ವಡಗೇರಾ:ಈ ಬಾರಿ ಒಣ ಮೆಣಸಿನಕಾಯಿ ಬೆಳೆದ ತಾಲೂಕಿನ ರೈತರ ಪಾಲಿಗೆ ಒಣ ಮೆಣಸಿನಕಾಯಿ ಅತಿ ಖಾರವಾಗಿ ಪರಿಣಮಿಸಿದೆ ಮಳೆ ಮತ್ತು ನೀರಿನ ಕೊರತೆ ರೋಗಬಾಧೆಯಿಂದ ಇಳುವರಿಯು ಈ ವರ್ಷ ಅತಿ ಕಡಿಮೆ ಬಂದಿವೆ ಒಂದು ಎಕರೆಗೆ ಕನಿಷ್ಠ ಒಂದು ಲಕ್ಷ ಐವತ್ತು ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದೇವೆ ಎನ್ನುತ್ತಾರೆ ಮೆಣಸಿನಕಾಯಿ ಬೆಳೆದ ರೈತ ಶಿವರಾಜಪ್ಪ ಗೌಡ ಮಲಾರ ಬೆಂಡೆಬೆಂಬಳಿ ಆದರೆ ಈ ವರ್ಷ ಏಕಾ ಏಕಿ ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಹೋಗಿದ್ದು ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿ ತೀವ್ರ ಸಂಕಷ್ಟದಲ್ಲಿದ್ದಾರೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ಬೆಂಬಲ ಬೆಲೆ ಘೋಷಿಸಿ ರೈತರ ಹಿತ ಕಾಯಬೇಕು ಎಂದು ಬೆಂಡೆಬೆಂಬಳಿ ಗ್ರಾಮದ ಪ್ರಗತಿಪರ ರೈತ ಮೆಣಸಿನಕಾಯಿ ಬೆಳೆಗಾರ ಶಿವರಾಜಪ್ಪ ಗೌಡ ಮಲಾರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಈ ಬಾರಿ ರೈತರು ಹೆಚ್ಚಾಗಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದು ದಾಖಲೆ ಮಟ್ಟದ ಬೆಲೆ ಕುಸಿತ ಕಂಡಿದ್ದು ಹಲವಾರು ರೈತರು ಮೆಣಸಿನಕಾಯಿಗಳನ್ನು ಹೊಲದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ರಾಜ್ಯದ್ಯಂತ ಈ ಬಾರಿ ಹೆಚ್ಚು ಮೆಣಸಿನಕಾಯಿ ಬೆಳೆದಿದ್ದು ಆ ಕಾರಣ ದರ ಕುಸಿತ ಕಂಡಿದೆ ಸದ್ಯ ಮಾರುಕಟ್ಟೆಯಲ್ಲಿ ಮೆಣಸಿನ ಕಾಯಿ ಕ್ವಿಂಟಲ್ ಗೆ ಅಂದಾಜು 14 ರಿಂದ 18 ಸಾವಿರವರೆಗೆ ಇದೆ ಕಳೆದ ವರ್ಷ ಸುಮಾರು 20 ರಿಂದ 30 ಸಾವಿರ ವರೆಗೆ ಮೆಣಸಿನಕಾಯಿ ಬೆಲೆ ಇತ್ತು ಈ ಬಾರಿ ಬೆಲೆ ಮತ್ತು ಇಳುವರಿಯು ಬಾರದ ಕಾರಣ ರೈತರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ.ಒಂದೆಡೆ ಬರಗಾಲ ಮತ್ತೊಂದು ಕಡೆ ಬೆಳೆಗಳ ಬೆಲೆಕುಸಿತ ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಿ ಒಣ ಮೆಣಸಿನ ಕಾಯಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರಿದಿ ಕೇಂದ್ರಗಳನ್ನು ಆರಂಭಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವರದಿ:ಶಿವರಾಜ್ ಸಾಹುಕಾರ್,ವಡಗೇರಾ