ಊರಮ್ಮ ದೇವಿಗೆ ಅಭಿಷೇಕ ಮತ್ತು ಹುಡಿ ತುಂಬುವ ಕಾರ್ಯಕ್ರಮ ಜರುಗಿತು.
ಕೊಟ್ಟೂರು:ತಾಲೂಕಿನ ಕೋಗಳಿ ಗ್ರಾಮದಲ್ಲಿ ಇಂದು ಗ್ರಾಮದ ಅಧಿ ದೇವತೆ ಊರಮ್ಮ ದೇವಿಗೆ ಬ್ರಹ್ಮ ಮಹೂರ್ತದ ಶುಭ ಘಳಿಗೆಯಲ್ಲಿ ಹೆಚ್ ಎಂ ಕೊಟ್ರಯ್ಯ ಸ್ವಾಮಿ,ಕೆ ಹೆಚ್ ಎಂ ಕೊಟ್ರೇಶ್ವರ ಸ್ವಾಮಿ, ಹಾಗೂ ಕೋಗಳಿ ಗ್ರಾಮದ ಸಮಸ್ತ ದೈವಸ್ತರ ಸಮ್ಮುಖದಲ್ಲಿ ದೇವಿಗೆ ವಿಶೇಷವಾಗಿ ಅಭಿಷೇಕ ಮಾಡಿಲಾಯಿತು.
ಬೆಳಿಗ್ಗೆ ಕುಂಬಾರರ ಮನೆಯಿಂದ ಕೇಲು ತಂದು ಸುಮಂಗಲೆಯರಿಂದ ಹಾಗೂ ಸಕಲ ಮಂಗಲವಾದ್ಯಗಳೊಂದಿಗೆ ಗಂಗಿಗೆ ಹೋಗಿ ಬಂದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ,ಬೆಳ್ಳಿ ಕಿರೀಟವನ್ನು ಧಾರಣೆ ಮಾಡಲಾಯಿತು ನಂತರ ಕೋಗಳಿ ಗ್ರಾಮದ ಕಟ್ಟಿಮನಿ ಸಮಸ್ತ ದೈವಸ್ಥರು ದೇವಿಗೆ ಹುಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೋಗಳಿ ಕಟ್ಟಿಮನಿಯ ದೈವಸ್ಥರಾದ ಹೊಂಬಾಳಿ ಕೊಟ್ರೇಶಪ್ಪ,ಟಿ ಶಿವರುದ್ರಪ್ಪ, ಗಚ್ಚಿನ ಕೊಟ್ರೇಶಪ್ಪ,ಕಂಬಿ ಕೊಟ್ರಪ್ಪ,ಬಣಕಾರ ಗುರುವಪ್ಪ,ಕೊಟ್ರೇಶಪ್ಪ,ಚೌಟಗಿ ನಾಗಪ್ಪ,ಗೌಡ್ರು ಗುರುವಣ್ಣ,ಹಟ್ಟಿ ಗೌಡ ಯು ಬಸವರಾಜ, ಮೈದೂರು ಸಿದ್ದಪ್ಪ, ನಂದಿಬಂಡಿ ಕೊಟ್ರೇಶ,ಧರ್ಮದರ್ಶಿ ಹೇಮಂತಾಚಾರಿ,ಜಿ. ಕೆಂಚಪ್ಪ,ಸಮಾದೆಪ್ಪ ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ವೈ.ಮಹೇಶ್ ಕುಮಾರ್ ಕೊಟ್ಟೂರು