ಭೀಮಾ ಕೊರೆಗಂವ್ ಅಂದ್ರೇ ಎನು, ಮತ್ತು ಇದರ ಇತಿಹಾಸ ಎಷ್ಟೋ ಜನಕ್ಕೆ, ಭೀಮಾ ತಿಳಿದಿಲ್ಲಾ, 01/01/1818 ಸಾಲಿನಲ್ಲಿ 28,000 ಪೇಶ್ವೆಗಳನ್ನ ಕೇವಲ 500 ಜನ ಮಹಾರ್ ಸೈನಿಕರು ಯುದ್ದ ಮಾಡಿ ವಿಜಯ್ ಸಾಧಿಸಿದ ದಿನವೇ ಭೀಮಾ ಕೋರೆಗಂವ್.
ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲಿ 206 ನೆಯ ಭೀಮಾ ಕೋರೆಗಂವ್ ವಿಜಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಯೋಜಕರಾದ ಡಾ. ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರುಗಳು ಭೀಮ ಕೋರೆಗಂವ್ ವಿಜಯೋತ್ಸವದ ನಿಮಿತ್ತವಾಗಿ ಶಾಲಾ ಮಕ್ಕಳಿಗೆ ಪುಸ್ತಕ,ಪೆನ್ನುಗಳನ್ನು ವಿತರಿಸುವುದರ ಮೂಲಕ ಗ್ರಾಮದಲ್ಲಿ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.ಯುದ್ದದಲ್ಲಿ ಭಾಗವಹಿಸಿದ 500 ಮಹಾರ್ ಯೋಧರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸುವದರ ಜೊತೆಗೆ ಅವರ ಆದರ್ಶಗಳನ್ನು ನಾವು ನಮ್ಮ ಮುಂದಿನ ಪೀಳಿಗೆಯವರು ಅನುಸರಿಸಬೇಕೆನ್ನುವುದು ಆಶಯವಾಗಿತ್ತು. ದತ್ತಾತ್ರೇಯ ಜೋಗಣ್ಣವರ,ವಿಜಯಕುಮಾರ ಚಲವಾದಿ,ಗುರುನಾಥ ಕೆಂಗಾರಕರ್,ಬಸವರಾಜ ಜೋಗಣ್ಣವರ,V.M.ಶಾಲ್ದಾರರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕೃಷ್ಣಗೌಡ ಶಿವನಗೌಡ್ರರವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಕಾರ್ಯಕ್ರಮದಲ್ಲಿ ಶರಣಪ್ಪ ಚಲವಾದಿ (ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ನರಗುಂದ ತಾಲ್ಲೂಕ ಅಧ್ಯಕ್ಷರು),ನಾಗನಗೌಡ ಕಗದಾಳ (ರೈತ ಮುಖಂಡರು),ಗ್ರಾಮ.ಪಂ.ಅಧ್ಯಕ್ಷರು ಮತ್ತು ಸರ್ವ ಸದಸ್ಯರು-ಸಿಬ್ಬಂದಿ ವರ್ಗದವರು,ಗ್ರಾಮದ ಗುರು ಹಿರಿಯರು,ರೈತ ಬಾಂಧವರು,ಯುವಕರು ಮತ್ತು ಶಾಲಾ ಸಿಬ್ಬಂದಿ ಜೊತೆಗೆ ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ವರದಿ-ನಾಗರಾಜ ಪ್ರಚಂಡಿ