ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್ ಮುಖೇನ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ನೀಡಲಾಯಿತು ಗದಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರವೇ ಘೋಷಣೆ ಮಾಡಿದ್ದು,ಕೇವಲ ಹೆಸರಿಗಷ್ಟೇ ಅನ್ನೋತರಹ ಆಗಿದೆ.ಬೆಳೆ ಬೆಳೆಯಲು ಮಳೆಯಿಲ್ಲ ಇರುವ ಸ್ವಲ್ಪ ನೀರಾವರಿ ಕ್ಷೇತ್ರದಲ್ಲಿ ಬೆಳೆದ ಈರುಳ್ಳಿ ಮುಂತಾದ ಬೆಳೆಗಳಿಗೆ ಬೆಲೆ ಇಲ್ಲದಾಗಿದೆ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಹಣ ಕೂಡ ಬಂದಿಲ್ಲ ಈ ಒಂದು ಸಮಯದಲ್ಲಿ ರೈತರು ತುಂಬಾ ಕಷ್ಟದಲ್ಲಿದ್ದಾರೆ.ಪ್ರತಿಯೊಬ್ಬ ರೈತರಿಗೆ ಇಂತಿಷ್ಟು ಪರಿಹಾರ ಹಣ ಒದಗಿಸಿ ಅವರ ಜೀವನೋಪಾಯಕ್ಕೆ ಸಹಕರಿಯಾಗಬೇಕು ಎಂದು ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಹೊಗೆಸೊಪ್ಪಿನ,ತಾಲೂಕ ಅಧ್ಯಕ್ಷರಾದ ಶ್ರೀ ರಮೇಶ ಲಮಾಣಿ,ಶ್ರೀ ಸದಾನಂದ ನಂದೇಣ್ಣವರ,ಶ್ರೀ ಕುಮಾರ ಬೆಟಗೇರಿ,ಮಂಜುನಾಥ ಮುಲಿಮನಿ,ಸೋಮು ಬಸಪ್ಪಣ್ಣವರ,ಗೋಪಿ ಲಮಾಣಿ ಮುಂತಾದವರು ತಹಸೀಲ್ದಾರ್ ಮೂಲಕ ಒತ್ತಾಯಿಸಿದರು.
ವರದಿ-ಸದಾಶಿವ ಭೀ ಮುಡೆಮ್ಮನವರ