ಸುರಪುರ:ಜಿಲ್ಲಾ ಪಂಚಾಯತಿ ಯಾದಗಿರಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಯಾದಗಿರಿ ಮತ್ತು ಗ್ರಾಮ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸುರಪುರ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕುರಿತು ಪಿಡಿಒ ಮತ್ತು ಪಂಪ್ ಆಪರೇಟರ್ ಗಳಿಗೆ ಗ್ರಾಮಸ್ ಸಂಸ್ಥೆಯ ಅಧಿಕಾರಿಗಳಿಂದ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಬಸವರಾಜ ಸಜ್ಜನ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ಸುರಪುರ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಹಣಮತ್ರಾಯ ಪಾಟೀಲ್,ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪವಿಭಾಗ ಸುರಪುರ ರವರು ವಹಿಸಿಕೊಂಡಿದ್ದರು,ಅತಿಥಿ ಸ್ಥಾನವನ್ನು ಸ್ಪೂರ್ತಿ ಕಿರಿಯ ಸಹಾಯಕ ಕಾರ್ಯಪಾಲ ಅಭಿಯಂತರು ವಹಿಸಿಕೊಂಡಿದ್ದರು.ಈ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಾಗಾರದ ಕುರಿತು ಗ್ರಾಮ್ಸ ಸಂಸ್ಥೆಯ ಸಿಬ್ಬಂದಿಗಳು ದೇವಿಂದ್ರಪ್ಪ ಬೋಯಿನ್,ವೆಂಕಟೇಶ ದೋರಿ,ವಿಶ್ವಾರಾಧ್ಯ ದಳವಾಯಿ ಇವರು ಈ ಕಾರ್ಯಕ್ರಮದ ಕುರಿತು ಸಹ ವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.ಸದರಿ ಕಾರ್ಯಾಗಾರದಲ್ಲಿ ಗ್ರಾಮ್ಸ್ ಸಂಸ್ಥೆ ಸಿಬ್ಬಂದಿಗಳಾದ ಕೃಷ್ಣ ದೊರೆ,ದೇವರಾಜ ನಾಯಕ ಮತ್ತು ಸುರಪುರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದಶಿಗಳು,ಬಿಲ್ ಕಲೆಕ್ಟರುಗಳು, ಕಂಪ್ಯೂಟರ ಆಪರೇಟರ್ ಸೇರಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್