ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಇಬ್ರಾಂಪುರ ಗ್ರಾಮದ ಬೋವಿ ವಡ್ಡರ ಸಮಾಜ ಶಿವಯೋಗಿ ಸಿದ್ರಾಮೇಶ್ವರ ಆಶೀರ್ವಾದದೊಂದಿಗೆ ಜನವರಿ 26ರಂದು ಗ್ರಾಮದಲ್ಲಿ ಭೋವಿ ಸಂಘದ ಫಲಕದ ಉದ್ಘಾಟನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭೋವಿ ಸಮಾಜದ ಜನಾಂಗದ ದೊಡ್ಡ ಕಾಳಿಂಗ ಅವರ ಮನೆ ಮುಂದೆಯೇ ಸ್ವ-ಇಚ್ಚೆಯಿಂದ ಸ್ವತಃ ತಾವೇ ಭೋವಿ ಜನಾಂಗದ ಸಮಿತಿಯ ಫಲಕವನ್ನ ನಿರ್ಮಿಸಿದರು.
ನಮ್ಮಲ್ಲಿ ಇರುವ ಯುವಕರ ಕೌಶಲಕ್ಕೆ ಗ್ರಾಮದ ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಸಾಧ್ಯ ಅದಕ್ಕೆ ಭೋವಿ ಸಮಾಜದ ಬುನಾದಿ ಆಗಬೇಕು ಎಂಬ ನಿಟ್ಟಿನಲ್ಲಿ ಗ್ರಾಮದ ಹಿರಿಯರು ಮಹನೀಯರು ಯುವಕರು ಎಲ್ಲರೂ ಸೇರಿ ಭೋವಿ ಜನಾಂಗದ ಸಮಿತಿಯ ಸಂಘದ ಫಲಕ (ಬೋರ್ಡ್) ಅನ್ನು ಪ್ರತಿಷ್ಠಾಪನೆ ಮಾಡಿ ಸ್ಥಳೀಯ ಖಾಸಗಿ ಶಾಲೆ ಆದಂತಹ ಶ್ರೀ ಓಂಕಾರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು.ಸಮಾಜದಲ್ಲಿ ಈಗಲಾದರೂ ಅವಕಾಶ ವಂಚಿತದಿಂದ ಹಿಂದುಳಿದ ಸಮಾಜವಾಗಿರುವ ಭೋವಿ ಜನಾಂಗಕ್ಕೆ ಆದ್ಯತೆ ದೊರಕಲಿ ಎಂದು ಹಿರಿಯರು,ತಾಲೂಕು ಅಧ್ಯಕ್ಷರಾದ ಗಾಳೆಪ್ಪ ಅವರು ಭೋವಿ ಸಮಾಜದ ಫಲಕದ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿಗೊಳಿಸಿದರು.
ಗುರು ಮನೆಯಿಂದ ಅರಮನೆಯವರೆಗೂ ಕಟ್ಟಿಕೊಟ್ಟ ಖ್ಯಾತಿಯು ಭೋವಿ ಸಮಾಜದ್ದು ಇಂತಹ ಸಮಾಜವನ್ನು ಸಾಂಘಿಕ ಶಕ್ತಿಯಾಗಿ ರೂಪಿಸುವ ಮೂಲಕ ಸಮಾಜದ ಸಮಾನ ಹಕ್ಕನ್ನು ಪಡೆಯಬೇಕು ಎಂದು ಅಲ್ಲಿನ ಯುವಕರು ಸರಳವಾಗಿ ಇಚ್ಛಾಶಕ್ತಿಯಿಂದ ಭೋವಿ ಸಮಾಜದ ಫಲಕದ ಉದ್ಘಾಟನಾ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು
ಈ ಸಂದರ್ಭದಲ್ಲಿ ಎಲ್ಲಾ ಸಮಾಜದ ಮುಖಂಡರು,ಹಿರಿಯರು ಭಾಗವಹಿಸಿ ಪ್ರೋತ್ಸಾಹಿಸಿದರು.
ವರದಿ-ಎಂ ಪವನ್ ಕುಮಾರ್