇಶ ಸ.ಹಿ.ಪ್ರಾ.ಡಣಾಪೂರ.
೫ನೇ ತರಗತಿ ಪ್ರಥಮ ಶ್ರೀನಿಧಿ ಸ.ಹಿ.ಪ್ರಾ.ಡಣಾಪೂರ,ದ್ವಿತೀಯ ರಾಧಿಕಾ ಸ.ಹಿ.ಪ್ರಾ.ಶಾ.ಹೆಬ್ಬಾಳ ತೃತೀಯ ಕಿರಣ,ಶಿವಕುಮಾರ , ಸುದೀಪ,೬ನೇ ತರಗತಿ ಪಲ್ಲವಿ ಸ.ಹಿ.ಪ್ರಾ.ಶಾ.ಹೆಬ್ಬಾಳ,ಮಲ್ಲಿಕಾರ್ಜುನ ಸ.ಹಿ.ಪ್ರಾ.ಶಾ.ಡಣಾಪುರ,ದ್ವೀತಿಯ ದುರುಗೇಶ, ತೃತಿಯ ಪ್ರತಿಭಾ ಸ.ಹಿ.ಪ್ರಾ.ಶಾ.ಹೆಬ್ಬಾಳ
ಈ ಕಾರ್ಯಕ್ರಮದಲ್ಲಿ ಗ್ರಾಂ.ಪಂಚಾಯಿತಿ
ಪಿಡಿಒ ವತ್ಸಲಾ,ಕಾರ್ಯದರ್ಶಿ ರಾಮಕೃಷ್ಣ,ಶಾಲೆಯ ಪ್ರಭಾರ ಮುಖ್ಯಗುರುಗಳಾದ ವೆಂಕಟೇಶ,ಎಸ್ಡಿಎಂಸಿ ಅಧ್ಯಕ್ಷರಾದ ಹನುಮೇಶ,ಶಾಲಾ ಶಿಕ್ಷಕರಾದ ಫಕೀರಪ್ಪ, ನಿಂಗಪ್ಪ,ವಿನಯ,ಶರಣಬಸವ,ಶಿಕ್ಷಕಿಯರಾದ ಕವಿತಾ, ಪೂಜಾ,ಜ್ಯೋತಿ ಗ್ರಾಂ.ಸಿಬ್ಬಂದಿಗಳಾದ ಪ್ರಕಾಶ, ರವಿ,ನಾಗರಾಜ ಮಲ್ಲಮ್ಮ ಸ್ವಯಂ ಸೇವಕರಾದ ಶ್ರೀನಾಥ,ಶರಣಪ್ಪ,ಹನುಮೇಶ ಅಯ್ಯಣ್,ಮಹಾದೇವಮ್ಮ,ನಿಂಗಮ್ಮ ಹಾಗೂ ಶಾಲಾಮಕ್ಕಳು ಭಾಗಿ ಇದ್ದರು.