ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗ ದಲ್ ಜನವರಿ 24 ರಂದು ಅನುಗ್ರಹ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಈ ಕಾರ್ಯಕ್ರಮಕ್ಕೆ ಅನೇಕ ಗೌರವಾನ್ವಿತ ಅತಿಥಿಗಳು, ಸಹೋದರಿಯರು ಮತ್ತು ಪೋಷಕರು ಸಾಕ್ಷಿಯಾದರು.ಪ್ರಾಂತೀಯ ಸಚಿವ ರೆ.ಫಾ. ಕಾರ್ಯಕ್ರಮದ ಅಧ್ಯಕ್ಷ ಅಲ್ವಿನ್ ಜಾನ್ ಡಾಯಾಸ್ ರವರು ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿದರು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ತಮ್ಮ ಭಾಷಣದಲ್ಲಿ ಶಿಕ್ಷಣ ಮತ್ತು ಪರಿಸರ ವಿಜ್ಞಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿ ರಾಷ್ಟ್ರದ ಉತ್ತಮ ಪ್ರಜೆಗಳಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು ಗುಣಾತ್ಮಕ ಶಿಕ್ಷಣಕ್ಕೆ ಹೆಸರಾದ ಅನುಗ್ರಹ ಶಾಲೆ ಹಲಬರ್ಗಾ ಹಾಗೂ ಸುತ್ತಮುತ್ತಲಿನ ಬಡ ಹಾಗೂ ನಿರ್ಗತಿಕರಿಗೆ ತಲುಪುತ್ತಿರುವ ಬಗ್ಗೆ ತಮ್ಮ ಭಾಷಣವನ್ನು ಮುಂದುವರಿಸಿದರು ರೆ.ಫಾ.ನೂತನ ಶಾಲಾ ಕಟ್ಟಡಕ್ಕೆ ಗುಲಬರ್ಗಾ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಸ್ಟ್ಯಾನಿ ಲೋಬೋ ಅವರು ಆಶೀರ್ವಚನ ನೀಡಿ ಶಾಲಾ ಸೇವೆಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ
ಶ್ರೀಅಬ್ದುಲ್ ಗಣಿ ಶೇಠ್ ಶೈನ್ ಡೆವಲಪರ್ಸ್ ಬೀದರ್,ಶ್ರೀ ಮಜಹರ್ ಹುಸೇನ್,ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಲ್ಕಿ,ಶ್ರೀಮತಿ ಪದ್ಮಿನಿ ಬಾಯಿ ಠಾಕೂರ್ ಅಧ್ಯಕ್ಷರು,ಗ್ರಾಮ ಪಂಚಾಯತ್ ಹಲ್ಬರ್ಗ, ಶ್ರೀ ವೈಜಿನಾಥ ಯನಗುಂದೆ,ಕಾಂಗ್ರೆಸ್ ಹಿರಿಯ ಮುಖಂಡರು ಬೀದರ್,
ಶ್ರೀ ಸುದರ್ಶನ್ ಪೌಲ್,ಸಮಾಜ ಸೇವಕರು ಬೀದರ,ಶ್ರೀ ಅಮಿತ್ ಕೋಟೆ ಅಧ್ಯಕ್ಷರು ಅನುದಿನ ಫೌಂಡೇಶನ್ ಬೀದರ್,
ಫಾ.ರಾಬಿನ್ ವಿಕ್ಟರ್ ಡಿ’ಸೋಜಾ,ಕಾರ್ಯನಿರ್ವಾಹಕ ಕಾರ್ಯದರ್ಶಿಗಳು ಕಪುಚಿನ್ ವಿದ್ಯಾ ಸಂಸ್ಥೆ, ಪರಮಪೂಜ್ಯ ಮಹಲಿಂಗ ಸ್ವಾಮಿಗಳು.
ವಂ.ಫಾ.ಕ್ಲೇರಿ ಡಿ’ಸೋಜಾ ಮುಖ್ಯ ಗುರುಗಳು ಬೀದರ್ ವಲಯ,ವಂ.ಫಾ.ಸತೀಶ್ ಕುಮಾರ್ ಸುಪೀರಿಯರ್ ಅನುಗ್ರಹ ಆಶ್ರಮ ಹಲಬರ್ಗಾ,
ಸಿಸ್ಟರ್ ಮರಿನಾ,ಸುಪಿರಿಯರ್ ಸ್ನೇಹ ಸದನ ಕಾನ್ವೆಂಟ್ ಹಲಬರ್ಗಾ,ವಂ.ಫಾ.ಪ್ರಸನ್ನ ಕುಮಾರ್ ಪ್ರಾಂಶುಪಾಲರು ಹಲಬರ್ಗಾ,ವಂ.ಫಾ.ಲಾರೆನ್ಸ್,ಉಪ ಪ್ರಾಂಶುಪಾಲರು ಹಲಬರ್ಗಾ ಹಾಗೂ ಶಿಕ್ಷಕರು ಶಾಲಾ ಸಿಬ್ಬಂದಿ ವರ್ಗ ಮತ್ತು ವಿಧ್ಯಾರ್ಥಿ ಬಳಗದವರು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ