ಕಲಬುರಗಿ:ನಗರದ ಕೋಟನೂರ(ಡಿ) ಗ್ರಾಮದ ಲುಂಬುಣಿ ಉದ್ಯಾನವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೋಟನೂರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ಆದ ತಕ್ಷಣ ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಿದ್ದು,ಸದ್ಯಕ್ಕೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯವೆಸಗಿದ್ದು ತಾವೇ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೋಲೀಸ್ ಆಯುಕ್ತರಾದ ಆರ್.ಚೇತನ್ ಮಾಧ್ಯಮಗಳಿಗೆ ತಿಳಿಸಿದರು.
ಇಂದು ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ನಾಲ್ಕು ಜನ ಆರೋಪಿಗಳನ್ನು ಬಂದಿಸಿ ಈಗಾಗಲೇ ನಾಲ್ಕು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬಂಧಿತ ಆರೋಪಿಗಳಾದ ಕಿರಣ್,ಹನುಮಂತು,ಮಾನು ಹಾಗೂ ಸಂಗಮೇಶ ಎಂಬುವರಿದ್ದು ಇನ್ನುಳಿದ ಆರೋಪಿಗಳ ದಸ್ತಗಿರಿ ಮಾಡಿ ಈ ಪ್ರಕರಣದಲ್ಲಿ ನಾವು ದೋಷಾರೋಪಣೆ ಪತ್ರ ಆರೋಪಿಗಳ ವಿರುದ್ಧ ನ್ಯಾಯಾಲಕ್ಕೆ ಸಲ್ಲಿಸುತ್ತೇವೆ ಪ್ರಕರಣದ ತನಿಖೆ ಜಾರಿಯಲ್ಲಿ ಇರೋದರಿಂದ ಕೆಲವೊಂದು ವಿಚಾರಗಳನ್ನು ಈಗಲೇ ಮಾಧ್ಯಮಕ್ಕೆ ಹೇಳೋಕ್ಕೆ ಆಗಲ್ಲ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪೋಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡೋದು ಬಾಕಿಯಿದೆ ಆರೋಪಿಗಳು ಚೀಟಿ ಬರೆದಿಟ್ಟ ವಿಚಾರವಾಗಿ ಆದರಲ್ಲಿದ್ದ ಹೆಸರು ಬೇರೆನೆ ಇದೆ,ಬಂಧಿತ ಆರೋಪಿಗಳು ಬೇರೆನೆ ಇರುವುದರಿಂದ ಇನ್ನಷ್ಟು ಸಾಕ್ಷ್ಯಗಳನ್ನು ಸಂಗ್ರಹ ಮಾಡಬೇಕಿದೆ ಆರೋಪಿಗಳಿಗೆ ಶಿಕ್ಷೆ ಕೊಡಿಸೋದು ನಮ್ಮ ಜವಾಬ್ದಾರಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ವರದಿ-ಅಪ್ಪಾರಾಯ ಬಡಿಗೇರ