ಜೇವರ್ಗಿ: ಪಟ್ಟಣದ ದತ್ತ ನಗರ ಬಡಾವಣೆಯಲ್ಲಿನ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಪಂಡಿತ್ ಜವಾಹರ್ ಲಾಹಲ್ ನೆಹರೂರವರ ಜನ್ಮದಿನದ ಸವಿ-ನೆನಪಿಗಾಗಿ ಮಕ್ಕಳ ದಿನಾಚರಣೆಯನ್ನು ಸಂಸ್ಥೆಯಲ್ಲಿ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮವು ವಿದ್ಯಾರ್ಥಿನೀಯರಿಂದ ದೇಶ ಭಕ್ತಿ ಗೀತೆಯೊಂದಿಗೆ ಪ್ರಾರಂಭಿಸುದರ ಜೊತೆಗೆ ಶಾಲೆಯ ಅಧ್ಯಕ್ಷರಾದ ಹಣಮಂತ್ರಾಯಗೌಡ ಪಾಟೀಲ್ ರವರ ನೇತೃತ್ವದಲ್ಲಿ ಮಕ್ಕಳಿಗೆ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ಶಿಕ್ಷಕಿಯರು ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ವಿದ್ಯಾರ್ಥಿ/ನೀಯರು ಎಲ್ಲರೂ ಮಕ್ಕಳ ದಿನಾಚರಣೆಯ ಕುರಿತು ಬಹಳ ಅಚ್ಚುಕಟ್ಟಾಗಿ ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದ ಅಂಗವಾಗಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸಂಸ್ಥೆಯ ವತಿಯಿಂದ ಬಹಳ ಅಚ್ಚುಕಟ್ಟಾಗಿ ಎಲ್ಲಾ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದಂತಹ ಮುದ್ದು ಮಕ್ಕಳಿಗೆ ಸಂಸ್ಥೆಯ ವತಿಯಿಂದ ವಿವಿಧ ರೀತಿಯಾದ ಬಹುಮಾನ ಮತ್ತು ಉಡುಗೊರೆಯನ್ನು ಶಾಲಾ ಕಾರ್ಯದರ್ಶಿಗಳಾದ ಚಂದ್ರಶೇಖರ ಪಾಟೀಲ್ ರವರು ವಿತರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಪಾಟೀಲ್ ಅವರು ಪಂಡಿತ್ ಜವಹಾರಲಾಲ್ ನೆಹರು ಅವರ ಜೀವನ ಚರಿತ್ರೆ,ಸಾಧನೆ, ಕೊಡುಗೆ ಮತ್ತು ಮಕ್ಕಳ ದಿನಾಚರಣೆಯ ಹಿನ್ನೆಲೆಯನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ಭಾಷಣದ ಮೂಲಕ ತಿಳಿಹೇಳಿದರು. ಮಕ್ಕಳ ದಿನಾಚರಣೆಯ ಪ್ರಯುಕ್ತ ಎಲ್ಲಾ ಶಿಕ್ಷಕ ಸಿಬ್ಬಂದಿಯವರು ಮಕ್ಕಳಿಗೆ ಸಿಹಿ ಊಟ ಸಂತರ್ಪಣೆಯನ್ನು ಮಾಡಿ ಮಕ್ಕಳಿಗೆ ಹಾರೈಸಿದರು.ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷತೆಯನ್ನು ಹಣಮಂತ್ರಾಯಗೌಡ ಪಾಟೀಲ್,ಕಾರ್ಯದರ್ಶಿಗಳಾದ ಚಂದ್ರಶೇಖರ ಪಾಟೀಲ್,ಮುಖ್ಯ ಗುರುಗಳಾದ ಶ್ರೀಮತಿ ಗೌರೇಶ್ವರಿ ಸಿ ಪಾಟೀಲ್,ಸಹ- ಶಿಕ್ಷಕೀಯರಾದ ಭುವನೇಶ್ವರಿ ಹಿರೇಗೌಡರ್,ಸ್ವಾಗತ ಭಾಷಣವನ್ನು ಶ್ರೀಮತಿ ಸಿದ್ದಮ್ಮ ಉಳ್ಳೆ,ಶ್ರೀಮತಿ ಲಕ್ಷ್ಮೀ ನಿಡಗುಂದಿ,ಕು.ಮಂಜುಳಾ ಇಜೇರಿ,ಕು.ದೀಪಾ ಪಾಟೀಲ್,ಕು.ರಾಜೇಶ್ವರಿ ಪಾಟೀಲ್ ಜನಿವಾರ,ಕಾರ್ಯಕ್ರಮದ ನೀರೂಪಣೆ ಶ್ರೀ ಪ್ರತಾಫ್ ಪವಾರ್,ಕಾರ್ಯಕ್ರಮದ ವಂದನಾರ್ಪಣೆಯನ್ನು ಕು.ದೊಡ್ಡಪ್ಪ ಕೋಣಿನ್ ವಂದಿಸಿದರು,ಸಾಹೇಬಗೌಡ ಮುರಡಿ ಹಾಗೂ ವಿದ್ಯಾರ್ಥಿ ಬಳಗದವರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.