ಯಾದಗಿರಿ:ಜಿಲ್ಲೆಯ ಪುಟ್ಟ ಹಳ್ಳಿ ಆಶನಾಳ ಎಂಬ ಗ್ರಾಮದ ಪ್ರತಿಭೆಗೆ ಇಂದು ಸಜ್ಜಾಗಿದೆ ಬಹುದೊಡ್ಡ ಯಶಸ್ಸು.ತುಂಬಾ ಬಡತನದಲ್ಲಿ ಸಿನಿಮಾ ಮಾಡಿದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಕರ್ನಾಟಕ ಇಂದು ಸಾಕ್ಷಿಯಾಗುತ್ತಿದೆ,ಇದೇ ಮಾರ್ಚ್ ೧ ನೇ ತಾರೀಖು ಕರ್ನಾಟಕದ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಗಿರಿನಾಡ್ ಪ್ರೇಮಿ,ಗಿರಿನಾಡಿನ ಯುವಕರು ತುಂಬಾ ಉತ್ಸಾಹದಿಂದ ಮಾಡಿರುವ ಈ ಸಿನಿಮಾ ಇಂದು ಕರ್ನಾಟಕದ ಜನರ ಮುಂದೆ ಬೆಳ್ಳಿ ಪರದೆಯ ಮೇಲೆ ತೆರೆಕಾಣಲಿದೆ,ಜನರು ನಮ್ಮ ಉತ್ತರ ಕರ್ನಾಟಕದ ಸಿನಿಮಾಗಳನ್ನ ನೋಡಿ ಖುಷಿ ಪಟ್ಟು ಹರಸಿ ಹಾರೈಸಿ ಈ ಸಿನಿಮಾಗೆ ಆಶಿರ್ವದಿಸಬೇಕೆಂದು ಚಿತ್ರರಂಗ ಜನರಿಗೆ ಮನವಿ ಮಾಡಿದೆ ಯಾಕೆಂದರೆ ಸಿನಿಮಾ ರಂಗ ಅನ್ನೋದು ಸಣ್ಣ ವೇದಿಕೆಯಲ್ಲ ಇದೊಂದು ಬಹು ದೊಡ್ಡ ವೇದಿಕೆ ಗ್ರಾಮೀಣ ಭಾಗದ ಯುವಕರು ಈ ದೊಡ್ಡ ಪ್ರಯತ್ನ ಕ್ಕೆ ಕೈ ಹಾಕಿರುವುದು ನಿಜಕ್ಕೂ ಸಾಹಸ ಅಂತಾನೇ ಹೇಳಬಹುದು,ಅನೇಕ ಜನರು ಇವರ ಈ ಪ್ರಯತ್ನಕ್ಕೆ ಜೈ ಎಂದು ಅವರ ಬೆನ್ನಿಗೆ ಇಡೀ ಕರ್ನಾಟಕದ ಜನರು ನಿಂತಿದ್ದಾರೆಂದು ಅಭಯ ಹೇಳುತ್ತಿದ್ದಾರೆ,ಉತ್ತರ ಕರ್ನಾಟಕದ ಈ ಹಬ್ಬ ನಾಡಿನಾದ್ಯಂತ ಸೌಂಡು ಮಾಡಲಿ ಎಂದು ಜನರ ಅಭಿಪ್ರಾಯ,ಈ ಸಿನಿಮಾದ ಕಥಾನಾಯಕ ಶರಣು ಆಶನಾಳರವರು ಮೊಟ್ಡ ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.ಅವರಿಗೆ ಸಾಥ್ ಕೊಡಲು ಸೌಮ್ಯರವರು ನಿಂತಿದ್ದಾರೆ ಹಾಗೇ ರುಶನ್,ಯುವರಾಜ್,ಶ್ರೀವಸ್ತ್,ಇಂದ್ರಜಿತ್ ಪಾಟೀಲ್ ಮತ್ತು ಸಾಗರ ಹೀಗೆ ಅನೇಕ ಕಲಾ ಬಳಗವೇ ಅವರ ಜೊತೆ ನಿಂತಿದ್ದಾರೆ.ಇದೊಂದು ಬಯಲು ಸೀಮೆಯ ಕಥೆ ಹೇಳ ಹೊರಟಿರುವ ಸಿನಿಮಾ ತುಂಬಾ ಕುತುಹಲಕಾರಿ ವಿಷಯವನ್ನ ಹುಟ್ಟುಹಾಕಿದೆ,ಸಿನಿಮಾ ತಾರೆಗಳ ಸಾಲಿನಲ್ಲಿ ಶರಣು ಪಟ್ಟೆದಾರ್ ರವರ ಹೆಸರು ತುಂಬಾ ಜೋರಾಗಿ ಕೇಳಿಬರುತ್ತಿದೆ ನಮ್ಮ ಉತ್ತರ ಕರ್ನಾಟಕದ ಈ ಪ್ರತಿಭೆ ಇಂದು ಗಾಂಧಿನಗರದಲ್ಲಿ ತನ್ನದೇ ಆದ ಕಟೌಟ್ ನಿಲ್ಲಿಸಲು ರೆಡಿಯಾಗಿ ನಿಂತಿದ್ದಾರೆ.ಇವರ ಲುಕ್ ಗೆ ಅನೇಕ ಜನರು ಫಿದಾ ಆಗಿದ್ದಾರೆ ಟ್ರೈಲರ್ ನಲ್ಲೆ ಸಖ್ಖತ್ ಲುಕ್ ನಲ್ಲೆ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಇವರದೇ ಹವಾ ಜೋರಾಗಿದೆ. ಇದೇ ಮಾರ್ಚ್ ೧ ಕ್ಕೆ ಯಾರು ಮಿಸ್ ಮಾಡ್ಕೋಬೇಡಿ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಹೋಗಿ ಸಿನಿಮಾ ನೋಡಿ ನಮ್ಮ ಗಿರಿನಾಡಿನ ಈ ಪ್ರತಿಭೆಗಳನ್ನು ಆಶಿರ್ವದಿಸಿ.
ವರದಿ:ರಾಜೇಂದ್ರ.ಎನ್.ಕೊಲ್ಲೂರು