ಕಲಬುರಗಿ: ಯಡ್ರಾಮಿ ತಾಲ್ಲೂಕಿನಲ್ಲಿ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಯಡ್ರಾಮಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದು ಒಟ್ಟು 7 ವಿದ್ಯಾಥಿ೯ಗಳು ನವೋದಯ ಶಾಲೆಗೆ ಆಯ್ಕೆ ಆಗಿದ್ದಾರೆ.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ/ನೀಯರ ಪಾಲಕರು ಮತ್ತು ಪೋಷಕ ಬಂಧುಗಳು ತಮ್ಮ ಮಕ್ಕಳ ಕಲಿಕೆ ಮತ್ತು ಸಾಧನೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಜಿ.ಎಸ್.ಬಿರಾದಾರವರು ಮತ್ತು ಸಿಬ್ಬಂದಿ ವರ್ಗದವರ ಹಗಲಿರಳು ಮಕ್ಕಳ ಭವಿಷ್ಯದ ಏಳ್ಗೆಗಾಗಿ ಪರಿಶ್ರಮ ಪಟ್ಟು ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಸಮಸ್ತ ಪಾಲಕ ಹಾಗೂ ಗ್ರಾಮದ ಬಂಧುಗಳ ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದರು.
ಮೊದಲನೆ ಪಟ್ಟಿಯಲ್ಲಿನ ವಿದ್ಯಾರ್ಥಿಗಳ ಪಟ್ಟಿ ಈ ಕೆಳಗಿನಂತಿವೆ.
1.ಅನುಷ್ಕಾ ಅಶೋಕ ಕೋನಸಿರಸಗಿ 2.ವಿನಯ 3.ರಕ್ಷೀತಾ 4. ಅಭಿಷೇಕ 5.ಶರಣು 6. ಜಿತೇಂದ್ರ ಹಾಗೂ ಎರಡನೇಯ ಪಟ್ಟಿಯಲ್ಲಿ
1) ಕು.ಸಾಜೀದಾ ಅಬ್ಬಾಸಲಿ ಚೌದ್ರಿ.
ನವೋದಯ ಶಾಲೆಗೆ
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಜಿ ಎಸ್ ಬಿರಾದಾರ, ಮುಖ್ಯಗುರುಗಳಾದ ಶ್ರೀಮತಿ ಅಕ್ಕಮಹಾದೇವಿ ಜಿ ಬಿರಾದಾರ,ಗಣಿತ ಶಿಕ್ಷಕರಾದ ಹುಸೇನ ಎಸ್ ಕೋರಬೊ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ವತಿಯಿಂದ ಹಾರ್ಧಿಕ ಅಭಿನಂದನೆಗಳು ಹೇಳಿದರು.
ವರದಿ:ಚಂದ್ರಶೇಖರ ಎಸ್ ಪಾಟೀಲ್