ಕಲಬುರಗಿ:ಕಲ್ಯಾಣ ಕರ್ನಾಟಕ ನಗರ ಮತ್ತು ಗ್ರಾಮೀಣ ಅಭಿವೃದ್ದಿ ಚಾರಿಟೇಬಲ ಟ್ರಸ್ಟ್ ಉದ್ಘಾಟನಾ ಸಮಾರಂಭ ಇಲ್ಲಿನ ಜಗತ್ ವೃತ್ತದ ಆಮಂತ್ರಣ ಹೋಟೆಲನಲ್ಲಿ ನಡೆಯಿತು.ದಿವ್ಯಸಾನಿಧ್ಯವನ್ನು ವಹಿಸಿಕೊಂಡ ಗದಗ ಬಸಯ್ಯ ಶಾಸ್ತ್ರಿಗಳು ಮಾತನಾಡಿ ಅಂಧರು, ಅನಾಥರಿಗೆ ಸಂಗೀತ ಕಲಿಸಿ ವಿದ್ಯೆ,ಅನ್ನದಾನ ಮಾಡಿ, ವಸತಿ ನೀಡಿ ಸರ್ವರ ಬಾಳಿಗೆ ಬೆಳಕಾಗಬೇಕು.ಕಲ್ಯಾಣ ಕರ್ನಾಟಕ ನಗರ ಮತ್ತು ಗ್ರಾಮೀಣ ಅಭಿವೃದ್ದಿ ಹೆಸರಿನ ಟ್ರಸ್ಟ್ ಉತ್ತಮವಾಗಿ ಬೆಳೆಯಲಿ’ ಎಂದು ಆಶಿಸಿದರು.
ಉತ್ತಮ ಸದುದ್ದೇಶದಿಂದ ಟ್ರಸ್ಟ್ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಪದಾಧಿಕಾರಿಗಳು ನಿರಂತರವಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಹಿಳೆಯರು,ಯುವಜನರು ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಮಾಜ ಸೇವಕರಾದ ಶಾಂತಕುಮಾರ ಬಿರಾದಾರ ಉದ್ಘಾಟಿಸಿರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಜಪ ಮುಖಂಡ ಅಂಬರಾಯ ಬೆಳಕೋಟಾ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಬಾಜಪ ಮುಖಂಡ ಉದಯಕುಮಾರ ರಟಕಲ,ದಲಿತ ಮುಖಂಡ ಎಸ್.ಜಿ.ಭಾರತಿ,ಡೊಂಗರಗಾಂವ ಗ್ರಾಮ ಪಂಚಾಯತ ಸದಸ್ಯ ಅನೀಲಕುಮಾರ ಡೊಂಗರಗಾಂವ ಕಾರ್ಯಕ್ರಮದ ನೇತೃತ್ವವನ್ನು ಮಧುಕರ ವಿ.ಕಾಂಬಳೆ ವಹಿಸಿದ್ದರು.ನಿರೂಪಣೆಯನ್ನು ಸಿದ್ದಾರ್ಥ ಚಿಂಚನಸೂರ ನಿರೂಪಿಸಿದರು.ಟ್ರಸ್ಟನ ಕಾರ್ಯದರ್ಶಿ ಅಶ್ವಿನಿ ಎಂ.ಕಾಂಬಳೆ ಇದ್ದರು.
ಈ ಸಂದರ್ಭದಲ್ಲಿ ಜೈರಾಜ ಕಿಣಗಿಕರ್,ರವಿ ಸಿಂಗೆ,ಆನಂದ ತೆಗನೂರ,ಸುನೀಲಕುಮಾರ ಕಾಂಬಳೆ,ಅರುಣಕುಮಾರ ಸೇರಿದಂತೆ ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.