ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದ ಹಳ್ಳೆರ್ ದೊಡ್ಡಿಯಲ್ಲಿ ನಂದಪ್ಪ ಹಳ್ಳಿಗೌಡ ಎಂಬುವರ ಮೊಮ್ಮಗ ಗಂಗಾಧರ ಎಂಬ 2 ವರ್ಷದ ಬಾಲಕ ಹಾವೂಕಚ್ಚಿ ಮೃತ ಪಟ್ಟ ಸುದ್ದಿ ಕೇಳಿದ ಶಾಸಕರು ನಂದಪ್ಪ ಹಳ್ಳಿಗೌಡರ ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು. ಮತ್ತು ಅಲ್ಲಿ ನೆರೆದಿರುವ ಹಳ್ಳೆರ ದೊಡ್ಡಿ ಜನರು ಇನ್ನೂ ವರೆಗೂ ಈ ಅರಣ್ಯದಲ್ಲಿ ಇರುವ ನಮ್ಮ ದೊಡ್ಡಿಗೆ ಯಾವ ಪಕ್ಷದ ಕಾರ್ಯಕರ್ತರು ಮತ್ತು ಮಾಜಿ ಶಾಸಕರಾದ ವೆಂಕಟಪ್ಪ ನಾಯಕರು ಈ ನಮ್ಮ ಕಷ್ಟವನ್ನು ನೋಡಲು ಬಂದಿಲ್ಲ ಹಾವು ಹಚ್ಚಿ ಮೃತಪಟ್ಟ ಸುದ್ದಿ ತಿಳಿದ ನಮ್ಮ ಶಾಸಕರು ಮನೆಗೆ ಬೇಟಿ ನೀಡಿ ಈ ದೊಡ್ಡಿಯಲ್ಲಿ ಇರುವ ಜನರು ತಿರುಗಾಡಲು ತುಂಬಾ ಕಷ್ಟವಾಗುತ್ತೆ ನಮಗೆ ದಾರಿ ಮಾಡಿಸಿಕೊಡಿ ನಾವು ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಯಾರು ನಮ್ಮ ಕಡೆ ಬಂದು ಈ ನಮ್ಮ ಕಷ್ಟವನ್ನು ಕೇಳಿಲ್ಲ ನೀವು ಬಂದು ನಮಗೆ ಕಷ್ಟಕೆಲಿದ್ದಕ್ಕೆ ತುಂಬಾ ಸಂತೋಷ ವಾಯಿತು. ನಾವು ಕೂಡ ನಿಮ್ಮ ಅಭಿವೃದ್ದಿ ಕಾರ್ಯ ಮೆಚ್ಚಿ ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗುತ್ತೇವೆ ಎಂದು ಶಾಸಹರ ಸಮ್ಮುಖದಲ್ಲಿ ಹೇಳಿದರು ಸುಮಾರು ನೂರಕ್ಕೂ ಹೆಚ್ಚು ಜನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದೇವೆ ಎಂದು ಮನೋಜ ಹಳ್ಳಿಗೌದ ಹೇಳಿದರು.
ಕರುನಾಡ ಕಂದ ವರದಿಗಾರರು-ಶರಣಮ್ಮ.ಎಚ್. ದೊಡ್ಡಮನಿ.
