ಬಾಗಲಕೋಟೆ:ನಿರಂತರ ಅಧ್ಯಯನ ರೂಢಿಸಿಕೊಳ್ಳುವ ಕವಿಗಳು ಸತ್ವಯುತ ಕಾವ್ಯ ರಚಿಸಬೇಕು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾವ್ಯ ಪ್ರೇರಣೆ ನೀಡುತ್ತದೆ ಮಾನವ ಅಂತರಂಗದ ಶುಚಿತ್ವ ಕ್ಕೆ ಕಾವ್ಯ ಮುಖ್ಯವಾಗಬಲ್ಲದು ಎಂದು ಬಾಗಲಕೋಟೆಯ ಕವಿ ಶಿಕ್ಷಕ ಶಿವಾನಂದ ಆದಾಪುರ ಹೇಳಿದರು.
ಅವರು ಮುಂದುವರೆದು ಕವಿಗಳಾದವರಿಗೆ ಪ್ರೇಮ ಮಾನ್ವಿಯತೆ ಅವಶ್ಯವೆಂದು ವಿವರಿಸಿದರು.
ಅತಿಥಿ ಸ್ಥಾನವನ್ನು ಪತ್ರಕರ್ತ ಜಗದೀಶಹದ್ಲಿ ವಹಿಸಿ ಮಾತನಾಡಿ ಪಂಪ,ರನ್ನ,ಹರಿಹರ ರಾಘವಂಕರ೦ತ ಕವಿಗಳು ತಮ್ಮ ಕಾವ್ಯದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು ಅವರು ರಚಿಸಿದ ಕಾವ್ಯ ಅಮರ ಕಾವ್ಯ ಎಂದು ಅಭಿಪ್ರಾಯಪಟ್ಟರು.
ಸಾಹಿತಿಗಳಾದ ಗುರುಸ್ವಾಮಿ ಗಣಾಚಾರಿ ಎಸ್ ಎಸ್ ಹಳ್ಳುರ ಎಸ್ ಆರ್ ಪಟ್ಟಣಶೆಟ್ಟಿ ನಾಗರಾಜ್ ಹೊನ್ನೊಟ್ಟಿಗೆ ಎಚ್ಎಸ್ ಕಾ ಳೆ ಮುಂತಾದವರು ಸ್ವರಚಿತ ಕವನವನ್ನು ವಾಚಿಸಿದರು
ಎಸ್ಎಸ್ ಹಳ್ಳೂರ ಸ್ವಾಗತಿಸಿದರು.
ಹೆಚ್ಎಸ್ ಕಾಳಿ ವಂದಿಸಿದರು,ನಾಗರಾಜ್ ಹೊನ್ನುಟಿಗಿ ಕಾರ್ಯಕ್ರಮ ನಿರೂಪಿಸಿದರು,ಆಸಕ್ತರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.