ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ ಹುಲಕುಂದ ಅವರ ನೇತೃತ್ವದಲ್ಲಿ ಪ.ಜಾ/ಪ.ಪಂ ಗಳ
ಕುಂದು ಕೊರತೆಗಳ ಸಭೆ ನಡೆಯಿತು.ಈ ಸಭೆಯಲ್ಲಿ
ಗ್ರಾಮೀಣ ಭಾಗದಿಂದ ಆಗಮಿಸಿದ ದಲಿತ ಸಮುದಾಯದ ಮುಖಂಡರು ತಮ್ಮ ಸಮಸ್ಯೆಗಳನ್ನು ಪೋಲಿಸ್ ಅಧಿಕಾರಿಗಳ ಮುಂದೆ ಹೇಳಿಕೊಂಡರು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು ಅಟ್ರಾಸಿಟಿ ಪ್ರಕರಣಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿಕೊಳ್ಳಲಾಯಿತು ಸುಳ್ಳು ಪ್ರಕರಣ ದಾಖಲಿಸುವದರಿಂದ ಮೌಲ್ಯ ಕಳೆದುಕೊಳ್ಳುತ್ತಿವೆ ಕೂಲಂಕುಷವಾಗಿ ತನಿಖೆ ಮಾಡಿ ನ್ಯಾಯ ಒದಗಿಸ ಬೇಕೆಂದು ಮನವರಿಕೆ ಮಾಡಿದರು ಇತ್ತಿಚಿನ ದಿನಗಳಲ್ಲಿ ಪ.ಜಾ/ಪ.ಪಂ.ಗಳ ಯುವಕರ ಮೇಲೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ಯುವಕರಲ್ಲಿ ಕಾಳಜಿ ವಹಿಸಲು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.ಈ ಸಭೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಮಡ್ಡಿಮನಿ,ಸೋಮನಾಥ ಮೇಕೆರಿ,ನಾಗೇಂದ್ರ ಮೇತ್ರಿ,ಸೋಮು ಜಮಾದಾರ,ಹುಚ್ಚಪ್ಪ ತಳವಾರ,ಅಶೊಕ ನಾಯಿಕೊಡಿ,ರಾಜಶೇಖರ ಶಿಂಧೆ,ಸತೀಶ ವಾಲಿಕಾರ ಹಾಗೂ ಪೋಲಿಸ್ ಸಿಬ್ಬಂದಿ ಭಾಗವಹಿಸಿದ್ದರು.
ವರದಿ-ಮನೋಜ ನಿಂಬಾಳ