ಎಳ್ಳು ಅಮಾವಾಸ್ಯೆ ಇದು ಭೂ ತಾಯಿಗೆ ಆರಾಧಿಸುವ ರೈತರು ಹಬ್ಬ ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಭೂ ತಾಯಿಯನ್ನು ಪೂಜಿಸುವ ಹಬ್ಬ ಎಳ್ಳು ಅಮಾವಾಸ್ಯೆ ಹಬ್ಬಕ್ಕೆ ಮನೆಯೂ ಸಂಭ್ರಮ ಸಡಗರ ಮನೆಮಾಡಿರುತ್ತದೆ ಬಗೆ ಬಗೆಯ ಅಡುಗೆಗಳನ್ನು ಮಾಡಿಕೊಂಡು ಭೂ ತಾಯಿಗೆ ಪೂಜೆ ಮಾಡುತ್ತಾರೆ
ಹಬ್ಬದ ದಿನ ಬೆಳಿಗ್ಗೆ ಬೇಗನೆ ಎದ್ದು ರೈತರು ಎತ್ತುಗಳನ್ನು ತೊಳೆದು ಮೈ ತುಂಬಾ ಬಣ್ಣದಿಂದ ಸಿಂಗರಗೊಳಿಸಿರುತ್ತಾರೆ ಕೊಂಬುಗಳಿಗೆ ಬಣ್ಣಬಣ್ಣದ ರಿಬ್ಬನ್ ಕಟ್ಟಿ,ಕಾಲುಗಳಿಗೆ ಗೆಜ್ಜೆಗಳನ್ನು ಕಟ್ಟಿರುತ್ತಾರೆ ಎತ್ತಿನ ಮೈ ತುಂಬಾ ಚಿತ್ತಾರದ ಹಬ್ಬ ಹಾಗೂ ಎತ್ತಿನ ಬಂಡಿಗೆ ಬಣ್ಣ ಬಣ್ಣದ ಸಿಂಗಾರ ಮಾಡಿರುತ್ತಾರೆ, ಮನೆಯಲ್ಲಿ ಭೂ ಪೂಜೆಗೆ ಹಲವಾರು ರೀತಿಯಲ್ಲಿ ಅಡುಗೆಗಳನ್ನು ಮಾಡಿರುತ್ತಾರೆ ಜೋಳದ ರೊಟ್ಟಿ, ಎಳ್ಳು ರೊಟ್ಟಿ,ಎಳ್ಳು ಹೋಳಿಗೆ,ಉಣ್ಣದ ಹೋಳಿಗೆ,ಚಾಪಾತಿ ಪಲ್ಯ,ಚಟ್ನಿ ಹಾಗೂ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ ಹೊಲಕ್ಕೆ ಹೋಗುವಾಗ ಹೆಣ್ಣುಮಕ್ಕಳು ತಲೆಯ ಮೇಲೆ ಬುಟ್ಟಿಯನ್ನು ಹೊತ್ತು ಕೊಂಡು ಊರಿಂದ ಬಂದ ಬಂಧುಗಳನ್ನು ಕರೆದುಕೊಂಡು ಬಂಡಿ ಮೂಲಕವೇ ಇಲ್ಲಾ ನಡೆದುಕೊಂಡು ಅಥವಾ ಗಾಡಿಗಳ ಮೂಲಕ ತಮ್ಮ ತಮ್ಮ ಹೊಲಕ್ಕೆ ಹೋಗುತ್ತಾರೆ.
ಹೊಲದಲ್ಲಿ 5 ಸಣ್ಣ ಕಲ್ಲುಗಳನ್ನು ಹುಡುಕಿಕೊಂಡು ಬನ್ನಿಗಿಡದ ಕೆಳಗಡೆ ಇಟ್ಟು ಭೂಮಿ ತಾಯಿಗೆ ಪೊಜೆಯನ್ನೂ ಮಾಡುತ್ತಾರೆ ಹಾಗೂ ತಾವು ತಯಾರಿಸಿದ ಹಲವು ರೀತಿಯ ನೈವೇಧ್ಯವನ್ನು ಭೂ ತಾಯಿಗೆ ಅರ್ಪಿಸುತ್ತಾರೆ ಆಗ ಮನೆಯ ಹಿರಿಯರೊಬ್ಬರು ಹೋಳಿಗೆ,ಅನ್ನ ಈ ರೀತಿ ನೈವೇದ್ಯವನ್ನು ಭೂ ತಾಯಿಗೆ ಬನ್ನಿ ಗಿಡದ ಸುತ್ತ 5 ಸುತ್ತುತ್ತಾ ಮುಂದೆ ಹಿರಿಯರೊಬ್ಬರು “ಹುಲಿಗೋ” ಎಂದು ಹೇಳುತ್ತಾ ಕುಟುಂಬ ಸದಸ್ಯರು ಕೂಡಾ ಸುತ್ತು ಹಾಕುತ್ತಾ “ಚೆಲ್ಲಬ್ಬರಿಗೂ”ಎಂದು ಹೇಳುತ್ತಾರೆ ಪೊಜೆ ಮಾಡುತ್ತಾರೆ ಕುಟುಂಬದ ಸದಸ್ಯರು ಎಲ್ಲರೂ ಒಂದೇ ಕಡೆ ಕುಳಿತುಕೊಂಡು ಊಟವನ್ನು ಮಾಡಿ ಆಟ ಆಡಿ ಸಂಭ್ರಮಿಸುತ್ತಾರೆ.
-ನಿಮ್ಮ ಜಿ ಕೆ (ಕೊಪ್ಪಳ)