ಚಾಮರಾಜನಗರ/ಹನೂರು:
ವಾರ್ಷಿಕ ಪರೀಕ್ಷೆಗಳಿಗೆ ಇನ್ನು ಕೆಲವೇ ದಿನಗಳು ಉಳಿದಿದ್ದು ವಿದ್ಯಾರ್ಥಿಗಳು ಈಗಿನಿಂದಲೇ ವಿಷಯವಾರು ವಿಷಯಕ್ಕೆ ಆದ್ಯತೆಯನ್ನು ನೀಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಹನೂರು ತಾಲೂಕು ವತಿಯಿಂದ ಇಂದು ಮಾರ್ಟಳ್ಳಿಯ ಸೆಂಟ್ ಜೋಸೆಫ್ ಶಾಲೆ ಮತ್ತು ಹೂಗ್ಯಂ ಮೊರಾರ್ಜಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್.ಎಸ್.ಎಲ್.ಸಿ/ಪಿ ಯು ಸಿ ಮಕ್ಕಳಿಗೆ ಭರವಸೆ ತುಂಬುವ ಕಾರ್ಯಕ್ರಮ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಆಯೋಜಿಸಲಾಗಿದ್ದ ಭರವಸೆ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ
ವಿದ್ಯಾರ್ಥಿಗಳು ತಂದೆ ತಾಯಿಗಳ ತ್ಯಾಗ,ಶಿಕ್ಷಕರ ಶ್ರಮ ಮತ್ತು ಮಾರ್ಗದರ್ಶನವನ್ನು ಅರಿತು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು,ಪಟ್ಟಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಉತ್ತಮವಾದ ಪರಿಸರ ವಾತಾವರಣವನ್ನು ಹೊಂದಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಕೃತಿಯನ್ನೇ ಶಕ್ತಿಯನ್ನಾಗಿಸಿ ಮುನ್ನುಗ್ಗಬೇಕು.ಬರೆದಿರುವುದನ್ನು ಓದಿ,ಓದಿದ್ದನ್ನು ಮನನಮಾಡಿಕೊಂಡು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಬೇಕು.ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಗಣಿತ ವಿಷಯಗಳಲ್ಲಿ ಪ್ರಬುದ್ಧತೆ ಸಾಧಿಸುವ ನಿಟ್ಟಿನಲ್ಲಿ ಕಾರ್ಯಗಾರಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.ನನ್ನ ಮೊದಲ ಆದ್ಯತೆ ಶಿಕ್ಷಣ,ಆರೋಗ್ಯ,ರೈತ ಆಗಿದ್ದು,ಶಿಕ್ಷಣ ಇಲಾಖೆಗೆ ಬೇಕಾದ ಸಹಕಾರವನ್ನು ನಾನು ಸದಾ ಒದಗಿಸುತ್ತೇನೆ ಎಂದರು ಫಾದರ್ ಟೆನ್ನಿ ಕುರಿಯನ್ ನಿಮಗೆಲ್ಲ ಆದರ್ಶ ಎಂಬುದನ್ನು ತಿಳಿಸಿದರು.
ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಭರವಸೆ: ಶಾಸಕ ಎಂ.ಆರ್.ಮಂಜುನಾಥ್ ವಿನೂತನ ಆಲೋಚನೆಯಲ್ಲಿ ಮೂಡಿ ಬಂದಿರುವ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ದಿಸೆಯಲ್ಲಿ ಆಯೋಜಿಸಲಾಗಿದ್ದ ಭರವಸೆ ತುಂಬುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಿಂದ ನಮಗೆ ನಿಜಕ್ಕೂ ಸ್ಫೂರ್ತಿ, ಧೈರ್ಯ ಆತ್ಮವಿಶ್ವಾಸ ಮೂಡಿದೆಖಂಡಿತ ನಾವು ಉತ್ತಮ ಫಲಿತಾಂಶ ತಂದು ನಾವು ಓದಿದ ಶಾಲೆ, ಕಾಲೇಜು,ಶಿಕ್ಷಕರು,ತಂದೆ ತಾಯಿ,ನಿಮ್ಮೆಲ್ಲರಿಗೂ ಕೀರ್ತಿ ತರುತ್ತೇವೆ ಎಂದು ಭರವಸೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಫಾದರ್ ಟೆನ್ನಿ ಕುರಿಯನ್,ಉಪನಿರ್ದೇಶಕ ರಾಮಚಂದ್ರರಾಜೆ ಅರಸು,ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು,ಶಿಕ್ಷಣ ಸಂಯೋಜಕ ಕಿರಣ್ ಕುಮಾರ್,ಕಂದವೇಲು ಸಿ.ಆರ್.ಪಿ.ಗಳಾದ ಅನಿಲ್ ಕುಮಾರ್,ಷಣ್ಮುಗಂ ದೇವರಾಜು ಮತ್ತು ಮುನಿರಾಜು,ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರುಗಳು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್