ನಾನು ಪೂಜಿಸುವ ದೇವರು,ಋಣ ತೀರಿಸಲು ಸಾಧ್ಯವಾಗದ ಜೀವ,ಎಷ್ಟೇ ತಪ್ಪುಗಳು ಮಾಡಿದರೂ ಕ್ಷಮಿಸಿದ ಒಂದು ಮುಗ್ದ ಜೀವ ನನ್ನ ತಂದೆ.
ನನ್ನ ಜೀವನದ ನಾಯಕ ನನ್ನ ಅಪ್ಪ ನನ್ನ ಸೋಲು-ಗೆಲುವಿನ ಏಳು-ಬೀಳಿನ ಜೊತೆಯಲ್ಲಿ ಇರುವವರು,ನಾನು ಸೋತಾಗಲೂ ನನಗೆ ಸ್ಪೂರ್ತಿಯ ಸಾಲುಗಳನ್ನು ಹೇಳಿದರು,ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿದ ಮುಗ್ದ ಜೀವ ಅದು ನನ್ ತಂದೆ ಮಾತ್ರ.
ನಂಬಿಕೆ,ಪ್ರೀತಿ-ವಿಶ್ವಾಸಕ್ಕೆ ಅರ್ಹ ನನ್ನ ಅಪ್ಪ,ಜೀವನ ಅದೆಷ್ಟೋ ಪಾಠ ಕಲಿಸಿದೆ ಆದರೂ ಪ್ರಾಮಾಣಿಕ ದಾರಿ ಬಿಟ್ಟು ಹೋಗಬಾರದೆಂದು ತಿಳಿ ಹೇಳಿದ ನನ್ನ ದೇವರು ನನ್ನ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಟ್ಟಿಕೊಂಡು ಈ ಹಿರಿಯ ಜೀವ ನನ್ನ ಅಪ್ಪ.
ನಾನು ಕುಗ್ಗಿದಾಗ ಕೀಳಾಗಿ ನೋಡಲಿಲ್ಲ ನನ್ನ ಅಪ್ಪ ನಿನ್ನ ಗುರಿ ಸಾಧನೆ ಕಡೆಗೆ ನಿನ್ನ ಗಟ್ಟಿ ನಿಲುವು ಇರಲಿ ಸೋಲು-ನೋವು ಕಷ್ಟಗಳೆಲ್ಲಾ ಮನುಷ್ಯ ಜೀವನದ ಒಂದು ಭಾಗ ಎಂದು ಹೇಳಿಕೊಟ್ಟರು ನನ್ನ ತಂದೆ.
ನನ್ನ ಕನ್ನಡಿ ಹಾಗೆ ನಾನು ನಕ್ಕರೆ ಅವರು ನಗುತ್ತಾರೆ. ನಾನು ಅತ್ತರೆ ಅವರು ಕಣ್ಣೀರು ಹಾಕುತ್ತಾರೆ.
ನಿಷ್ಕಲ್ಮಶ ನಿಮ್ಮ ಪ್ರೀತಿಗೆ ನಾನು ಮರಳಿ ಪ್ರೀತಿಯೇ ಕೊಡ್ತೀನಿ.
ಮುಂದಿನ ಜನ್ಮದಲ್ಲಿ ನನ್ನ ತಂದೆಗೆ ತಾಯಿಯಾಗಿ ಋಣ ತೀರಿಸ್ತೀನಿ…
ಲೇಖಕಿ-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ