ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಸರಕಾರಿ ನೌಕರರ ಭವನದಲ್ಲಿ ಸೋಮವಾರ ಡಿ.ದೇವರಾಜು ಅರಸು ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ವಿಶ್ವಕರ್ಮ ಮತ್ತು ಅದರ ಉಪಜಾತಿಗಳ ಕುಲಶಾಸ್ತ್ರ ಅಧ್ಯಯನ (ಮೈಸೂರು ವಿದ್ಯಾಲಯದ ಪ್ರೊ.ಡಾ.DC ನಂಜುಂಡ,ಡಾ.ಮಹಾದೇವ ಹಾಗೂ ಡಾ.ಕೃಷ್ಣಮೂರ್ತಿ ಅವರ ನೇತೃತ್ವದ ತಂಡದಿಂದ ರಾಯಚೂರು ನಗರದ ಸರಕಾರಿ ನೌಕರರ ಭವನದಲ್ಲಿ ಸಂವಾದ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮ ನೆರವೇರಿತು.
ಪ್ರೊ.ಶ್ರೀ DC ನಂಜುಂಡ ಅವರ ನೇತೃತ್ವದ ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನ ತಂಡ ವಿಶ್ವಕರ್ಮ ಜನಾಂಗದವರ ಇತಿಹಾಸ ಮತ್ತು ಅವರ ಮೂಲ ಆಚಾರ ವಿಚಾರ ಪದ್ಧತಿ,ಧಾರ್ಮಿಕ ಸಂಸ್ಕೃತಿ ಮತ್ತು ಹಲವಾರು ನಡವಳಿಕೆಗಳ ಇಂದಿನ ಆರ್ಥಿಕ ಶೈಕ್ಷಣಿಕ, ರಾಜಕೀಯ,ಔದ್ಯೋಗಿಕ,ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.ಇಂದಿನ ಈ ಸಭೆಯಲ್ಲಿ ಸಮಾಜದ ಜಿಲ್ಲೆಯ ಹಲವಾರು ಜನ ಉಪಸ್ಥಿತರಿದ್ದು ತಮ್ಮ ತಮ್ಮ ವಿವಿಧ ರೀತಿಯ ಆಚಾರ,ಕಲೆ,ಸಾಹಿತ್ಯ, ಸಾಂಸ್ಕೃತಿಕ,ಧಾರ್ಮಿಕತೆಯ ಹಾಗೂ ಸಾಧನೆಗಗಳ ವಿಚಾರಗಳ ಅಭಿಪ್ರಾಯಗಳನ್ನು ಕುಲಶಾಸ್ತ್ರ ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಎಲ್ಲಾ ತಾಲೂಕುಗಳಿಂದ ಕುಲಶಾಸ್ತ್ರದ ಪಾರಂಗಳನ್ನು ನೀಡಿ ಸಮಾಜದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು,ಸಿಂಧನೂರು, ಮಸ್ಕಿ,ಲಿಂಗಸೂಗೂರು,ಶಿರವಾರ,ದೇವದುರ್ಗ,ಮಾನವಿ ತಾಲೂಕುಗಳ ವಿಶ್ವಕರ್ಮ ಮುಖಂಡರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.