ವಿಜಯನಗರ ಜಿಲ್ಲೆ ಕೊಟ್ಟೂರು ;
ಪಟ್ಟಣದ ಗಂಗೋತ್ರಿ ಕಾಲೇಜಿನಲ್ಲಿ ಸಂಜೀವಿನಿ ಸಮಾಜ ಅಭಿವೃದ್ಧಿ ಸಂಸ್ಥೆಯ ವತಿಯಿಂದಿ ಇಂದು ಸಂಜೀವಿನಿ ಟ್ಯಾಲೆಂಟ್ ಸರ್ಚ್ ಪರೀಕ್ಷೆಯನ್ನು ಕೊಟ್ಟೂರು ತಾಲೂಕಿನ 15 ಪ್ರೌಢಶಾಲೆಗಳ ಗ್ರಾಮೀಣ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಗೆ ಒಟ್ಟು 334 ವಿದ್ಯಾರ್ಥಿಗಳು ನೊಂದಣಿಯನ್ನು ಮಾಡಿಕೊಂಡಿದ್ದರು ಅದರಲ್ಲಿ 309 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಪರೀಕ್ಷೆಯ ಆಂತರಿಕ ಮೇಲ್ವಿಚಾರಕರಾದ ಶ್ರೀ ಮರುಳಪ್ಪ ಕೆ ಗೌರವಾಧ್ಯಕ್ಷರು ಇವರು ಪತ್ರಿಕ ಪ್ರಕಟಣೆಯನ್ನು ತಿಳಿಸಿದ್ದಾರೆ ಹಾಗೂ ಪರೀಕ್ಷೆಯ ಪರೀಕ್ಷಕರಾಗಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಶ್ರೀ ಆನಂದ್ , ನಿಂಗಪ್ಪ ಮತ್ತು ಭಾಗೀರಥಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ನಿರ್ಮಲ ಶಿವನ ಗುತ್ತಿ , ಉಪನ್ಯಾಸಕರಾದ ಶ್ಯಾಮ್ ರಾಜ್ ಟಿ.ಇವರು ಪರಿವೀಕ್ಷಣೆ ಮಾಡಿದರು.ಗಂಗೋತ್ರಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ರಜತ್ ಸಿ. ಬಿ. ಹಾಗೂ ನಿರ್ದೇಶಕರಾದ ಶ್ರೀಮತಿ ರಚನಾ ರಜತ್ ಇವರು ಯಾವಾಗಲೂ ಸಂಜೀವಿನಿ ಸಂಸ್ಥೆಗೆ ನೆರವು ಹಾಗೂ ಸಹಕಾರ ನೀಡುತ್ತಿದ್ದಾರೆ. ಮುಂದಿನ ಒಂದು ವಾರದ ಒಳಗೆ ಮೌಲ್ಯಮಾಪನ ಕಾರ್ಯ ಮುಗಿಸಿ ಫಲಿತಾಂಶವನ್ನು 15 ಶಾಲೆಗೆ ಕಳುಹಿಸಿಕೊಡಲಾಗುವುದು ಪ್ರತಿ ಶಾಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ಕೊಟ್ಟೂರು ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಕಾರ್ಯಕ್ರಮವನ್ನು ಆಯೋಜಿಸಿ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಸಂಜೀವಿನಿ ಸಮಾಜ ಅಭಿವೃದ್ಧಿ ಸಂಸ್ಥೆಯ ಸಂಯೋಜಕ ಶಶಿಕಿರಣ ಕೆ ಇವರು ತಿಳಿಸಿದರು.ಪರೀಕ್ಷೆಯ ಕೊಠಡಿ ಮೇಲ್ವಿಚಾರಕರಾಗಿ ಶಿವಕುಮಾರ್ ಎ.ಎಂ, ಗುರುಬಸವರಾಜ ಎ.ಎಂ.ಎಂ, ಕೊಟ್ರೇಶ ಪಿ ಕೆ.ಎಂ ಪೂರ್ಣಚಂದ್ರ, ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗಪ್ಪ ಡಿ. ನಾರಾಯಣ ಹೆಚ್. ವಿನಯಕುಮಾರ,ವೇದಾವತಿ ಅನುಷಾ ಸುಪ್ರಿಯಾ ಇತರರು ಕಾರ್ಯನಿರ್ವಹಿಸಿದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.