ಭದ್ರಾವತಿ:ಸಂಶೋಧನಾ ಬುದ್ಧಿಶಕ್ತಿಯಿಂದ ಭಾರತಕ್ಕೆ ಕೇವಲ ಇನ್ನೂರು ರೂಪಾಯಿಯ ಉಪಕರಣದಲ್ಲಿ ವಿಶ್ವದ ಶ್ರೇಷ್ಠ ನೊಬೆಲ್ ಪ್ರಶಸ್ತಿಯನ್ನು ಭೌತಶಾಸ್ತ್ರಕ್ಕೆ ತಂದುಕೊಟ್ಟ ಸರ್.ಸಿ.ವಿ ರಾಮನ್ ರವರು ಅದ್ಭುತ ದೇಸೀಯ ವಿಜ್ಞಾನಿ ಎಂದು ವಿಜ್ಞಾನ ಶಿಕ್ಷಕ ಹರೋನಹಳ್ಳಿ ಸ್ವಾಮಿ ತಿಳಿಸಿದರು.
ಭದ್ರಾವತಿಯ ಹಿರಿಯೂರು ಗ್ರಾಮದ ಎಸ್‌ಬಿಎಂಎಂಆರ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸರ್ ಸಿವಿ ರಾಮನ್ ರವರ ಬದುಕು ಮತ್ತು ಸಾಧನೆಯನ್ನು ಕುರಿತು ಮಾತನಾಡುತ್ತಾ ಸ್ವಂತ ಅಧ್ಯಯನ,ಅಸಾಧಾರಣ ಸ್ವ ಸಾಮರ್ಥ್ಯ,ಅಪಾರ ಆತ್ಮವಿಶ್ವಾಸ,ಪರಿಶ್ರಮ ಫಲದಿಂದ,ಪ್ರಕೃತಿ ಆರಾಧಕರಾಗಿ,ಅದರ ರಹಸ್ಯಗಳನ್ನು ಅರಿತು ಪರಿಶೋಧಿಸಿ,ಪರೀಕ್ಷಿಸಿ,ವಿಮರ್ಶಿಸಿ,ಸ್ವತಂತ್ರ ಸಂಶೋಧನಾ ಬುದ್ಧಿಶಕ್ತಿ ಹೊಂದಿದ್ದ ಸಿ ವಿ ರಾಮನ್ ರವರ ಬದುಕು ಸಾಧನೆ,ಸಂಶೋಧನೆ,ದೇಶಪ್ರೇಮ ನಮ್ಮ ಭಾರತೀಯರಿಗೆ,ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾದದು.
ರಾಮನ್ ರವರು ತಮ್ಮ ತಂದೆಯವರ ಸಂಗೀತ ಮತ್ತು ಪುಸ್ತಕಗಳಿಂದ ಪ್ರಭಾವಿತರಾದವರು.ಕೇವಲ 20 ವರ್ಷಕ್ಕೆ ಎಫ್ ಸಿ ಎಸ್ ಪರೀಕ್ಷೆ ಪಾಸ್ ಮಾಡಿ ಕಲ್ಕತ್ತಾದ ಹಣಕಾಸು ಇಲಾಖೆಯಲ್ಲಿ ಅಧಿಕಾರಿಯಾದರು ಆದರೆ ರಾತ್ರಿ ಹಗಲು ತಮ್ಮ ವೃತ್ತಿಯ ಜೊತೆಗೆ ವಿಜ್ಞಾನದ ಸಂಶೋಧನೆಯಲ್ಲಿ ತೊಡಗಿಕೊಂಡವರು.ಬೆಳಕಿನ ಚದುರುವಿಕೆಯ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ವಿಜ್ಞಾನಿ ನಮ್ಮ ಸಿವಿ ರಾಮನ್ ರವರು.
ಕಲ್ಕತ್ತಾದಿಂದ ಬೆಂಗಳೂರಿಗೆ ಬಂದು ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾಗಿ ದೊಡ್ಡ ಸಾಧನೆ ಮಾಡಿ,ನಂತರ ಬೆಂಗಳೂರಿನಲ್ಲಿ ರಾಮನ್ ಸಂಶೋಧನಾ ಕೇಂದ್ರ ಸ್ಥಾಪಿಸಿ ವಿಶ್ವಮಟ್ಟದ ವಿಜ್ಞಾನ ಸಂಶೋಧನೆ ನಡೆಯುವಂತೆ ಮಾಡಿದ ಕೀರ್ತಿ ರಾಮನ್ ರವರಿಗೆ ಸಲ್ಲುತ್ತದೆ.ಇವರ ಬದುಕು ಮತ್ತು ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗುತ್ತದೆ. ಪ್ರಕೃತಿಯನ್ನು ಆರಾಧಿಸುತ್ತಿದ್ದ ರಾಮನ್ ನೋಡ ನೋಡುತ್ತಲೇ ಕುತೂಹಲಗೊಂಡು ಯೋಚಿಸಿ ಸಂಶೋಧನೆಯಲ್ಲಿ ತೊಡಗುವವರಾಗಿದ್ದರು ಎಂದು ಹರೋನಹಳ್ಳಿಸ್ವಾಮಿ ತಿಳಿಸಿದರು.
ವಿಜ್ಞಾನ ಶಿಕ್ಷಕಿ ಜಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಭೂಮಿಕಾ ಸ್ವಾಗತಿಸಿ,ಧನಲಕ್ಷ್ಮಿ ವಂದಿಸಿದರು.ಧನುಶ್ರೀ ಕಾರ್ಯಕ್ರಮ ನಿರೂಪಿಸಿದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ