ಬಸವರಾಜ ಗುಳಗಿ ನೇತೃತ್ವದಲ್ಲಿ:
ಮಹಾತ್ಮ ಗಾಂಧೀಜಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮ .
ನೆಲೋಗಿ ಗ್ರಾಮದಲ್ಲಿ ನಾಳೆ ದಿನಾಂಕ-15/11/2022 ರ, ಮಂಗಳವಾರ ಸಾಯಂಕಾಲ5:00 ಗಂಟೆಗೆ ನೆಲೋಗಿ ಗ್ರಾಮದ ಹಿರಿಯರು, ರಾಜಕೀಯ ದುರೀಣರು,ಮುಖ್ಯ ಅತಿಥಿಗಳು,ಮುಖಂಡರು, ಗ್ರಾಮಸ್ಥರಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರುತ್ತಿದೆ
ಈ ಮೂರ್ತಿ ಪ್ರತಿಷ್ಠಾಪನೆಯು ಜೇವರ್ಗಿ ತಾಲ್ಲೂಕಿನ ಇತಿಹಾಸದಲ್ಲೇ ಪ್ರಪ್ರಥಮಬಾರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮವೂ ನೆಲೋಗಿ ಗ್ರಾಮದಲ್ಲಿ ನೆರವೇರುತ್ತಿರುವುದು ಸಂತಸದ ವಿಷಯ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ಹೋರಾಟಗಾರರು, ಪರಮ ಪೂಜ್ಯರು, ರಾಜಕೀಯ ನಾಯಕರು, ಹಿರಿಯರು, ಗಣ್ಯರು, ದೇಶಪ್ರೇಮಿಗಳು ಹಾಗೂ ಸಮಸ್ಥ ನೆಲೋಗಿಯ ಗ್ರಾಮಸ್ಥರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾಗಬೇಕೆಂದು ಈ ಮೂಲಕ ತಮ್ಮಲ್ಲಿ ನಿವೇದಿಸಿಕೊಳ್ಳುತ್ತೇನೆ.
ಸ್ವಾಗತ ಕೋರುವವರು:-
ಬಸವರಾಜ.ಎಂ.ಗುಳಗಿ ಕಾರ್ಯದರ್ಶಿಗಳು ಜೇವರ್ಗಿ ತಾಲ್ಲೂಕು ಟೆಂಟ ಹೌಸ್ ಹಾಗೂ ಸಮಸ್ತ
ನೆಲೋಗಿ ಗ್ರಾಮದ ಮಹಾತ್ಮ ಗಾಂಧೀಜಿ ಕಮಿಟಿಯ ಸದಸ್ಯರುಗಳಿಂದ.
ಮಹಾತ್ಮ ಗಾಂಧಿಜೀಯವರ ಮೂರ್ತಿ ಪ್ರತಿಸ್ಥಾಪನೆಯು ನಾವೆಲ್ಲರೂ ಪಕ್ಷತೀತವಾಗಿ,ರಾಜಕೀಯವಾಗಿ,ವೈಕಕ್ತಿಕವಾಗಿ,ಜಾತಿ- ಮತ ಭೇದ-ಭಾವಗಳನ್ನು ಬಿಟ್ಟು ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಯಾಗಿ ನಡೆಸಬೇಕೆಂದು ಬಸವರಾಜ ದಬಕಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ವರದಿ: ಚಂದ್ರಶೇಖರ ಎಸ್ ಪಾಟೀಲ್.