ಹನೂರು:ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತೋನಿಯರ್ ಕೋವಿಲ್ ಗ್ರಾಮದಲ್ಲಿ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು.ಹೊಸದಾಗಿ ಸ್ಥಾಪನೆಯಾದ ಸಂಘದ ಸದಸ್ಯತ್ವ ಪಡೆದ ಸದಸ್ಯರಿಗೆ ಹಸಿರು ಶಾಲು ಹಾಕಿ ಸಂಘಕ್ಕೆ ಬರಮಾಡಿಕೊಂಡರು.
ಅಂತೋನಿಯರ್ ಕೋವಿಲ್ ಗ್ರಾಮದ ಘಟಕದ ರೈತ ಸಂಘದ ಅಧ್ಯಕ್ಷರಾಗಿ ಪೀಟರ್ ಪೆರಿಯ ನಾಯಗಂ, ಉಪಾಧ್ಯಕ್ಷರಾಗಿ ಧರ್ಮರಾಜ್,ಅಂತೋನಿಯಮ್ಮ, ಲಿಲ್ಲಿ ಪುಷ್ಪ,ಪ್ರೇಮ,ಮದಲೈಯಮ್ಮ ಇವರನ್ನು ಆಯ್ಕೆ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕ ಅಧ್ಯಕ್ಷ ಗಂಗನದೊಡ್ಡಿ ಅಮ್ಜದ್ ಖಾನ್ ಮಾತನಾಡಿ ಹೊಸದಾಗಿ ಸ್ಥಾಪನೆಯಾದ ರೈತ ಸಂಘದ ಸದಸ್ಯತ್ವ ಪಡೆದ ಸದಸ್ಯರೆಲ್ಲರೂ ಒಗ್ಗಟಿನಿಂದ ಇರಬೇಕು,ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ರೈತ ಫಲಾನುಭವಿಗಳಿಗೆ ದೊರಕುವಂತೆ ಮಾಡಬೇಕು,ಸಂಘದ ಸದಸ್ಯರು ಭ್ರಷ್ಟಾಚಾರ ಮತ್ತು ಅಮಿಷಗಳಿಗೆ ಒಳಗಾಗದೆ ಸದಸ್ಯರು ಸಂಘದ ಏಳಿಗೆಗಾಗಿ ನಿಷ್ಠೆಯಿಂದ ಹಾಗೂ ಒಮ್ಮತದಿಂದ ಇರಬೇಕು ಎಂದರು.
ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಗೌಡೇಗೌಡ,ಲೋಕೇಶ್ ಗೌಡ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್.ಸಿ, ತಾಲೂಕು ಗೌರವಾಧ್ಯಕ್ಷ ರಾಜಣ್ಣ,ತಾಲೂಕು ಉಪಾಧ್ಯಕ್ಷ ಪಳನಿಸ್ವಾಮಿ, ಮಾರ್ಟಳ್ಳಿ ಘಟಕದ ಅಧ್ಯಕ್ಷ ಸೂಸೈ ಮಾಣಿಕ್ಯ0,ಅರ್ಪದರಾಜ್,ಅಂತೋನಿ ಸ್ವಾಮಿ, ಸಂತಿಯಾಗ್,ವೆಟ್ಟು ಕಾಡು ಮಹಿಳಾ ಘಟಕ ಅಧ್ಯಕ್ಷ ಸೂಸೈಯಮ್ಮ ಹಾಗೂ ಇನ್ನಿತರರು ಇದ್ದರು.
ವರದಿ:ಉಸ್ಮಾನ್ ಖಾನ್