ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ L.I.ದಿಂಡೂರು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಅರ್ಥಪೂರ್ಣವಾಗಿ 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳಿಂದ ಕಂಗೊಳಿಸಿದರು,ಧ್ವಜಾರೋಹಣದ ನಂತರ ಅತಿಥಿಗಳ ಭಾಷಣದ ನಂತರ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರು ಶಶಿಧರ ಎಲ್.ದಿಂಡೂರು,ಮುಖ್ಯೋಪಾಧ್ಯಾಯರು ಶ್ರೀಮತಿ ಗೀತಾ ಶಿವರಾಜ ಶಾಲೆಯ ಮಕ್ಕಳು,ಪೋಷಕರು,ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಕಾರ್ಯಕ್ರಮದ
ನಿರೂಪಣೆಯನ್ನು ಕುಮಾರಿ ಶೋಭಾ ನಡೆಸಿಕೊಟ್ಟರು.
ವರದಿ-ಸುವರ್ಣ ಸಂಗಮೇಶ ಭಾವಿಮನಿ