ಚಿಕ್ಕಬಳ್ಳಾಪುರ:ಜಿಲ್ಲಾಡಳಿತದಿಂದ ದಲಿತ ಕಾಯಕ ಶರಣರ ಜಯಂತಿ ಹಾಗೂ ಸವಿತಾ ಮಹರ್ಷಿ ಜಯಂತಿಯ ಕಾರ್ಯಕ್ರಮಗಳನ್ನು ಎಲ್ಲಾ ಸಮುದಾಯಗಳ ಭಾಗಿತ್ವದೊಂದಿಗೆ ಅರ್ಥ ಪೂರ್ಣವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ಅಧಿಕಾರಿಗಳಿಗೆ ತಿಳಿಸಿದರು.ಶುಕ್ರವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಮುದಾಯಗಳ ಮುಖಂಡರುಗಳಿಂದ “ಕಾಯಕ ಶರಣರ ಜಯಂತಿ ಹಾಗೂ ಸವಿತಾ ಮಹರ್ಷಿ ಜಯಂತಿ”ಆಚರಣೆಗಳ ಕುರಿತು ಸಲಹೆಗಳನ್ನು ಆಲಿಸಿ ಅವರು ಮಾತನಾಡಿದರು.
ಕಾಯಕ ಶರಣರ ಜಯಂತಿಯನ್ನು ಇದೇ ಫ್ರೆಬವರಿ 10 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವುದು ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನಾನ್ಮ,ಶರಣರ ಕುರಿತು ಉಪನ್ಯಾಸ,ಪುಷ್ಪ ನಮನ,ಸಾಧಕ ವ್ಯಕ್ತಿಗಳಿಗೆ ಪುರಸ್ಕಾರ ಇರಲಿದೆ ಎಂದರು.
ಸವಿತಾ ಮಹರ್ಷಿ ಜಯಂತಿಯನ್ನು ಫ್ರೆಬವರಿ 27ರಂದು ಅಂಬೇಡ್ಕರ್ ಭವನದಲ್ಲಿ ನೆಡಸಲಾಗುವುದು ಅಂದು ಕಲಾತಂಡಗಳೊಂದಿಗೆ ಮೆರವಣಿಗೆಯು 9 ಘಂಟೆಗೆ ನಗರದ ಮರುಳುಸಿದ್ದೇಶ್ವರ ದೇವಾಲಯದಿಂದ ಆರಂಭವಾಗಿ ಅಂಬೇಡ್ಕರ್ ಭವನವರೆಗೂ ಜರುಗಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಉಪನ್ಯಾಸ,ಪುಷ್ಪ ನಮನ,ಸಾಧಕ ವ್ಯಕ್ತಿಗಳಿಗೆ ಪುರಸ್ಕಾರ ಸೇರಿದಂತೆ ಇತರ ಎಲ್ಲಾ ವ್ಯವಸ್ಥೆಗಳನ್ನು ಸುಸಜ್ಜಿತವಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ಮನಿಷಾ,ವಿವಿಧ ಸಮುದಾಯಗಳ ಮುಖಂಡರು,ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.
ವರದಿ-ತುಳಸಿನಾಯಕ್