ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾರರ ದಿನಾಚರಣೆ ಆಚರಿಸಲಾಯಿತು.
ಮತದಾರರ ದಿನಾಚರಣೆ ಪ್ರಯುಕ್ತ ಗ್ರಾಮದ ಬಿ ಎಲ್ ಓಗಳಾದ ದೊಡ್ಡಪ್ಪ ಶಿಕ್ಷಕರು,ಛತ್ರಪ್ಪ ಶಿಕ್ಷಕರು ಗ್ರಾಮದ ಯುವಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸುವ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಯಪಡಿಸಿದರು.ಇದೇ ಸಂದರ್ಭದಲ್ಲಿ ಮತದಾರರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳೆಲ್ಲೆರೂ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.ಇದೇ ಸಂದರ್ಭದಲ್ಲಿ ಯುವ ಮತದಾರರು ಮತದಾರರ ದಿನಾಚರಣೆ ಕಾರ್ಯಕ್ರಮ ಒಂದು ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಿದೆ ಈ ಮತದಾನದ ಪ್ರತಿಜ್ಞಾನಿಧಿಯನ್ನು ತಪ್ಪದೇ ಪಾಲಿಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರುಗಳಾದ ಹುಸೇನ್ ಸಾಬ್,ಕಲ್ಲನಗೌಡ,ಪರ್ವಿನ್ ಹಾಗೂ ಗ್ರಾಮದ ಯುವಕರಾದ ಕುಬೇರಪ್ಪ,ಚನ್ನಪ್ಪ ವಿಶ್ವಕರ್ಮ,ರವಿಶಾಸ್ತ್ರಿ,ವೀರಯ್ಯಸ್ವಾಮಿ,ಶಂಕರ್ ಮೇಟಿ,ವೀರೇಶ ಪೋ.ಪಾ.ಶರಣಬಸವ ಕ್ಯಾಡೇದ್,ಸುರೇಶ ಸ್ವಾಮಿ,ಯಮನೂರ ಬುಡಕುಂಟಿ ಇನ್ನಿತರರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.