ಪರೀಕ್ಷೆಗಳು ಹತ್ತಿರ ಬಂದಿದೆ
ನಾಳೆಗೆ ತಯಾರಿ ನಡೆದಿದೆ
ಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದೇ ಗೊಂದಲ ಗೂಡಾಗಿದೆ
ಪ್ರಶ್ನೆ ಪತ್ರಿಕೆಯನ್ನು ತಲೆ ಕೆಳಗಾಗಿ ಓದಿದೆ
ಉತ್ತರ ಗೊತ್ತಾಗಿದೆ ಹೆದರಿದೆ
ಕೈಯಲ್ಲಿರುವ ಲೇಖನಿ ಜಾರಿ ಬಿದ್ದಿದೆ
ಓದಿದ್ದ ಕೆಲವು ಉತ್ತರಗಳು ನೆನಪಿಗೆ ಬಾರದಾಗಿದೆ
ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಸಂಖ್ಯೆ ಮಾಯವಾಗಿದೆ
ಕೊನೆಗೆ ಏನು ತಿಳಿಯದೆ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನೇ ಬರೆದೆ
-ಚಂದ್ರಶೇಖರಚಾರಿ ಎಂ,ಶಿಕ್ಷಕರು
ವಿಶ್ವ ಮಾನವ ಶಾಲೆ,ಸೀಬಾರ ಗುತ್ತಿನಾಡು,ಚಿತ್ರದುರ್ಗ