ಭದ್ರಾವತಿ:ವಿಶ್ವ ಹಿಂದೂ ಪರಿಷತ್,ಭಜರಂಗದಳ, ನೇತೃತ್ವದಲ್ಲಿ ಕರಸೇವಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ತಾಲ್ಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಮಾಧವಾಚಾರ್ ವೃತ್ತದಿಂದ ಸಿ ಎನ್ ರಸ್ತೆ,ರಂಗಪ್ಪ ವೃತ್ತದ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಹಿಂದೂ ಸಂಘಟನೆಗಳ ಮುಖಂಡರಾದ ಹಾ ರಾಮಪ್ಪ,ಕೆ ಎನ್ ಶ್ರೀಹರ್ಷ,ಶಿವರಾಜ್,ಬಿ ಕೆ ಶ್ರೀನಾಥ್, ಜಿ.ಧರ್ಮಪ್ರಸಾದ್ ಮುಂತಾದವರು ಮಾತನಾಡಿದರು.
ಹಿಂದೂಗಳನ್ನು ಬಗ್ಗುಬಡಿಯುವ ಉದ್ದೇಶದಿಂದಲೇ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕರಸೇವಕರನ್ನು,ರಾಮಭಕ್ತರನ್ನು ಬಂಧಿಸಿರುವುದು ಖಂಡನೀಯ ಕೂಡಲೇ ಬಂಧಿಸಿರುವ ಕರಸೇವಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿ.ಕದಿರೇಶ್,ವಿಶ್ವನಾಥರಾವ್, ಹೇಮಾವತಿ ವಿಶ್ವನಾಥ್ ರಾವ್,ಸುರೇಶಪ್ಪ,ಬಿ ಜಿ ರಾಮಲಿಂಗಯ್ಯ,ಕಾ.ರಾ ನಾಗರಾಜ್,ವಡಿವೇಲು, ಸೇರಿದಂತೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ