ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಾದಪ್ಪನ ದರ್ಶನಕ್ಕೆ ಭಕ್ತರ ಪಾದ ಯಾತ್ರೆ

ಹನೂರು:ಕನಕಪುರ ಸಂಗಮದ ಕಾವೇರಿ ನದಿ ತೀರದಲ್ಲಿ ಪಾದಯಾತ್ರೆಗೆ ಬರುತ್ತಿರುವ ಮಲೆ ಮಹದೇಶ್ವರ ಭಕ್ತಾಧಿಗಳಿಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಭಕ್ತರು ಜೊತೆ ನದಿ ದಾಟಿ ಅಲ್ಲಿನ ವ್ಯವಸ್ಥೆಯನ್ನು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಹಾಶಿವರಾತ್ರಿ ಹಬ್ಬಕ್ಕೂ ಮುನ್ನ ರಾಜ್ಯದ ನಾನಾ ಭಾಗಗಳಿಂದ ಕಾವೇರಿ ನದಿ ದಾಟಿ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಶುಭ ಕೋರಲು ಕಾವೇರಿ ನದಿ ಸಂಗಮಕ್ಕೆ ತೆರಳಿ, ಭಕ್ತರ ಜೊತೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಕಾವೇರಿ ನದಿಯನ್ನು ಭಕ್ತರ ಜೊತೆ ತಾವೂ ನದಿ ಸಹ ದಾಟುವ ಮೂಲಕ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿ ಭಕ್ತರಿಗೆ ಆಶೀರ್ವದಿಸಿ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತರು ಕಾವೇರಿ ನದಿಯನ್ನು ದಾಟುವುದರಿಂದ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿ ಅವರ ಜೊತೆ ಕಾವೇರಿ ನದಿಯನ್ನು ದಾಟಿದ್ದೇನೆ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ ಬೆಟ್ಟಗುಡ್ಡಗಳ ಅರಣ್ಯ ಪ್ರದೇಶದಿಂದ ಕೂಡಿರುವ ಮಧ್ಯಭಾಗದಲ್ಲಿ ಬರುವ ಸಂಗಮ ಕಾವೇರಿ ನದಿ ದಾಟುತ್ತಿರುವುದು ಭಕ್ತರು ಎಚ್ಚರಿಕೆಯಿಂದ ತಮ್ಮ ಜೊತೆಯಲ್ಲಿ ಬಂದಿರುವ ಮಕ್ಕಳು ಮತ್ತುಕುಟುಂಬದವರ ಜೊತೆ ಬರುತ್ತಿರುವುದು ಹಲವಾರು ವರ್ಷಗಳಿಂದ ವಾಡಿಕೆಯಾಗಿದೆ.

ಭಕ್ತರು ಸ್ವಚ್ಛತೆಗೆ ಆದ್ಯತೆ ನೀಡಿ:ಮಲೆ ಮಾದೇಶ್ವರ ಬೆಟ್ಟಕ್ಕೆ ಬರುತ್ತಿರುವ ಮಾದಪ್ಪನ ಭಕ್ತರು ಅರಣ್ಯ ಪ್ರದೇಶ ಕಾಲು ದಾರಿಯಲ್ಲಿ ಕಾವೇರಿ ನದಿ ದಾಟಿ ಬರುವ ವೇಳೆಯಲ್ಲಿ ತಾವು ತರುವ ತಿಂಡಿ ತಿನಿಸು ಮತ್ತು ಕುಡಿಯಲು ನೀರು ಬಳಸಿ ತಾವು ಬಿಸಾಡುವ ತ್ಯಾಜ್ಯಗಳನ್ನು ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಅರಣ್ಯವನ್ನು ಸ್ವಚ್ಛತೆ ಕಾಪಾಡಿ ಇದರಿಂದಾಗಿ ಬರಬಿಸಿಲಿನಿಂದ ಒಣಗಿರುವ ಅರಣ್ಯದಲ್ಲಿ ಪಾಣಿಪಕ್ಷಿಗಳು ಪ್ಲಾಸ್ಟಿಕ್ ಮತ್ತು ಇನ್ನಿತರ ಪದಾರ್ಥಗಳನ್ನು ತಿಂದು ಪ್ರಾಣ ಹಾನಿ ಕಳೆದುಕೊಳ್ಳುವ ಮುನ್ನ ಎಚ್ಚರಿಕೆವಹಿಸಿ ಎಂದು ಭಕ್ತರಿಗೆ ಸಲಹೆ ನೀಡಿದರು.

ಮುಂಜಾಗ್ರತ ಕ್ರಮವಾಗಿ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು ಶ್ರೀಗಳು ಸಂಗಮದಲ್ಲಿ ಕಾವೇರಿ ನದಿಯನ್ನು ಭಕ್ತರ ಜೊತೆ ದಾಟಿ ನಂತರ ಚಾಮರಾಜನಗರ,ರಾಮನಗರ ಜಿಲ್ಲಾಡಳಿತ,ಅರಣ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ,ಕನಕಪುರದ ಮಹದೇವನಾಯ್ಕ ಹಾಗೂ ಅನೇಕ ಭಕ್ತರ ಅಲ್ಲಲ್ಲಿ ದಾಸೋಹ,ಮಜ್ಜಿಗೆ,ಪಾನಕ ವ್ಯವಸ್ಥೆಯು ಅಚ್ಚುಕಟ್ಟಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ